ಇನ್ನೊಬ್ಬರನ್ನು ತುಳಿದು ಬೆಳೆಯೋದಲ್ಲ ನನ್ನ ಪ್ರಕಾರ – ಕಿಚ್ಚ ಸುದೀಪ್

ಬೆಂಗಳೂರು: ತೆಲುಗಿನ ಸೈರಾ ನರಸಿಂಹರಾಯ ರೆಡ್ಡಿ ಸಿನಿಮಾ ವಿಶ್ವದಾದ್ಯಂತ ಅಕ್ಟೋಬರ್​ 2ರಂದು ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡಿತ್ತು. ಇದರ ಬೆನ್ನಲ್ಲೆ ಚಿತ್ರತಂಡ ಇದರ ಸಂಭ್ರಮವನ್ನು ಹಂಚಿಕೊಂಡಿದೆ. ಈ  ಸಿನಿಮಾ ಪ್ಯಾನ್​ ಇಂಡಿಯಾ ಸಿನಿಮಾವಾಗಿತ್ತು ಜೊತೆ ಕನ್ನಡದಲ್ಲಿಯೂ ಸಹ ಈ ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ನಗರದ ಖಾಸಗೀ ಹೋಟೆಲ್​ನಲ್ಲಿ ಸುದ್ದಿಗೋಷ್ಠಿಯನ್ನು ಏಪರ್ಡಿಸಲಾಗಿತ್ತು. ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್ ಅವರು, ಡಬ್ಬಿಂಗ್​ ಬಗ್ಗೆ ಬೇಕು ಬೇಡ ಅನ್ನೋದಲ್ಲ ಐದು ವರ್ಷದ ಹಿಂದೆ ಇದ್ದಾಗೇ ಈಗ ಇಲ್ಲ, ಆಗ ಅದು ಕರೆಕ್ಟ್ ಇತ್ತು. ಕೆಲವು ಗೊತ್ತಿಲ್ಲದೇ ನಡೆಯುವಂತಹ ವಿಚಾರಗಳಿರುತ್ತೇವೆ ಇದೇನೋ ಚಳವಳಿ ನಡೆಸಬೇಕು, ನಾವೇನೋ ಬದಲಾವಣೆ ತರಬೇಕು, ಮನಸುಗಳನ್ನು ಚೆಂಜ್​ ಮಾಡಬೇಕು ಅನ್ನೋದಲ್ಲ, ಇಲ್ಲಿ ಈ ಸಿನಿಮಾ ಕನ್ನಡದಲ್ಲಿ ಬರುತ್ತೆ ಅನ್ನೋದು ಮೊದಲು ತೀರ್ಮಾನ ಆಗಿತ್ತು ಎಂದು ಅವರು ತಿಳಿಸಿದರು.

ಅಲ್ಲದೇ ಆ ವಿಚಾರ ಬಂದಾಗ ನನಗೆ ಒಂದು ಇರುತ್ತಲ್ಲ, ನನ್ನ ಮಾತನಾಡುತ್ತೇನೆ, ಬೇರೆ ಯಾರೋ ವಾಯ್ಸ್​​​ ಕೊಟ್ಟರೇ ನನಗೆ. ಸುದೀಪ್ ಕನ್ನಡ ಮಾತನಾಡುತ್ತಿದ್ದಾರೆ ಅಲ್ಲಿ ಬೇರೆ ತರ ಸೌಂಡ್ ಹೆಂಗಿದೆ ಚನ್ನಾಗೂ ಬರುತ್ತಿಲ್ಲ ಅದು ನನ್ನ ಭಾಷೆಗೆ ಅವಮಾನ ಎಂದರು.

ಅಂತೆಯೇ ಅದು ನಾನು ಇಲ್ಲಿಂದ ಅಲ್ಲಿಗೆ ಹೋಗಿರೋದು ಅಲ್ಲಿಂದ ಇಲ್ಲಿಗೆ ಬಂದಿಲ್ಲ ಶೋ ನನಗೆ ಏನ್ ಬೇಕೋ ಗೊತ್ತಿಲ್ಲ ನನ್ನ ಬಾಯಿ ಯಿಂದ ಬರೋ ಕನ್ನಡ ಸ್ಪಷ್ಟವಾಗಿ ಇರಬೇಕು, ಚನ್ನಾಗಿರಬೇಕು. ಅದಾದ್ಮೇಲೆ ನೆಕ್ಸ್ಟ್​​​​ ನೀವು ಹೇಳಿದರಲ್ಲ ಹೋರಾಟ, ಅದು-ಇದು ಇವೆಲ್ಲ ಎರಡನೇ ಮಾತು ಸರ್ ಎಂದು ಅವರು ತಿಳಿಸಿದರು.

30, 40, 50, 60, 70 ಕೋಟಿ ಬಜೆಟ್​ನಲ್ಲಿ ಒಂದು ಸಿನಿಮಾ ಮಾಡಿದಾಗ ಒಂದು ಬೇರೆ ಧೈರ್ಯ ಸರ್, ಕನ್ನಡದವರು 100, 150 ಕೋಟಿ ದಾಟಿ ಸಿನಿಮಾ ಮಾಡಿದಾಗ ನಾವು ಬೇರೆ ಭಾಷೆಗೆ ಯಾಕೆ ಹೋಗುತ್ತೇವೆ ಎಂದರೆ ನಮ್ಮಗೆ ಎರಡು ಕಡೆಯಿಂದ ದುಡಿಮೆ ಸಾಕಗಲ್ಲ ಅದಕ್ಕಾಗಿಯೇ ಬಿಗ್​ ಬಜೆಟ್​ ಸಿನಿಮಾಗಳನ್ನು ಪ್ಯಾನ್​ ಇಂಡಿಯಾ ಬಿಡುಗಡೆ ಮಾಡೋದು ಎಂದು ಅವರು ಸ್ಪಷ್ಟನೆ ಕೊಟ್ಟರು.

ಪ್ರತಿಯೊಬ್ಬರಿಗೂ ಬೆಳೆಯೋ ಅವಕಾಶವಿದೆ ಸರ್ ಬೆಳೆಯೋ ಉದ್ದೇಶವಿರಬೇಕು. ನಾವು ಯಾವಾಗ ಇನೊಬ್ಬರನ್ನು ತಡೆದು ಬೆಳೆಬೇಕು ಅನಿಸುತ್ತೋ ಅದು ಬೆಳೆವಣಿಗೆ ಅಲ್ಲ ಸರ್​ ನನ್ನ ಪ್ರಕಾರ. ಪ್ರತಿಯೊಬ್ಬರಿಗೂ ಒಂದು ಶಕ್ತಿ-ಯುಕ್ತಿ ಇದೆ ಅಷ್ಟೇ ಯಾಕೆ ನಮ್ಮ ಭಾಷೆ ಮೇಲೆ ನಮಗೆ ನಂಬಿಕೆ ಇರಬೇಕು ಎಂದು ಕಿಚ್ಚ ಸುದೀಪ್ ಅವರು ಹೇಳಿದರು.

Recommended For You

About the Author: Manjunatha D

Leave a Reply

Your email address will not be published. Required fields are marked *