ವಿರಾಟ್​ ಅಬ್ಬರಕ್ಕೆ ಹಲವು ದಾಖಲೆಗಳು ಉಡೀಸ್​..!

ಪುಣೆ: ಸೌತ್​ ಆಫ್ರಿಕಾ ವಿರುದ್ದದ 2ನೇ ಟೆಸ್ಟ್​ ಪಂದ್ಯ ಸದ್ಯ ಭಾರತ ತಂಡದ ಬಿಗಿ ಹಿಡಿತದಲ್ಲಿ ಸಾಗಿದೆ. ಆದರೆ ಟೀಮ್ ಇಂಡಿಯಾದ ನಾಯಕನಾಗಿ 50ನೇ ಟೆಸ್ಟ್​ ಪಂದ್ಯವನ್ನು ಮುನ್ನಡೆಸುತ್ತಿರುವ ಕ್ಯಾಪ್ಟನ್ ಕೊಹ್ಲಿ, ದಾಖಲೆಯ ಪಂದ್ಯದಲ್ಲೂ ಹೊಸ ದಾಖಲೆ ನಿರ್ಮಿಸಿದ್ದಾರೆ.

ಟೆಸ್ಟ್​, ಏಕದಿನ, ಟಿ20 ಫಾರ್ಮೆಟ್​ನಲ್ಲಿ ಬ್ಯಾಟ್ಸ್​ಮನ್ ಆಗಿ ಸಕ್ಸಸ್​ ಕಂಡಿರುವ ವಿರಾಟ್​ ಕೊಹ್ಲಿ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಟೀಮ್ ಇಂಡಿಯಾದ ಸಾರಥ್ಯ ವಹಿಸಿಕೊಂಡ ಬಳಿಕ ನಾಯಕನಾಗಿ ಭಾರತಕ್ಕೆ ಹಲವು ದಿಗ್ವಿಜಯಗಳನ್ನು ತಂದುಕೊಟ್ಟಿದ್ದಾರೆ. ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯವನ್ನು ಮುನ್ನಡೆಸುತ್ತಿರುವ ವಿರಾಟ್ ನಾಯಕನಾಗಿ ದಾಖಲೆಯ​ 50ನೇ ಟೆಸ್ಟ್​ ಪಂದ್ಯದಲ್ಲೂ ಹಲವು ದಾಖಲೆಗಳನ್ನು ಪುಡಿಗೆಟ್ಟಿದ್ದಾರೆ.

4ನೇ ವಿಕೆಟ್​ಗೆ ಕೊಹ್ಲಿ-ರಹಾನೆ ದಾಖಲೆಯ ಜೊತೆಯಾಟ..!

ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 3 ವಿಕೆಟ್​ ನಷ್ಟಕ್ಕೆ 273 ರನ್​ಗಳಿಸಿ ಸುಸ್ಥಿತಿಯಲ್ಲಿ ಇತ್ತು. ದಿನದಾಟದ ಅಂತ್ಯಕ್ಕೆ 63 ರನ್ ಗಳಿಸಿ 2ನೇ ವಿಕೆಟ್​ ಕಾಯ್ದುಕೊಂಡಿದ್ದ ಕ್ಯಾಪ್ಟನ್​ ಕೊಹ್ಲಿ. 2ನೇ ದಿನದಾಟದಲ್ಲಿವೂ ತಮ್ಮ ಬ್ಯಾಟಿಂಗ್ ಆರ್ಭಟ ಮುಂದುವಸಿದರು. ಅದರಲ್ಲೂ ನಾಲ್ಕನೇ ವಿಕೆಟ್​ಗೆ ರಹಾನೆ-ಕೊಹ್ಲಿ ಜೋಡಿ ದಾಖಲೆಯ 150 + ರನ್ ಜೊತೆಯಾಟದಲ್ಲಿ ಬಾಗಿಯಾದರು. ಈ ಮೂಲಕ ಸೌತ್​ ಆಫ್ರಿಕಾ ವಿರುದ್ಧ ನಾಲ್ಕನೇ ವಿಕೆಟ್​ಗೆ ಹೆಚ್ಚು ರನ್ ಜೊತೆಯಾಟವಾಡಿದ ಜೋಡಿ ಎಂಬ ಹಿರಿಮೆಗೆ ಪಾತ್ರರಾಗೂವ ಮೂಲಕ ರಾಹುಲ್ ದ್ರಾವಿಡ್​-ಸೌರವ್​ ಗಂಗೂಲಿ ಹೆಸರಿನಲ್ಲಿದ್ದ ದಾಖಲೆಯನ್ನು ಬ್ರೇಕ್ ಮಾಡಿದರು.

63 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ನಿನ್ನೆಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 2019ರಲ್ಲಿ ಕೊಹ್ಲಿ ಬಾರಿಸಿದ ಮೊದಲ ಟೆಸ್ಟ್‌ ಶತಕ ಇದಾಗಿದೆ. ಅಲ್ಲದೆ ಟೆಸ್ಟ್​​ ವೃತ್ತಿ ಜೀವನದ​ 26ನೇ ಶತಕ ದಾಖಲಿಸಿದರು. ಅಲ್ಲದೆ ಅತಿ ವೇಗವಾಗಿ 26 ಟೆಸ್ಟ್‌ ಶತಕ ಬಾರಿಸುವ ಮೂಲಕ ಸುನೀಲ್​ ಗವಾಸ್ಕರ್‌ ಅವರ ದಾಖಲೆ ಬ್ರೇಕ್ ಮಾಡಿದರು. ಗವಾಸ್ಕರ್ ಈ ಸಾಧನೆ ಮಾಡೋಕೆ 144 ಇನಿಂಗ್ಸ್‌ಗಳನ್ನು ಆಡಿದರೆ, ಕೊಹ್ಲಿ ಕೇವಲ 138 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್​ ಕ್ರಿಕೆಟ್​ನ ವೃತ್ತಿ ಜೀವನದ 26ನೇ ಶತಕ ಬಾರಿಸಿದ ಕೊಹ್ಲಿ ಟೀಮ್ ಇಂಡಿಯಾ ನಾಯಕನಾಗಿ 19ನೇ ಟೆಸ್ಟ್​ ಶತಕ ಬಾರಿಸಿದ ದಾಖಲೆ ಬರೆದರು. ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್‌ ಅವರ ಶತಕಗಳ ದಾಖಲೆಯನ್ನೂ ಸರಿಗಟ್ಟಿದ್ದಾರೆ.
ಟೆಸ್ಟ್​ ನಾಯಕನಾಗಿ ಹೆಚ್ಚು ಶತಕ..!

ಆಟಗಾರ ಶತಕ

ಗ್ರೇಮ್ ಸ್ಮಿತ್​ 25

ವಿರಾಟ್​ ಕೊಹ್ಲಿ 19

ರಿಕಿ ಪಾಂಟಿಂಗ್ 19

ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಸೌತ್​ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 25 ಶತಕ ಬಾರಿಸಿದರೆ, ಟೀಮ್ ಇಂಡಿಯಾದ ಕ್ಯಾಪ್ಟನ್ ಕೊಹ್ಲಿ, ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ತಲಾ 19 ಶತಕ ಬಾರಿಸಿದ್ದಾರೆ..
ನಾಯಕನಾಗಿ ಅತಿ ಹೆಚ್ಚು 150+ ರನ್

ವಿರಾಟ್​ ಕೊಹ್ಲಿ 9

ಡಾನ್ ಬ್ರಾಡ್ಮನ್ 8

ಬ್ರಿಯಾನ್ ಲಾರಾ 7

ಇನ್ನು ನಾಯಕನಾಗಿ ಅತಿ ಹೆಚ್ಚು ಬಾರಿ 150+ ರನ್ ಹೊಡೆದಿರುವ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಇದ್ದರೆ, 8 ಬಾರಿ 150+ ರನ್ ದಾಖಲಿಸಿದ ಬ್ರಾಡ್ಮನ್ ದಾಖಲೆ ಸಹ ಸರಿಗಟ್ಟಿದ್ದಾರೆ.
ಟೆಸ್ಟ್​ನಲ್ಲಿ 7ನೇ ದ್ವಿಶತಕ ಸಿಡಿಸಿದ ವಿರಾಟ್​ ಕೊಹ್ಲಿ

ತಾಳ್ಮೆಯ ಆಟವಾಡಿ ಬೌಲರ್​ಗಳಿಗೆ ಬೆಂಡೆತ್ತಿದ ವಿರಾಟ್​ ಕೊಹ್ಲಿ, 144ನೇ ಓವರ್​ನ 4ನೇ ಎಸೆತದಲ್ಲಿ 2 ರನ್ ಕದಿಯುವ ಮೂಲಕ 2ನೇ ಟೆಸ್ಟ್​ ಪಂದ್ಯದಲ್ಲಿ ದ್ವಿಶತಕ ಬಾರಿಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 7 ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಜೊತೆಗೆ 6 ಬಾರಿ ದ್ವಿಶತಕ ಸಿಡಿಸಿದ ಸಚಿನ್, ಸೆಹ್ವಾಗ್, ರಿಕಿ ಪಾಂಟಿಂಗ್, ಮರ್ವಾನ್ ಅಟ್ಟಪಟ್ಟು, ಜಾವೇದ್ ಮಿಯಾಂದಾದ್ ಹಾಗೂ ಯೂನಿಸ್ ಖಾನ್ ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ವೃತ್ತಿ ಜೀವನದ ಮೊದಲ 41 ಪಂದ್ಯಗಳಲ್ಲಿ ದ್ವಿಶತಕ ಬಾರಿಸದ ವಿರಾಟ್ ಕೊಹ್ಲಿ ಕೊನೆಯ 40 ಪಂದ್ಯಗಳಲ್ಲೇ ಏಳು ದ್ವಿಶತಕ ಸಿಡಿಸಿರುವುದು ವಿಶೇಷ.

ಈ ಪಂದ್ಯಕ್ಕೂ ಮುನ್ನ 6800 ರನ್‌ ಗಳಿಸಿದ್ದ ಕೊಹ್ಲಿ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 7000 ರನ್‌ಗಳ ಮೈಲುಗಲ್ಲು ತಲುಪಿದರು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ಸರ್‌ ಡಾನ್‌ ಬ್ರಾಡ್ಮನ್‌ ಮತ್ತು ಸ್ಟೀವ್‌ ಸ್ಮಿತ್​​ರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. 138 ಇನಿಂಗ್ಸ್‌ಗಳಲ್ಲಿ 7 ಸಾವಿರ ರನ್‌ಗಳ ಮೈಲುಗಲ್ಲು ಮುಟ್ಟುವ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನ ಅಲಂಕರಿಸಿದ್ದಾರೆ. ಒಟ್ಟಿನಲ್ಲಿ ಈ ಪಂದ್ಯ ವಿರಾಟ್​ ಕೊಹ್ಲಿಯ ಪಾಲಿನ ದಾಖಲೆ ಪಂದ್ಯವಾಗಿ ಮಾರ್ಪಟ್ಟಿತು.

ಸಂತೋಷ್​ – ಸ್ಪೋರ್ಟ್ಸ್​ ಬ್ಯೂರೋ ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *