ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಜೈ ಎಂದ ಸಿಎಂ ಬಿಎಸ್​ವೈ

ವಿಧಾನಸೌಧ: ವಿಧಾನಸಭೆದಲ್ಲಿ ಮೂರನೇ ದಿನದ ಕಲಾಪ ಆರಂಭವಾಗಿದೆ. ವಿತ್ತೀಯ ಕಾರ್ಯ ಕಲಾಪ ತರಾತುರಿಯಲ್ಲಿ ಮಾಡಬಾರದು. ಬೇಡಿಕೆಗಳ ಬಗ್ಗೆ ವಿಸ್ತಾರವಾದ ಚರ್ಚೆ ಆಗಬೇಕು ಎಂದು ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ಅವರು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿಯಮಗಳ ಪ್ರಕಾರ ಕನಿಷ್ಠ ೧೫ ದಿನಗಳ ಕಾಲ ನಡೆಯಬೇಕು. ಒಂದೇ ದಿನ ಮಂಡಿಸಿ, ಅದೇ ದಿನ ಅನುಮೋದನೆ ಪಡೆಯುವುದು ಸರಿಯಲ್ಲ, ಇದು ಸದನದ ಹಕ್ಕು ಚ್ಯುತಿ ಆಗುತ್ತದೆ. ಸದನದಲ್ಲಿ ಕ್ರಿಯಾಲೋಪ ಆಗುತ್ತಿದೆ. ಸದನವನ್ನು ರಬ್ಬರ್ ಸ್ಟ್ಯಾಂಪ್ ಆಗಿ ಬಳಸಿಕೊಳ್ಳಬೇಡಿ. ಸದನದ ನಡವಳಿಕೆ ಅಲ್ಲ ಎಂದರು.

ಅಲ್ಲದೇ ಕೃಷ್ಣ ಭೈರೇಗೌಡ ಮಾತಿಗೆ ಉತ್ತರಿಸಿದ ಜೆ.ಸಿ ಮಾಧುಸ್ವಾಮಿ ಅವರು, ನಿಯಮಗಳ ಪ್ರಕಾರ ಸದನ ನಡೆಯಬೇಕು. ಆದರೆ, 15 ದಿನ ನಡೆಸಲು ಸಮಯಾವಕಾಶ ಇಲ್ಲ, ಹಿಂದೆ ಕಡಿಮೆ ಅವಧಿಯಲ್ಲಿ ಹಣಕಾಸು ಅನುಮೋದನೆ ಮಾಡಿದ ನಿದರ್ಶನ ಇದೆ. ಈಗಲೂ ಅದನ್ನು ಮಾಡಬಹುದು ಎಂದು ಅವರು ತಿಳಿಸಿದರು.

ಇನ್ನು 15 ದಿನಗಳಿಗೆ ಕಡಿಮೆ ಇಲ್ಲದಂತೆ ಸದನ ನಡೆಯಬೇಕು. ವಿತ್ತೀಯ ಕಾರ್ಯಕಲಾಪ ನಡೆಸಲು ಸಮಯ ಬೇಕು. ಪ್ರತಿಯೊಂದು ಬೇಡಿಕೆ ಮೇಲೆ ಚರ್ಚೆ ಆಗಬೇಕು ನಂತರ ಬೇಡಿಕೆಗಳಿಗೆ ಅನುಮೋದನೆ ಅಗಬೇಕು ಬಳಿಕ ಮತಕ್ಕೆ ಹಾಕಿ ಅಂಗೀಕಾರ ಪಡೆಯಬಹುದು. ಆದರೆ, ಸರ್ಕಾರ ಸದನದ ನಿಯಮಾವಳಿ ಉಲ್ಲಂಘಿಸುತ್ತಿದೆ. ನಿಯಮ ಉಲ್ಲಂಘಿಸಿದನ್ನು ಒಪ್ಪಿಕೊಳ್ಳಿ ಎಂದು ಅವರು ಪ್ರಸ್ತಾಪ ಮಾಡಿದರು.

ಅಂತೆಯೇ ನಿಮ್ಮ ಅನುಕೂಲಕ್ಕೆ ನಿಯಮಾವಳಿ ತಿರುಚುವುದು ಬೇಡ. ನಾವು ನಿಮಗೆ ಸಹಕಾರ ನೀಡುತ್ತಿದ್ದೇವೆ. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರಿಕೆವಹಿಸಿ ಎಂದು ಸಿದ್ದರಾಮಯ್ಯ ಸಲಹೆಗೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಇನ್ಮುಂದೆ ಆ ರೀತಿ ಆಗದಂತೆ ಎಚ್ಚರವಹಿಸುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *