ನಮ್ಮ ಕ್ಷೇತ್ರಕ್ಕೆ ಸೊನ್ನೆ, ಸೊನ್ನೆ ಅನುದಾನ ಸತೀಶ್ ರೆಡ್ಡಿ ತಿರುಗೇಟು

ವಿಧಾನಸೌಧ: ಬಜೆಟ್ ವಿಚಾರದಲ್ಲಿ ಬೆಂಗಳೂರು ಶಾಸಕ ಕಿತ್ತಾಟ ನಡೆಸಿದರು. ಸದನದ ಕಲಾಪದಲ್ಲಿ ಅಂಕಿ-ಅಂಶಗಳನ್ನು ಹಿಡಿದು ನಿಂತ ಬಿಟಿಎಂ ಲೇಔಟ್​ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಾಮಲಿಂಗಾರೆಡ್ಡಿ ಅವರು, ನಮಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ. ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದೆ ಎಂದು ಅವರು ಪ್ರಸ್ತಾಪ ಮಾಡಿದರು.

ಸದನದ ಕಲಾಪದಲ್ಲಿಂದು ಈ ಕುರಿತು ವಿಷಯ ಪ್ರಸ್ತಾಪ ಮಾಡಿದ ಅವರು, ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳು ಬರುತ್ತದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಕ್ಕ ಅನುದಾನಕ್ಕೂ, ಈಗಿನ ಅನುದಾನಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದರು.

ಇನ್ನು ರಾಮಲಿಂಗಾರೆಡ್ಡಿ ಮಾತಿಗೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಶಾಸಕ ಸಚಿವ ವಿ.ಸೋಮಣ್ಣ ಅವರು, ರಾಮಲಿಂಗಾರೆಡ್ಡಿ ಅವರು ಅಧಿಕಾರದಲ್ಲಿದ್ದಾಗ ನಮಗೆ ಅಂದರೆ ಬಿಜೆಪಿ ಶಾಸಕರಿಗೆ ಅನುದಾನ ಎಷ್ಟು ಕೊಟ್ಟಿದ್ದಾರೆ(?) ಮೊದಲು ಸಂಪುಟ ಸಭೆಯಲ್ಲಿ ಆಗಿದ್ದ ಅನುದಾನ ಒಂದು, ಆದಾದ ನಂತರ ಬುಕ್ ಪ್ರಿಂಟ್ ಆಗುವಾಗ ಆಗಿದ್ದೇನು(?) ಬಿಜೆಪಿ ಶಾಸಕರ ಕ್ಷೇತ್ರವನ್ನು ಕಡೆಗಣಿಸಿ, ಎಲ್ಲಾ ಅನುದಾನವನ್ನು ಅವರ ಕಡೆಯೇ ತಿರುಗಿಸಿಕೊಂಡರು ಎಂದು ಅವರು ಪ್ರತ್ಯುತ್ತರ ನೀಡಿದರು.

ಇದೇ ವೇಳೆ ರಾಮಲಿಂಗಾರೆಡ್ಡಿ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು, ಮಾನ್ಯ ಸಭಾಧ್ಯಕ್ಷರೇ, ಈ ಹಿಂದೆ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರ ಇದ್ದಾಗ ನಮಗೆ, ನಮ್ಮ ಕ್ಷೇತ್ರಕ್ಕೆ ಸೊನ್ನೆ, ಸೊನ್ನೆ ಅನುದಾನ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಅಂತೆಯೇ ಸತೀಶ್ ರೆಡ್ಡಿ ಅವರ ಆರೋಪಕ್ಕೆ ಮಧ್ಯೆ ಪ್ರವೇಶಿಸಿದ ಜೆಡಿಎಸ್​ ಶಾಸಕ ಹೆಚ್.ಡಿ. ಕುಮಾರಸ್ವಾಮಿ ಅವರು, ಮಾನ್ಯ ಸಭಾಧ್ಯಕ್ಷರೇ, ನನ್ನ ಬಳಿ ಅಂಕಿ-ಅಂಶಗಳು ಇದೆ. ಐದು ನಿಮಿಷ ಸಮಯ ಕೊಡಿ. ನಾನು ಎಲ್ಲವನ್ನೂ ಸದನಕ್ಕೆ ತಿಳಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಎದ್ದು ನಿಂತು ಅಂಕಿ ಅಂಶಗಳನ್ನು ವಿವರವಾಗಿ ತಿಳಿಸಿದರು.

ಅಲ್ಲದೇ ಕುಮಾರಸ್ವಾಮಿ ಬಿಡುಗಡೆ ಆಗಿರುವ ಅನುದಾನ ಉಲ್ಲೇಖಿಸುತ್ತಿದ್ದಂತೆ ಮತ್ತೆ ಎದ್ದು ನಿಂತ ಸತೀಶ್ ರೆಡ್ಡಿ ಅವರು, ನೋಡಿ ಸಭಧ್ಯಕ್ಷರೇ, ನಮಗೆ ನಮ್ಮ ಕ್ಷೇತ್ರ ಕಳೆದ ವರ್ಷ ಎಷ್ಟು ಸಿಕ್ಕಿದೆ ಎಂಬುದು ಸದನಕ್ಕೆ ಕುಮಾರಸ್ವಾಮಿ ತಿಳಿಸಿದ್ದಾರೆ. ಈಗ ರಾಮಲಿಂಗಾರೆಡ್ಡಿ ಅವರದ್ದು ತಪ್ಪು ಅಲ್ವಾ(?) ಎಂದು ಸತೀಶ್ ರೆಡ್ಡಿ ಅವರು ಪ್ರಶ್ನೆ ಮಾಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *