ಸುಮಲತಾ ಅಂಬರೀಶ್​ಗೆ ತಿರುಗೇಟು ನೀಡಿದ ಶಿವರಾಮೇಗೌಡ..!

ಮಂಡ್ಯ: ಸುಮಲತಾ ಹೆಸರೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ನನಗೆ ಬಂದಿಲ್ಲ. ಅವರು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ ನಾನು ಫಸ್ಟ್ಲಾಸ್ ಆಗಿ ರಾಜಕೀಯ ಮಾಡಿದ್ದೇವೆ ಎಂದು ಮಾಜಿ ಸಂಸದ ಶಾಸಕ ಶಿವರಾಮೇಗೌಡ ಅವರು ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡಿದರು.

ಇತ್ತೀಚಿಗೆ ಸುಮಲತಾ ಅವರು ನನ್ನ ಹೇಸರೇಳಿದ್ರೆ ಮಾರ್ಕೆಟ್ ಕಡಿಮೆ ಆಗುತ್ತದೆ ಎಂಬ ಹೇಳಿಕೆಗೆ ಜಿಲ್ಲೆಯ ನಾಗಮಂಗಲದಲ್ಲಿ  ಮಾತನಾಡಿದ ಅವರು, ರೈತರು ಸಮಸ್ಯೆ ಹೇಳಿಕೊಂಡಾಗ ಜನರ ಮುಂದೆ ವಿಚಾರ ಇಟ್ಟಿದ್ದೇನೆ. ಸುಮಲತಾ ಅವರ ವೈಯಕ್ತಿಕ ವಿಚಾರ ಹೇಳಿಲ್ಲ. ಒಂದು ವೇಳೆ ಹೇಳಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಅವರು ಸಂಸದೆ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುಮಲತಾ ಅವ್ರು ಭಾಷಣ ಮಾಡದೆ, ಗುದ್ದಲಿ ತೆಗೆದುಕೊಂಡು ಹಗೆಯುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ ಅವರು, ಮೈಶುಗರ್ ಕಾರ್ಖಾನೆಗೆ ಹಣ ನೀಡಿದರೆ ಅಧ್ಯಕ್ಷರು ಜೇಬು ತುಂಬುತ್ತದೆ. ಹಳೇ ಕಾರ್ಖಾನೆಗೆ ಹಣ ನೀಡುವ ಬದಲು, ಹೊಸ ಕಾರ್ಖಾನೆ ಹಣ ನೀಡುವಂತೆ ಒತ್ತಾಯಿಸಿದ್ದೆ ಎಂದರು.

ಇನ್ನು ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂಬ ಸುಮಲತಾ ಆರೋಪ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಿಂದ ತಪ್ಪಾಗಿದೆ. ನೀವು ಅಧಿಕಾರದಲ್ಲಿದ್ದೀರಿ ಸಮಸ್ಯೆ ಬಗೆಹರಿಸಿ. ಅದನ್ನು ಬಿಟ್ಟು ಕೆಸರೆರಚಾಡಿ ಮಾಡಿದರೆ ಪ್ರಯೋಜನವಿಲ್ಲ. ಸಂಸದರೂ ತಮ್ಮ ಕೆಲಸ ಮಾಡಬೇಕು, ಶಾಸಕರೂ ತಮ್ಮ ಕೆಲಸ ಮಾಡಬೇಕು ಎಂದು ಅವರು ಸುಮಾಲತಾಗೆ ತಿರುಗೇಟು ನೀಡಿದರು.

ಸುಮಲತಾ ಅವರು ಕೆ.ಆರ್.ಪೇಟೆಗೆ ಹೋದರೆ ಬಿಜೆಪಿ ಜೊತೆ, ನಾಗಮಂಗಲಕ್ಕೆ ಬಂದರೆ ಕಾಂಗ್ರೆಸ್ ಜೊತೆ ಹೋಗ್ತಾರೆ, ತಮ್ಮದು ಯಾವ ಪಾರ್ಟಿ ಎಂದು ತೀರ್ಮಾನ ಮಾಡಲಿ, ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅವರು ಸ್ವಾಭಿಮಾನದ ಹೆಸರಿನಲ್ಲಿ ಹೋರಾಡಿದರು. ಈಗ ಸುಮಲತಾ ಅವರು ಯಾರಿಗೆ ಎಷ್ಟೆಷ್ಟು ಪಾಲು ಕೊಡ್ತಾರೆ ನೋಡಬೇಕು ಎಂದು ಶಿವರಾಮೇಗೌಡ ಅವರು ಸುಮಲತಾ ಅವರನ್ನು ಅಣುಕಿಸಿದರು.

ಅಲ್ಲದೇ ಸುಮಲತಾ ಅವರನ್ನು ಕರೆದುಕೊಳ್ಳಲು ಕಾಂಗ್ರೆಸ್, ಬಿಜೆಪಿಯವರು ಕಾಯ್ದುಕುಳಿತಿದ್ದಾರೆ. ಬೇಕಾದರೆ ಅವರ ಮನೆಯಲ್ಲಿ ಹೋಗಿ ಊಟ ಮಾಡಲಿ, ನಾವು ಜೆಡಿಎಸ್ ಕಚೇರಿಗೆ ಕರೆಯುವುದಿಲ್ಲ ಎಂದು ಚುನಾವಣೆ ಸಮಯದಲ್ಲಿ ಜೆಡಿಎಸ್ ನವರು ನನ್ನ ಪರ ಕೆಲಸ ಮಾಡಿದ್ದಾರೆ ಅವರು ಕರೆದರೆ ಜೆಡಿಎಸ್ ಕಚೇರಿಗೂ ಹೋಗುತ್ತೇನೆ ಎಂಬ ಸುಮಲತಾ ಹೇಳಿಕೆ ಸ್ಪಷ್ಠನೆ ನೀಡಿದರು.

Recommended For You

About the Author: shreeshail Pujari

Leave a Reply

Your email address will not be published. Required fields are marked *