ಐಟಿ ರೇಡ್​ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್​

ಬೆಂಗಳೂರು: ಅಕ್ಟೋಬರ್ 10ನೇ ತಾರೀಖು ಬೆಳಗ್ಗೆ ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ತಗೊಂಡು ಬಂದಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ಒಂದು ಕೆರೆ ತುಂಬಿತ್ತು ಅಲ್ಲಿ ಗಂಗಾ ಪೂಜೆಗೆ ಹೋಗಿದ್ದೆ ನಂತರ ಐಬಿಯಲ್ಲಿದ್ದೆ ಮಾಹಿತಿ ಬಂತು ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರು ಶನಿವಾರ ಹೇಳಿದರು.

ನಗರದಲ್ಲಿಂದು ಐಟಿ ದಾಳಿಗೆ ಸಂಬಂಧಿದಂತೆ ಮಾಧ್ಯಮದಕ್ಕೆ ಸಂಪೂರ್ಣ ಮಾಹಿತಿ ನೀಡಿದ ಅವರು, ಇಬ್ಬರು ಅಧಿಕಾರಿಗಳು ಅಲ್ಲಿಗೆ ಬಂದರು ಸರ್ಚ್ ವಾರೆಂಟ್ ಕೊಟ್ಟರು. ಸಿದ್ದಾರ್ಥ ವಿದ್ಯಾ ಸಂಸ್ಥೆಗಳ ಮಾಹಿತಿ ಬೇಕು ಅಂತ ಕೇಳಿದರು. ನಾನು ಎಲ್ಲ ರೀತಿಯ ಸಹಕಾರ ಕೊಡ್ತೀನಿ ಅಂದೆ. ಮೊದಲ ದಿನ ನಮ್ಮ ಮನೆಯಲ್ಲಿ ಎಲ್ಲಾ ಸರ್ಚ್ ಮಾಡಿದರು ಎಂದರು.

ಇನ್ನು ಪೇಪರ್​ಗಳು ಪರಿಶೀಲನೆ ನಡೆಸಿದರು. ಎರಡನೇ ದಿನ ಕೆಲವು ದಾಖಲೆಗಳು ಇಟ್ಟು ನನ್ನ ಕೆಲವು ಪ್ರಶ್ನೆಗಳು ಮಾಡಿದರು ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಮೆಡಿಕಲ್ ಸೀಟ್ ಬಗ್ಗೆ ತನಿಖೆ ನಡಿಸಿದರು. ನಮ್ಮ ಬ್ರದರ್ ಎಲ್ಲಾ ನೋಡ್ಕೊತ್ತಿದರು ಅವರು ತೀರಿಕೊಂಡ ಮೇಲೆ ನಾನು ಜವಾಬ್ದಾರಿ ತಗೊಂಡೆ ಎಂದು ಅವರು ವಿವರಣೆ ನೀಡಿದರು.

ಅಲ್ಲದೇ ನನಗೆ ಈ ಅಡ್ಮಿಷನ್ ವಿಚಾರದಲ್ಲಿ ಅಷ್ಟು ಗಮನ ಇರಲಿಲ್ಲ, ನನ್ನ ಸಹೋದರನ ಮಗ ನೋಡ್ಕೊತ್ತಿದ್ದ ಅಂದೆ. ನಾನು ಸಂಸ್ಥೆಗೆ ಬರ್ತಿನಿ ಅದನ್ನ ಅಲ್ಲೆ ನೋಡೊಣ ಅಂದೆ. 35 ಸಾವಿರ ಕೋಟಿ ನಾನು ನೋಡಿದ್ದೇನೆ. 3 ಸಾವಿರ ಕೋಟಿ ಕಿಕ್ ಬ್ಯಾಕ್ ಅಲ್ಲ ನೋಡಿ ಆಶ್ಚರ್ಯ ಅಯ್ತು, ಅವೆಲ್ಲಾ ಸುಳ್ಳು ಸುದ್ದಿ. ಅವರು ಈಗ ಕಾಲೇಜು ಬಳಿ ಪರಿಶೀಲನೆ ಮಾಡುತ್ತಾ ಇದ್ದಾರೆ ಎಂದು ಅವರು ತಿಳಿಸಿದರು.

ಅಂತೆಯೇ ಮಂಗಳವಾರ ವಿಚಾರಣೆಗೆ ಬರುವಂತೆ ನೋಟಿಸ್ ಬಂದಿದೆ. ಇಂದು ಸಿದ್ದಾರ್ಥ ಕಾಲೇಜಿನಲ್ಲಿ ಮತ್ತೆ ಪರಮೇಶ್ವರ್ ವಿಚಾರಣೆ ನಡೆಸಲಾಗುವುದು. ಕಾಲೇಜಿಗೆ ಬರುವಂತೆ ತಿಳಿಸಿರುವ ಐಟಿ ಅಧಿಕಾರಿಗಳು. 11 ಗಂಟೆಗೆ ತುಮಕೂರು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಬರುವಂತೆ ಸೂಚನೆ ನೀಡಲಾಗಿದೆ. ಇನ್ನೂ ಸಿದ್ದಾರ್ಥ ಕಾಲೇಜಿನಲ್ಲಿ ತನಿಖೆ ಅಧಿಕಾರಿಗಳು ಮುಂದುವರಿಸಿದ್ದಾರೆ.

ಇನ್ನೂ ಸೀಟ್ ಬ್ಲಾಕಿಂಗ್ ವಿಚಾರ ನನಗೆ ಗೊತ್ತಿಲ್ಲ, ಎಲ್ಲ ನನ್ನ ಸಹೋದರ ನೋಡ್ಕೊತ್ತಿದ್ದ. ನಂತರ ಅವರ ಮಗ ಅನಂದ್ ನೋಡ್ಕೊತ್ತಿದ್ದ. ಏನೇನಾಗಿದೆ ಅನ್ನೋದು ನನಗೆ ಗೊತ್ತಿಲ್ಲ, ಈಗ ಅದನ್ನ ಹೋಗಿ ನೋಡ್ತೀನಿ. ಐಟಿಯವರು ಏನ್ ಪ್ರಶ್ನೆ ಮಾಡುತ್ತಾರೋ ಅದಕ್ಕೆ ಉತ್ತರ ಕೊಡ್ತೀನಿ ಎಂದು ಕಾಂಗ್ರೆಸ್​ ಮುಖಂಡ ಡಾ. ಜಿ ಪರಮೇಶ್ವರ್ ಅವರು ನುಡಿದರು.

Recommended For You

About the Author: Manjunatha D

Leave a Reply

Your email address will not be published. Required fields are marked *