ಮತ್ತೆ ಜೋಡೆತ್ತುಗಳನ್ನು ಕೆಣಕಿದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ

ಮಂಡ್ಯ: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಮತ್ತು ರಾಕಿಂಗ್​ ಸ್ಟಾರ್​ ಯಶ್ ನಟನೆ ಸಿನಿಮಾಗಷ್ಟೇ ಸೀಮಿತವಾಗಿರಲಿ ಎಂದು ಹೇಳುವ ಮೂಲಕ ಮಾಜಿ ಸಂಸದ ಎಲ್​.ಆರ್ ಶಿವರಾಮೇಗೌಡ ಅವರು ಮತ್ತೆ ಜೋಡೆತ್ತುಗಳನ್ನು ಕೆಣಕಿದ್ದಾರೆ.

ಜಿಲ್ಲೆಯ ನಾಗಮಂಗಲದಲ್ಲಿಂದು ಈ ಸಂಬಂಧವಾಗಿ ಮಾತನಾಡಿದ ಅವರು, ದರ್ಶನ್, ಯಶ್ ನಟನೆ ಸಿನಿಮಾರಂಗಕ್ಕೆ ಸೀಮಿತವಾಗಿರಲಿ. ಸಿನಿಮಾದವರು ರಾಜಕೀಯಕ್ಕೆ ಬೇಡ. ಸಿನಿಮಾದವರ ಹಣೆ ಬರಹಗಳು ನನಗೆ ಗೊತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಸಿನಿಮಾ ರಂಗದವರನ್ನ ಸಿನಿಮಾದಲ್ಲಿ ನೋಡೋದಕ್ಕಷ್ಟೇ ಚಂದ. ರಾಜಕೀಯದಲ್ಲಿ ನೋಡೋದಕ್ಕೆ ಆಗೋದೇ ಇಲ್ಲ, ಅಂಬರೀಶ್ ಅವರನ್ನು ಚುನಾವಣೆಯಲ್ಲಿ ನಾವು ಬಳಸಿಕೊಂಡಿದ್ದೇವೆ. ಊರೂರು ತಿರುಗಿ ತಮಟೆ ಬಾರಿಸಿಕೊಂಡು ನಾವಿದ್ದೀವಿ. ನಿಮ್ಮ ಎಲ್ಲಾ ಕಷ್ಟ ನಿವಾರಣೆ ಮಾಡ್ತೀವಿ ಎಂದು ಹೇಳಿರಲಿಲ್ಲ ಎಂದು ಶಿವರಾಮೇಗೌಡ ಅವರು ಲೋಕಸಭಾ ಚನಾವಣೆಯಲ್ಲಿ ಸುಮಲತಾ ಅಂಬರೀಶ್​ ಪರ ಪ್ರಚಾರ ನಡೆಸಿದ್ದ ನಟರ ಕಾಲೆಳೆದಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *