ಪಿಎ ರಮೇಶ್​ ಬಗ್ಗೆ ಜಿ ಪರಮೇಶ್ವರ ಹೇಳಿದ್ದೇನು..?

ಬೆಂಗಳೂರು: ರಮೇಶ್​ ಬಹಳ ಒಳ್ಳೆಯ ಹುಡುಗ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಎಂದು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ತಮ್ಮ ಪಿಎ ರಮೇಶ್​ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಐಟಿ ಅಧಿಕಾರಿಗಳು ಏನು ಪ್ರಶ್ನೆ ಕೇಳಿದ್ದಾರೋ? ನನಗೆ ಗೊತ್ತಿಲ್ಲ.! ನಮ್ಮ ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ಇಂದು ಐಟಿ ರೇಡ್ ಆಗಿದೆ. ಆದಾದ ಕೆಲ ಸಮಯದ ನಂತರ ರಮೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನುವ ಮಾಹಿತಿ ಬಂತು ಎಂದು ಅವರು ಹತಾಷೆ ವ್ಯಕ್ತಪಡಿಸಿದರು.

ನಾನು ರಮೇಶ್​ನಿಗೆ ಧೈರ್ಯವಾಗಿರು ಎದರಿಕೊಳ್ಳಬೇಡ ಎಂದು ತಿಳಿಹೇಳಿದ್ದೆ. ಆದರೆ ಅವನನ್ನು ಬೆಳಗ್ಗಿನ ಜಾವ ಐಟಿ ಅಧಿಕಾರಿಗಳು ಮನೆಯಿಂದ ಕರೆದುಕೊಂಡು ಹೊರಟರು, ಐಟಿ ಅಧಿಕಾರಿಗಳು ಮರಳಿ ಬಿಡುವಾಗ ಮನೆ ಹತ್ತಿರ ಕರೆದುಕೊಂಡು ರಮೇಶ್​ನನ್ನು ಬಿಟ್ಟಿದ್ದರೆ ಈ ಸೂಸೈಡ್ ಆಗುತ್ತಿರಲಿಲ್ಲ. ಏನಾದರು ಐಟಿ ಅವರು ಕೇಳಬೇಕಿದ್ದರೆ ನಮ್ಮನ್ನ ಕೇಳಬೇಕಿತ್ತು ಎಂದರು.

Recommended For You

About the Author: Dayakar

Leave a Reply

Your email address will not be published. Required fields are marked *