ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ..!

ಬೆಂಗಳೂರು: ಸಿಎಂ ಖಜಾನೆ ಖಾಲಿ ಆಗಿದೆ ಎನ್ನುತ್ತಾರೆ. ರಾಜ್ಯದ ಹಣಕಾಸಿನ ಸ್ಥಿತಿ ಸರಿಯಾಗಿಯೇ ಇದೆ. ಈ ಬಗ್ಗೆ ನಿಮಗೆ ಯಾರೋ ಸುಳ್ಳು ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಸದನದಲ್ಲಿ ಹೇಳಿದರು.

ಅಧಿವೇಶನದಲ್ಲಿ ಮಾತನಾಡಿದ ಅವರು, ಸಿಎಂ ಯಾರೋ ಮಾತನ್ನು ಕೇಳಿ, ಅದನ್ನೇ ನಂಬಿ ಖಜಾನೆ ಖಾಲಿಯಾಗಿದೆ ಎಂದು ಹೇಳಿರಬಹುದು. ಮೋಟಾರು ವಾಹನ ತೆರಿಗೆ ಮಾತ್ರ ಕೊರತೆ ಆಗಿದೆ. ಉಳಿದೆಲ್ಲ ತೆರಿಗೆ ಸಂಗ್ರಹ ಸರಿಯಿದೆ. ಸಿಎಂ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರು ಕಿಚಾಯಿಸಿದರು.

ರಾಜ್ಯದ ಜಿಡಿಪಿ 16,98,000 ಹಾಗೂ ಸಾಲ 3,37,000 ಕೋಟಿ ಇದೆ. ಆದರೆ ಇಷ್ಟು ಪ್ರಮಾಣದಲ್ಲಿ ಜಿಡಿಪಿ ತಲುಪಲ್ಲ. ಸಾಲದ ಪ್ರಮಾಣವೂ ಸಹ ಮತ್ತಷ್ಟು ಹೆಚ್ಚುತ್ತದೆ. ಹೀಗಾಗಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿ ದಾಟುವ ಆತಂಕವಂತೂ ಇದ್ದೇ ಇದೆ ಎಂದ ಅವರು ತಿಳಿಸಿದರು.

ದೇಶದ ಆರ್ಥಿಕತೆ ಯಾಕೆ ಬಿದ್ದೋಗಿದೆ? ಕಳೆದ ಅವಧಿಯಲ್ಲಿ 8% ಜಿಡಿಪಿ ಇತ್ತು. ಈಗ ದೇಶದ ಜಿಡಿಪಿ 5%ಗೆ ಇಳಿದಿದೆ. ಕೇಂದ್ರ ತೆಗೆದುಕೊಂಡ ತೀರ್ಮಾನದಿಂದ ಜಿಡಿಪಿ ಕುಸಿತ ಕಂಡಿದೆ. ಇದರಿಂದ ರಿಯಲ್ ಎಸ್ಟೇಟ್ ವ್ಯವಹಾರ ನಿಂತು ಹೋಗಿದೆ. ಉತ್ಪಾದನಾ ವಲಯದಲ್ಲೂ ದೊಡ್ಡ ಕುಸಿತ ಕಂಡಿದ್ದು, ಕೇಂದ್ರದ ಆರ್ಥಿಕ ಸ್ಥಿತಿ ರಾಜ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆರು ತಿಂಗಳಲ್ಲಿ ಕೇಂದ್ರದಿಂದ ಬರಬೇಕಿದ್ದ 1672 ಕೋಟಿ ಬಂದಿಲ್ಲ, ಇದರಿಂದ ರಾಜ್ಯದ ಮೇಲೆ ಹೊಡೆತ ಬೀಳಲಿದೆ ಎಂದರು.

ಇನ್ನು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಹೇಳಿಕೆ ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ ಅವರು, ಶಾಸಕರೊಬ್ಬರು ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೇಳಿದರು. ಆಗ ನಾನು ದುಡ್ಡು ಖಾಲಿ ಎಂದೆ ಅಷ್ಟೆ. ಖಜಾನೆ ಖಾಲಿ ಎಂದು ಬೇರೆ ಅರ್ಥದಲ್ಲಿ ಹೇಳಿದ್ದೆ. ಆದರೆ ಇದನ್ನು ಬೇರೆ ಅರ್ಥದಲ್ಲಿ ಕಲ್ಪಿಸಲಾಗಿದೆ ಎಂದರು.

Recommended For You

About the Author: Dayakar

Leave a Reply

Your email address will not be published. Required fields are marked *