ಎಲ್ಲೋ ತಲೆಮರೆಸಿಕೊಂಡು ಓಡಿ ಹೋಗಿದ್ದಾರೆ – ಶ್ರೀನಿವಾಸ್​​ ಪ್ರಸಾದ್ ವ್ಯಂಗ್ಯ

ಮೈಸೂರು: ರಾಹುಲ್ ಗಾಂಧಿ ಎಲ್ಲೋ ತಲೆಮರೆಸಿಕೊಂಡು ಓಡಿ ಹೋಗಿದ್ದಾರೆ. ಪಕ್ಷ ನಿಭಾಯಿಸಲಾಗದೆ ಅಧ್ಯಕ್ಷ ಸ್ಥಾನವನ್ನು ಬಿಟ್ಟಿದ್ದಾರೆ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಶನಿವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಐಟಿ ದಾಳಿ ಬಿಜೆಪಿ ಪ್ರೇರಿತ ಎಂಬ ಕಾಂಗ್ರೆಸ್​ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡಿ ದೇಶದಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ರಾಹುಲ್ ಗಾಂಧಿ ಎಲ್ಲೋ ತಲೆಮರೆಸಿಕೊಂಡು ಓಡಿ ಹೋಗಿದ್ದಾರೆ. ಪಕ್ಷ ನಿಭಾಯಿಸಲಾಗದೆ ಅಧ್ಯಕ್ಷ ಸ್ಥಾನವನ್ನು ಬಿಟ್ಟಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ. ಆಂತರಿಕ ಕಚ್ಚಾಟಗಳು ಕಾಂಗ್ರೆಸ್ ಪಕ್ಷದೊಳಗೆ ಹೆಚ್ಚಾಗಿವೆ. ಇಷ್ಟಾದರೂ ಕಾಂಗ್ರೆಸ್‍ಗೆ ಬುದ್ಧಿ ಬಂದಿಲ್ಲ. ಇನ್ನಾದರು ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ. ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಲಿ ಎಂದು ಐಟಿ ದಾಳಿ ಬಿಜೆಪಿ ಪ್ರೇರಿತ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ತಿಳಿಸಿದ ಅವರು, ಎರಡು ದಿನ ಐಟಿಯವರು ಪರಮೇಶ್ವರ್ ಮನೆಯಲ್ಲಿ ಊಟ ಮಾಡೋಕೆ ಹೋಗಿದ್ದರು. ಅವರ ಬಗ್ಗೆ ದೂರು ಬಂದ ಕಾರಣ ದಾಖಲೆಗಳನ್ನು ಸಂಗ್ರಹಿಸಿ ದಾಳಿ ಮಾಡಿದ್ದಾರೆ.
ಇದರಲ್ಲಿ ರಾಜಕೀಯ ಎಲ್ಲಿಂದ ಬಂತು. ಐಟಿ ಇಡಿಯವರು ದೇಶದಲ್ಲಿ ದಿನಕ್ಕೆ ಸಾವಿರಾರು ದಾಳಿ ಮಾಡುತ್ತಾರೆ.ಎಲ್ಲಾ ದಾಳಿಗಳ ಎಲ್ಲಾ ವಿವರವನ್ನು ಎಲ್ಲರಿಗೂ ನೀಡಲಾಗುತ್ತೆ. ಮೂರು ಜನ ಕಾಂಗ್ರೆಸ್ ನವರ ಮೇಲೆ ದಾಳಿ ಮಾಡಿದ್ದ ಕೂಡಲೇ.
ಇದು ರಾಜಕೀಯ ಪ್ರೇರಿತ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ನಂತರ ತಿಳಿಸಿದ ಅವರು ನಾನು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ತುಂಬ ಮುಕ್ತವಾಗಿ ಬರ ಪರಿಹಾರದ ಹಣವನ್ನು ಕೇಂದ್ರ ಬಿಡುಗಡೆ ಮಾಡಿತ್ತು. ಅದಕ್ಕೆ ಕಾರಣ ನಾನು ಹಾಗೂ ಅಂದಿನ ಕೃಷ್ಟ ಭೈರೆಗೌಡ ಹಾಕಿದ ಪ್ರಯತ್ನ. ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಇದೆ. ಕಂದಾಯ ಮತ್ತು ಕೃಷಿ ಸಚಿವರು ಸಮಗ್ರ ವರದಿ ತೆಗೆದುಕೊಂಡು ಕೇಂದ್ರಕ್ಕೆ ಸಲ್ಲಿಸಿ ಒತ್ತಡ ಹೇರಬೇಕು. ಮುಖ್ಯಮಂತ್ರಿ ಹಾದಿಯಾಗಿ ಎಲ್ಲಾ ಸಚಿವರು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

Recommended For You

About the Author: Sushmitha T S

Leave a Reply

Your email address will not be published. Required fields are marked *