ದರ್ಶನ್​ ಮೆಚ್ಚಿದ ಸಿನಿಮಾದಲ್ಲಿ ಪೈಲ್ವಾನ್ ವಿಲನ್ ಖದರ್..!!

ನ್ಯೂರಾನ್. ಕ್ರೈಮ್ ಥ್ರಿಲ್ಲರ್ ಕಹಾನಿ. ಅಭಿಮಾನಿಗಳ ಅಧಿಪತಿ ಡಿ. ಬಾಸ್ ದಾಸ ದರ್ಶನ್ ತೂಗುದೀಪ್ ಅವರು​​ ನ್ಯೂರಾನ್ ಚಿತ್ರತಂಡಕ್ಕೆ ಸಪೋರ್ಟ್ ಕೊಟ್ಟಿದರು. ಟ್ರೈಲರ್ ಲಾಂಚ್ ಮಾಡಿ ನ್ಯೂರಾನ್ ತಂಡಕ್ಕೆ ಆಲ್ ದಿ ಆಲ್​ ದಿ ಬೆಸ್ಟ್ ಎಂದಿದರು. ಈಗ ನ್ಯೂರಾನ್ ತಂಡ ಹಾರ್ಟ್ ಟಚ್ಚಿಂಗ್ ಲವ್ ಟ್ಯೂನ್​ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ತೇಲಿಸಿದೆ.

ಒಂದೇ ಒಂದು ಬಾರಿ , ಬಂದು ನನ್ನ ಮುಂದೆ ನಿಲ್ಲೇ. ಒಂದೇ ಒಂದು ಸಾರಿ ಎಲ್ಲಾ ಸುಳ್ಳು ಅಂತ ಹೇಳೇ. ಅನ್ನೋ ಸಾಲಿನ ಹಾಡೊಂದನ್ನು ನ್ಯೂರಾನ್ ಫಿಲ್ಮ್ ಟೀಮ್ ಬಿಡುಗಡೆ ಮಾಡಿದೆ. ಕವಿರಾಜ್ ಬರೆದಿರುವ ಈ ಹಾಡಿಗೆ ರಾಗ ಪೋಣಿಸಿದ್ದಾರೆ ಗುರುಕಿರಣ್. ಸದ್ಯದ ಟ್ರೆಂಡಿಂಗ್ ವಾಯ್ಸ್ ಸಂಚಿತ್ ಹೆಗ್ಡೆ ಭಾವ ತುಂಬಿ ಹಾಡಿಗೆ ಜೀವ ತುಂಬಿದ್ದಾರೆ.

ಯುವ ಅನ್ನೋ ಹೊಸ ಪ್ರತಿಭೆ ನ್ಯೂರಾನ್ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಯುವಗೆ ಜೋಡಿಯಾಗ ನೇಹಾ ಪಾಟಿಲ್ ಸಾಥ್ ನೀಡಿದ್ದಾರೆ. ಕಿಚ್ಚ ಸುದೀಪ್​ರ ಪೈಲ್ವಾನ್ ವಿಲನ್ ಕಬೀರ್ ದುಹಾನ್ ಸಿಂಗ್ ಖಳನಟನಾಗಿ ನ್ಯೂರಾನ್​ ಚಿತ್ರದಲ್ಲಿ ಧಗ ಧಗಿಸಲಿದ್ದಾರೆ. ವಿಕಾಸ್ ಪುಷ್ಪಗಿರಿ ನ್ಯೂರಾನ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಶೂಟಿಂಗ್ , ಎಡಿಂಗ್ , ಡಬ್ಬಿಂಗ್ ಗಳಂತಹ ಎಲ್ಲಾ ವಿಂಗ್​​ಗಳನ್ನು ಮುಗಿಸಿಕೊಂಡಿರುವ ನ್ಯೂರಾನ್ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದೆ. ಅಫಿಶಿಯಲ್ ಆಗಿ ಡೇಟ್ ಕೂಡ ಅನೌನ್ಸ್ ಮಾಡೋ ಧಾವಂತದಲ್ಲಿದೆ ಚಿತ್ರತಂಡ.

Recommended For You

About the Author: Sushmitha T S

Leave a Reply

Your email address will not be published. Required fields are marked *