ನನ್ನ ಮಗ ಬುದ್ಧಿವಂತ, ಅವ್ನ ರಾಜಕೀಯ ನಿರ್ಧಾರ ಅವನಿಗೆ ಬಿಟ್ಟಿದ್ದು..! ಸಂಸದ ಬಚ್ಚೇಗೌಡ

ನೆಲಮಂಗಲ: ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಭುಗಿಲೆದ್ದ ವಿಚಾರವಾಗಿ ಸಂಸದ ಬಚ್ಚೇಗೌಡ ಪ್ರತಿಕ್ರಿಯಿಸಿ ನನ್ನ ಮಗ ಬುದ್ಧಿವಂತ, ವಿದ್ಯಾವಂತ ಆಗಿದ್ದು, ಟಿಕೆಟ್ ಪಡೆಯುವುದು ಅವನ ತೀರ್ಮಾನ, ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಅವರು ಮಗನ ಪರ ಬ್ಯಾಟ್​ ಮಾಡಿದರು.

ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಗ ಶರತ್ ಬಚ್ಚೇಗೌಡ ಸಾರ್ವಜನಿಕವಾಗಿಯೇ ಬಿಜೆಪಿ ಟಿಕೆಟ್ ಕೈತಪ್ಪುವ ಬಗ್ಗೆ ತೀವ್ರ ಅಸಮಾಧಾನ ಹಾಕಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿಯಲ್ಲಿ ಇದ್ದೀನಿ. ಅವನ ರಾಜಕೀಯ ನಿರ್ಧಾರ ಅವನಿಗೆ ಬಿಟ್ಟಿದ್ದು ಎಂದು ಸಂಸದ ಬಚ್ಚೇಗೌಡ ಅವರು ಹೇಳಿದ್ದಾರೆ.

ಈ ಹಿಂದೆ ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಶರತ್ ಬಚ್ಚೇಗೌಡ ಅವರು ಓಪನ್ ಚಾಲೆಂಜ್ ಹಾಕಿದ್ದರು. ಇದಕ್ಕೆ ಶರತ್​ ಅವರನ್ನು ಸಮಾಧಾನ ಪಡಿಸಲು ಬಿಜೆಪಿ ಸರ್ಕಾರ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸ್ಪಲ್ಪ ತಣ್ಣಗಾಗುವಂತೆ ಮಾಡಿತ್ತು.

Recommended For You

About the Author: Dayakar

Leave a Reply

Your email address will not be published. Required fields are marked *