ಈ ಸಿನಿಮಾಕ್ಕೆ ಇವರೇ ಹೀರೋ ಆಗ್ಬೇಕು, ನನ್ನಿಂದ ಅದು ಸಾಧ್ಯವಿಲ್ಲ..! ಕಿಚ್ಚ ಸುದೀಪ್​

ಬೆಂಗಳೂರು: ಬಹುತಾರಾಗಣದ ಐತಿಹಾಸಿಕ ಸೈರಾ ನರಸಿಂಹ ರೆಡ್ಡಿ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡಕ್ಕೂ ಡಬ್ ಆಗಿ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸೈರಾ ಚಿತ್ರವನ್ನು ಗೆಲ್ಲಿಸಿದ ರಾಜ್ಯದ ಪ್ರೇಕ್ಷಕರಿಗೆ ಸುದೀಪ್ ಹಾಗೂ ನಿರ್ದೇಶಕ ಸುರೇಂದರ್ ರೆಡ್ಡಿ ಅವರು ಶುಕ್ರವಾರ ಧನ್ಯವಾದ ತಿಳಿಸಿದರು.

ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವುಕು ರಾಜನಾಗಿ ಕಮಾಲ್ ಮಾಡಿದ್ದು, ಈ ಸಿನಿಮಾದ ಸಕ್ಸಸ್ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು,​ ಕಾಲ ಬದಲಾದಂತೆ ನಾವು ಬದಲಾಗಬೇಕು. ಕೆಲ ವರ್ಷಗಳ ಹಿಂದೆ ಡಬ್ಬಿಂಗ್ ವಿರುದ್ಧ ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ನಿಜ. ಆದರೆ ದೊಡ್ಡ ಸಿನಿಮಾ ಮಾಡುವಾಗ ಡಬ್ಬಿಂಗ್ ಅನಿವಾರ್ಯ. ಬೇರೆ ಭಾಷೆ ಸಿನಿಮಾಗಳು ಕನ್ನಡದಲ್ಲಿ ಬಂದರೆ ಸಂತಸ ಪಡಬೇಕು ಎಂದು ಅವರು ಹೇಳಿದ್ದಾರೆ.

ಇನ್ನು ರಾಹುಲ್ ದ್ರಾವಿಡ್ ಕುರಿತು ಬಯೋಪಿಕ್ ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ ಈಗ ನನ್ನಿಂದ ಅದು ಸಾಧ್ಯವಿಲ್ಲ. ಅದಕ್ಕೆ ಚಿಕ್ಕ ವಯಸ್ಸಿನ ಹೀರೋ ಬೇಕು, ಅಂಬರೀಶ್ ಕುರಿತು ಬಯೋಪಿಕ್ ಮಾಡೋದು ಕಷ್ಟ. ಅವರು ನಮ್ಮ ನಡುವೆ ಇದ್ದವರು. ಹೀಗಾಗಿ ಪರ್ಫೆಕ್ಟ್ ಆಗಿ ಅವರ ಬಯೋಪಿಕ್ ಮಾಡುವುದು ಸಾಧ್ಯವಿಲ್ಲ ಎಂದು ನಟ ಕಿಚ್ಚ ಸುದೀಪ್​ ಅವರು ತಿಳಿಸಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *