2ನೇ ಟೆಸ್ಟ್​ ಮೊದಲ ಇನ್ನಿಂಗ್ಸ್​​ ದ್ವಿಶತಕ ಸಿಡಿಸಿದ ಕಿಂಗ್ ಕೊಹ್ಲಿ

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪುಣೆ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಸಾಧನೆ ಮಾಡಿದ್ದಾರೆ. ಹಾಗಾದ್ರೆ ಟೀಮ್ ಇಂಡಿಯಾದ ಕ್ಯಾಪ್ಟನ್​ ಕೊಹ್ಲಿಯ ಬ್ಯಾಟಿಂಗ್ ವೈಭವ ಹೇಗಿತ್ತು ಅನ್ನೋದು ಮುಂದೆ ಓದಿ.

ಸೌತ್​ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​ನ 2ನೇ ದಿನದಾಟ ಅಕ್ಷರಶಹ ಪುಣೆ ಅಂಗಳದಲ್ಲಿ ನಡೆದಿದ್ದು ಟೀಮ್ ಇಂಡಿಯಾದ ಕ್ಯಾಪ್ಟನ್ ಕೊಹ್ಲಿ ದರ್ಬಾರ್​. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ ಡಬಲ್ ಸೆಂಚುರಿ ಬಾರಿಸುವ ಮೂಲಕ ಆಫ್ರಿಕ ಬೌಲರ್​​ಗಳನ್ನು ಇನ್ನಿಲ್ಲದಂತೆ ಕಾಡಿದರು. ಅದರಲ್ಲೂ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಒಂದೆಡೆ ಸರಾಗವಾಗಿ ರನ್​ ಗಳಿಸುತ್ತಿದ್ದರೆ. ಮತ್ತೊಂದೆಡೆ ವಿರಾಟ್​ ಬೇಟೆಗೆ ಹರಿಣ ಬೌಲರ್​ಗಳು ಪರದಾಡಿದರು.

ಇನ್ನು ಮೊದಲ ದಿನ 63 ರನ್​ಗಳಿಸಿ ನಿನ್ನೆಗೆ ವಿಕೆಟ್ ಕಾಯ್ದುಕೊಂಡಿದ್ದ ವಿರಾಟ್​. ಪುಣೆಯ ಅಂಗಳದಲ್ಲಿ ರನ್ ಮಳೆಯನ್ನೇ ಸುರಿಸಿದರು. ಇನ್ನು ಅವಕಾಶ ಸಿಕ್ಕಾಗ ಬೌಲರ್​ಗಳನ್ನ ದಂಡಿಸುತ್ತಿದ್ದ ವಿರಾಟ್​​ಸಮಯ ಕಳೆದಂತೆ ಕ್ರೀಸ್​ನಲ್ಲಿ ಭದ್ರವಾಗಿ ನೆಲೆಯೂರಿದರು. ನಾಲ್ಕನೇ ವಿಕೆಟ್​ಗೆ ರಹಾನೆ ಜೊತೆ ದಾಖಲೆಯ 150 ಹೆಚ್ಚು ರನ್ ಜೊತೆಯಾಟದಲ್ಲಿ ಭಾಗಿಯಾದ ವಿರಾಟ್, ವೇಗಿ ಫಿಲ್ಯಾಂಡರ್ ಒವರ್​​ನಲ್ಲಿ ಬೌಂಡರಿ ಬಾರಿಸುವ ಶತಕ ಫೂರೈಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನ ವೃತ್ತಿ ಜೀವನದಲ್ಲಿ 26 ಶತಕ ಹಾಗೂ ನಾಯಕನಾಗಿ 19ನೇ ಶತಕ ದಾಖಲಿಸಿದರು.

ದಕ್ಷಿಣ ಆಫ್ರಿಕಾ ಬೌಲರುಗಳನ್ನ ಚೆಂಡಾಡಿದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 150 ರನ್​ಗಳನ್ನು ಪೂರೈಸುತ್ತಿದ್ದಂತೆ ನೂತನ ವಿಶ್ವದಾಖಲೆ ಬರೆದರು. ಟೆಸ್ಟ್​ ತಂಡದ ನಾಯಕನಾಗಿ 9ನೇ ಬಾರಿ 150 ರನ್​ಗಳಿಗಿಂತ ಹೆಚ್ಚು ಸ್ಕೋರ್ ಮಾಡುವ ಮೂಲಕ ಕ್ರಿಕೆಟ್ ದಿಗ್ಗಜ ಡಾನ್​ ಬ್ರಾಡ್ಮನ್ ವಿಶ್ವದಾಖಲೆಯನ್ನು ಬದಿಗೊತ್ತಿ ಕೊಹ್ಲಿ ಹೊಸ ಇತಿಹಾಸ ಬರೆದರು. 297 ಎಸೆತಗಳನ್ನು ಎದುರಿಸಿದ ಕೊಹ್ಲಿ, 28 ಬೌಂಡರಿಗಳೊಂದಿಗೆ 200 ರನ್​ ಪೂರೈಸಿದರು. ಈ ಮೂಲ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ 7ನೇ ದ್ವಿಶತಕ ದಾಖಲಿಸಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್​​ನಲ್ಲಿ ಏಳು ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.

ಸೌತ್​ ಆಫ್ರಿಕಾ (254), ಶ್ರೀಲಂಕಾ (243), ಇಂಗ್ಲೆಂಡ್​ (235), ಶ್ರೀಲಂಕಾ (213), ನ್ಯೂಜಿಲೆಂಡ್ (211), ಬಾಂಗ್ಲಾದೇಶ (204), ವೆಸ್ಟ್ ಇಂಡೀಸ್ (200) ಆರು ದೇಶಗಳ ವಿರುದ್ಧ ದ್ವಿಶತಕ ಸಾಧನೆ ಮಾಡಿದ್ದಾರೆ.

ಶ್ರೀಲಂಕಾ, ಇಂಗ್ಲೆಂಡ್​, ನ್ಯೂಜಿಲೆಂಡ್​, ಬಾಂಗ್ಲಾದೇಶ, ವೆಸ್ಟ್​ ಇಂಡೀಸ್​ ವಿರುದ್ಧ ದ್ವಿಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಸೌತ್​ ಆಫ್ರಿಕಾ ವಿರುದ್ಧ ದ್ವಿಶತಕ ಸಿಡಿಸುವ ಮೂಲಕ ಆರು ದೇಶಗಳ ವಿರುದ್ಧ ದ್ವಿಶತಕ ಸಾಧನೆ ಮಾಡಿದರು.

ದ್ವಿಶತಕ ಗಳಿಸಿ ಮುನ್ನುಗುತ್ತಿದ್ದಾಗ ಅದೃಷ್ಟ ಅನ್ನೋದು ವಿರಾಟ್​ ಕೈ ಹಿಡಿದಿತ್ತು​​​​​​​​​​. 208 ರನ್​ಗಳಿಸಿದ್ದ ಮಹರಾಜ ಬೌಲಿಂಗ್​ನಲ್ಲಿ ವಿರಾಟ್​ ಸ್ಲಿಪ್​ನಲ್ಲಿ ಡುಪ್ಲೆಸಿಸ್​ಗೆ ಕ್ಯಾಚ್​ ನೀಡಿ ಔಟ್​ ಆಗಿದರು. ಆದರೆ, ಈ ವೇಳೆ ಥರ್ಡ್ ಅಂಪೈರ್​ ಪರಿಶೀಲನೆ ನಡೆಸಿದಾಗ ಆ ಬಾಲ್ ನೋ ಬಾಲ್ ಆಗಿತ್ತು.

208 ರನ್​ವರೆಗೆ ಒಂದು ಸಿಕ್ಸರ್​ ಬಾರಿಸದ ಕೊಹ್ಲಿ, ನೋ ಬಾಲ್​ ಮೂಲಕ ಜೀವದಾನ ಪಡೆದ ಬಳಿಕ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅಲ್ಲದೆ 2 ಸಿಕ್ಸರ್​ ಬಾರಿಸುವ ಮೂಲಕ ಮತ್ತಷ್ಟು ಅಪಾಯಕಾರಿಯಾಗುವ ಲಕ್ಷಣ ತೋರಿಸಿದರು. ಅಲ್ಲದೇ ಅಂತಿಮವಾಗಿ 254 ರನ್​ ಗಳಿಸುವ ಮೂಲಕ 2017ರಲ್ಲಿ ಶ್ರೀಲಂಕಾ ವಿರುದ್ಧ 243 ರನ್ ಗಳಿಸಿದ್ದ ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡರು.

ವಿರಾಟ್​ ಕೊಹ್ಲಿ ಬ್ಯಾಟಿಂಗ್
ಎಸೆತ 336
ರನ್ 254
4/6 33/2

ಈ ನಡುವೆ ಜಡೇಜಾ 104 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಜಡೇಜಾ 91ರನ್​ಗಳಿಸಿ ಔಟಾದರು. ಈ ಮೂಲಕ 2ನೇ ಟೆಸ್ಟ್​​ ಶತಕದಿಂದ ವಂಚಿತರಾದರು. ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಕಳೆದುಕೊಂಡು 601 ರನ್​ಗಳಿಸಿದ್ದಾಗ ಟೀಮ್ ಇಂಡಿಯಾ ನಾಯಕ ವಿರಾಟ್​ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡರು.

ಒಟ್ಟಾರೇಯಾಗಿ 2ನೇ ದಿನವೂ ಅಬ್ಬರದ ಬ್ಯಾಟಿಂಗ್ ನಡೆಸಿದ ವಿರಾಟ್​ ಸೌತ್​ ಆಫ್ರಿಕಾ ಬೌಲರ್​ಗಳ ಕಾಡಿದ್ದಲ್ಲದೆ. ಟೀಮ್ ಇಂಡಿಯಾಗೆ ಆಸರೆಯಾಗುವುದರ ಜೊತೆಗೆ ಆಫ್ರಿಕಾ ವಿರುದ್ಧ ಮೇಲುಗೈ ಸಾಧಿಸುವಂತೆ ಮಾಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *