ಬುದ್ಧಿವಂತಿಕೆ ಓಕೆ, ಅತೀ ಬುದ್ಧಿವಂತಿಕೆ ಬೇಡ..!

ಬೆಂಗಳೂರು:  ಈ ಬಾರಿಯ ಸದನ ಹಲವು ಕುತೂಹಲದ ಘಟನೆಗಳಿಗೆ ಸಾಕ್ಷಿಯಾಯ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಒಮ್ಮೆ ಅಬ್ಬರಿಸಿ ಬೊಬ್ಬಿರಿದರೆ, ಇನ್ನೊಮ್ಮೆ ಹಾಸ್ಯ ಚಟಾಕಿಯಿಂದ ಸದನವನ್ನು ನಗೆಗಡಲಲ್ಲಿ ತೇಲಿಸುತ್ತಿದರು. ಮೂರು ದಿನಗಳಲ್ಲಿ ಸಿದ್ದರಾಮಯ್ಯ ಮಿಂಚಿದ್ದೇ ಹೆಚ್ಚು.

11 ವರ್ಷಗಳ ವಿಪಕ್ಷ ನಾಯಕನಾದ ಸಿದ್ದರಾಮಯ್ಯ ಮಾತಿಗೆ ನಿಂತರೆ ಅಲ್ಲಿ ಎಲ್ಲವೂ ಇರುತ್ತೆ. ಛೇಡಿಸೋದು, ಕುಟುಕೋದು, ಸರ್ಕಾರವನ್ನು ತಿವಿಯೋದು, ಕರಾರುವಕ್ಕಾದ ಮಾತು, ಖಡಕ್​ ಚಾಟಿ ಹೀಗೆ ಗಂಭೀರವಾದ ವಿಷಯಗಳ ಜತೆಗೆ ಅಷ್ಟೇ ಹ್ಯೂಮರಸ್​ ಆಗಿ ಮಾತನಾಡೋದು ಅವರಿಗೆ ಸಿದ್ಧಿಸಿದ ಕಲೆ. ಈ ಬಾರಿಯ ಸದನದಲ್ಲೂ ಸಿದ್ದರಾಮಯ್ಯ ಅವರೇ ಮಿಂಚಿದ್ದು. ಸ್ಪೀಕರ್​ ಜತೆ ವಾದಕ್ಕಿಳಿದು ಸುದ್ದಿಯಾಗಿದ್ದು ಸಿದ್ದು ಇವತ್ತು ಸಿಎಂ ಯಡಿಯೂರಪ್ಪ ಅವರ ಕಾಲೆಳೆದರು. ಯಡಿಯೂರಪ್ಪ ಗುಡುಗಿದರು ಅನ್ನೋ ಮಾತಿತ್ತು. ಈಗ ಗುಡುಗು ಇಲ್ಲ ಸಿಡಿಲು ಇಲ್ಲ ಅಂತ ಕಿಚಾಯ್ಸಿದರು.

ಅತ್ತ ಸಿದ್ದರಾಮಯ್ಯ ಅವರ ಮಾತಿಗೆ ಸಿಎಂ ಯಡಿಯೂರಪ್ಪ ನಸುನಗುತ್ತಲೇ ಸ್ವಾಗತಿಸಿದರು. ಸಿದ್ದರಾಮಯ್ಯ ಈ ಮಾತಿಗೆ ಮಾಧುಸ್ವಾಮಿ ಯಡಿಯೂರಪ್ಪ ಅವರನ್ನು ಮೆತ್ತಗೆ ಮಾಡಿದ್ದು ನಾವಲ್ಲ ನೀವು ಅಂದರು. ಇಡೀ ಸದನ ನಗೆಗಡಲಲ್ಲಿ ತೇಲುತ್ತಿದರು, ಬಸವರಾಜ ಬೊಮ್ಮಾಯಿ ಕೂಡ ದನಿಗೂಡಿಸಿದರು. ನೀವು ಜೆಡಿಎಸ್​ ನಲ್ಲಿದ್ದಾಗ ಗಡ್ಡ ಬಿಟ್ಟು ರೆಬೆಲ್​ ಸ್ಟಾರ್​ ಆಗಿದ್ರಿ. ಈಗ ಕಾಂಗ್ರೆಸ್​ ಗೆ ಬಂದ್ಮೇಲೆ ನೀವು ಹೀಗಾದ್ರಿ ಅಂತ ತಿರುಗೇಟು ನೀಡಿದರು. ಇಷ್ಟಕ್ಕೇ ನಿಲ್ಲದ ಮಾತಿನ ವರಸೆ ಸ್ಪೀಕರ್​ನತ್ತ ತಿರುಗಿತು.

ಇವತ್ತು ಕೂಡ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನೂ ಬಿಡಲಿಲ್ಲ ಸಿದ್ದರಾಮಯ್ಯ. ಮಿಸ್ಟರ್​ ಕಾಗೇರಿ ನೀವು ಬುದ್ಧಿವಂತರು ಅಂತ ನನಗೆ ಗೊತ್ತು. ಆದರೆ ಅತಿ ಬುದ್ಧಿವಂತಿಕೆ ಒಳ್ಳೆಯದಲ್ಲ, ನೀವು ಅತಿ ಬುದ್ಧಿವಂತಿಕೆ ತೋರಿಸುತ್ತಿದ್ದೀರಿ ಅಂತ ಚಾಟಿ ಬೀಸಿದರು. ಇದಕ್ಕೆ ಒಂದು ಕ್ಷಣ ಸ್ಪೀಕರ್​ ಕಕ್ಕಾಬಿಕ್ಕಿಯಾಗಿದರು.

Recommended For You

About the Author: Dayakar

Leave a Reply

Your email address will not be published. Required fields are marked *