ರಿಲೀಸ್ ಆದ ಎರಡೇ ವಾರಕ್ಕೆ ವಾರ್ ಸಿನಿಮಾ ಗಳಿಸಿದ್ದೆಷ್ಟು ಕೋಟಿ ಗೊತ್ತಾ..?

ಹೃತಿಕ್​​ ರೋಷನ್​​ ವರ್ಸಸ್​​​ ಟೈಗರ್​​ ಶ್ರಾಫ್​​ ವಾರ್​​ ಬಾಕ್ಸಾಫೀಸ್​​ ಬ್ಯಾಂಗ್​ ಮಾಡ್ತಿದೆ. ಚಿತ್ರದಲ್ಲಿ ಸೋಲ್ಜರ್​ ಕಬೀರ್​​​​ ಅವತಾರದಲ್ಲಿ ಹೃತಿಕ್​ ರೋಷನ್​​ ಬಾಡಿ ನೋಡಿದವರು ಕಳ್ದೋಗಿದ್ದಾರೆ. ಅರೇ, ಸೂಪರ್​​ 30 ಚಿತ್ರದಲ್ಲಿ ನಟಿಸಿದ ಹೃತಿಕ್​ ಇವ್ರೇನಾ..? ಅಂತ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ, ಈ ತರ ಬಾಡಿ ಬಿಲ್ಡ್​ ಮಾಡೋಕ್ಕೆ ಗ್ರೀಕ್​ ಗಾಡ್​​ ಹೃತಿಕ್​ ಪ್ರಾಣವನ್ನೇ ಪಣವಾಗಿಟ್ಟಿದ್ರು ಅಂದ್ರೆ, ಅಚ್ಚರಿಯಾಗುತ್ತೆ.

ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ ಹೃತಿಕ್​- ಟೈಗರ್ ವಾರ್
ಎರಡೇ ವಾರಕ್ಕೆ 225 ಕೋಟಿ ಬಾಚಿದ ಆ್ಯಕ್ಷನ್​ ಥ್ರಿಲ್ಲರ್
ಹಾಲಿವುಡ್​ ರೇಂಜ್​ ಆ್ಯಕ್ಷನ್​ ಥ್ರಿಲ್ಲರ್​​ ವಾರ್​ ಬಾಕ್ಸಾಫೀಸ್​​​ನಲ್ಲಿ ಹೊಸ ದಾಖಲೆ ಬರೆದಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು, ಬ್ಲಾಕ್​ ಬಸ್ಟರ್​ ಹಿಟ್​ ಲಿಸ್ಟ್​ ಸೇರಿದೆ. ರಾ ಏಜೆಂಟ್​​ ಗುರು-ಶಿಷ್ಯರಾಗಿ ಹೃತಿಕ್​ ಮತ್ತು ಟೈಗರ್​ ಶ್ರಾಫ್​ ಅಬ್ಬರಿಸಿದ್ದಾರೆ. ಇವರಿಬ್ಬರ ಪೈಪೋಟಿ ಪ್ರೇಕ್ಷಕರಿಗೆ ಸಖತ್​ ಮಜಾ ಕೊಡ್ತಿದೆ. ಸೋಲ್ಜರ್​ಗಳಾಗಿ ಇವರಿಬ್ಬರ ಫಿಜಿಕ್​​ ಎಲ್ಲರ ಹುಬ್ಬೇರಿಸಿದೆ. ಸಿಕ್ಸ್​​​ಪ್ಯಾಕ್​ ಹ್ಯಾಬ್ಸ್​​ನಲ್ಲಿ ಇಬ್ರು ಶರ್ಟ್​​ ಲೆಸ್ಸಾಗಿ ಹೊಡೆದಾಡಿ ಸಖತ್​ ಕಿಕ್​ ಕೊಡ್ತಿದ್ಧಾರೆ. ಕಬೀರ್​ ಪಾತ್ರಕ್ಕಾಗಿ ಹೃತಿಕ್​​ ರೋಷನ್​ ಟಾನ್ಸ್​​ಫರ್​ಮೇಷನ್​ ಅಂತೂ ಸಿಂಪ್ಲಿ ಸೂಪರ್ಬ್​​.

‘ಸೂಪರ್​ 30’ ಆನಂದ್​​ ರಾ ಏಜೆಂಟ್​ ಕಬೀರ್​​ ಆಗಿದ್ಹೇಗೆ..?!
ಟೈಗರ್​ಗೆ ಟಕ್ಕರ್​ ಕೊಡೋಕ್ಕೆ ಹೇಗಿತ್ತು ಹೃತಿಕ್​ ವರ್ಕ್ ಔಟ್..?
ಬಾಲಿವುಡ್​​ನ ಗ್ರೀಕ್​ ಗಾಡ್​ ಅಂತ್ಲೇ ಫೇಮಸ್​ ಆಗಿರೋ ಹೃತಿಕ್​ ರೋಷನ್​, ಫಿಟ್ನೆಸ್​​, ವರ್ಕೌಟ್​​​ ಬಗ್ಗೆ ದೂಸ್ರಾ ಮಾತಿಲ್ಲ. ಸೆಕ್ಸಿಯೆಸ್ಟ್ ಏಷ್ಯನ್ ಮ್ಯಾನ್​, ಹಾಟೆಸ್ಟ್​ ಮ್ಯಾನ್​ ಆನ್​ ಪ್ಲಾನೆಟ್​​ ಅನ್ನೋ ಬಿರುದುಗಳನ್ನ ಪಡ್ಕೊಂಡಿರೋ ಹೃತಿಕ್​​, ತಮ್ಮ ಸಿಕ್ಸ್​​ಪ್ಯಾಕ್​​​ ಟೋನ್ಡ್​​ ಬಾಡಿಯಿಂದ ಬಾಲಿವುಡ್​ನ ಬಲು ಆಕರ್ಷಕ ನಟ ಅಂತ್ಲೇ ​​ಗುರ್ತಿಸಿಕೊಂಡಿದ್ದಾರೆ. ಆದ್ರೆ, ಸೂಪರ್​ 30 ಚಿತ್ರದ ಪಾತ್ರಕ್ಕಾಗಿ ಹೃತಿಕ್ ಕೊಂಚ ತೂಕ ಹೆಚ್ಚಿಕೊಂಡಿದ್ರು. ಇದೇ ಹೃತಿಕ್,​​ ವಾರ್​ ಸಿನಿಮಾದಲ್ಲಿ ಕಬೀರ್​ ಪಾತ್ರ ಮಾಡ್ಬೇಕು ಅಂದಾಗ ತೂಕ ಇಳಿಸಿಕೊಳ್ಳೋದು ಅನಿವಾರ್ಯವಾಗಿತ್ತು.

ಸಿಕ್ಸ್​​ ಪ್ಯಾಕ್​ ಬಾಡಿ ಬಿಲ್ಡ್​ ಮಾಡೋದು ಅಷ್ಟು ಸುಲಭದ ಮಾತಲ್ಲ.. ಟೈಗರ್​​ ಶ್ರಾಫ್​​ ತಮ್ಮ ಟೋನ್ಡ್​ ಬಾಡಿಯಿಂದ್ಲೇ ಫೇಮಸ್​. ವಾರ್​ ಸಿನಿಮಾದಲ್ಲಿ ನಟಿಸೋ ಹೊತ್ತಿಗೆ ಹೃತಿಕ್​​ ಸೊಂಟದ ಸುತ್ತಾ ಇದ್ದ ಬೊಜ್ಜನ್ನ ಕರಗಿಸಲೇಬೇಕಿತ್ತು. ಅದಕ್ಕಾಗಿ ಹಗಲು ರಾತ್ರಿ ಜಿಮ್​ನಲ್ಲಿ ಬೆವರಿಳಿಸಿದ್ದಾರೆ. ಜಿಮ್​ ಟ್ರೈನರ್​​ನ ಮನಸ್ಸಿನಲ್ಲೇ ಶಪಿಸುತ್ತಾ ಪರ್ಫೆಕ್ಟ್​ ಬಾಡಿ ಹೊಂದಲು ಹೋರಾಟ ನಡೆಸಿದ್ದಾರೆ..

ಸ್ಲಿಪ್​ ಡಿಸ್ಕ್​ ಸಮಸ್ಯೆ ಲೆಕ್ಕಿಸದೇ ಜಿಮ್​ನಲ್ಲಿ ಬೆವರಿಳಿಸಿರೋ ಕಬೀರ್..!
ಪ್ರಾಣವನ್ನ ಪಣಕ್ಕಿಟ್ಟು ವರ್ಕ್​​ಔಟ್​ ನಡೆಸಿರೋ ಹೃತಿಕ್​ ರೋಷನ್..!
ಹೃತಿಕ್​ ರೋಷನ್​ ಸ್ಲಿಪ್​ ಡಿಸ್ಕ್​ ಸಮಸ್ಯೆಯನ್ನು ಲೆಕ್ಕಿಸದೇ ಜಿಮ್​ನಲ್ಲಿ ವರ್ಕ್​ಔಟ್​ ಮಾಡಿದ್ಧಾರೆ. ತಿಂಗಳುಗಟ್ಟಲೇ ಜಿಮ್​ ವರ್ಕ್​​ಔಟ್​, ಡ್ಯಾನ್ಸ್​ ಅಂತ ದೇಹವನ್ನ ವಿಧವಿಧವಾಗಿ ದಂಡಿಸಿದ್ದಾರೆ. ಒಂದು ವರ್ಷ ಮಾಡಬೇಕಾದ ಕಸರತ್ತನ್ನ ವಾರ್​ ಚಿತ್ರಕ್ಕಾಗಿ ಒಂದೆರಡು ತಿಂಗಳಲ್ಲಿ ಮಾಡಿ ಮುಗಿಸಿದ್ದಾರೆ. ಅದರ ಪ್ರತಿಫಲವನ್ನೇ ಈಗ ಪ್ರೇಕ್ಷಕರು ತೆರೆಮೇಲೆ ನೋಡ್ತಿದ್ದಾರೆ. ಅದಕ್ಕಾಗಿ ನಡೆಸಿದ ಇಂಟೆನ್ಸ್​​​ ವರ್ಕ್​ಔಟ್​​​ ಸೆಷನ್​ ವಿಡಿಯೋವನ್ನ ಸ್ವತ: ಹೃತಿಕ್​ ರೋಷನ್​ ಶೇರ್​ ಮಾಡಿದ್ದಾರೆ.

ಹೃತಿಕ್​ ರೋಷನ್​ ದೇಹ ಕಟ್ಟೋದಕ್ಕೆ ತಂದೆ ರಾಕೇಶ್​ ರೋಷನ್​ ಸಹಾಯ ಮಾಡಿದ್ದಾರೆ. ಅಡಿಗಡಿಗೂ ಜೊತೆಗಿದ್ದು, ಪರ್ಫೆಕ್ಟ್​​ ಟೋನ್ಡ್​ ಬಾಡಿ ಶೇಪ್​ ಬರುವಂತೆ ನೋಡಿಕೊಂಡಿದ್ದಾರೆ. ಸದ್ಯ ಹೃತಿಕ್​ ರೋಷನ್​ ಟಾನ್ಸ್​ಫರ್​ಮೇಷನ್​ ವೀಡಿಯೋ ಸಿಕ್ಕಾಪಟ್ಟೆ ವೈರಲ್ಲಾಗಿದೆ.. ರಾ ಏಜೆಂಟ್​ ಕಬೀರ್​ ಮತ್ತೊಂದು ಮುಖವನ್ನ ನೋಡಿ ಫಿದಾ ಆಗಿದ್ದಾರೆ. ಅಭಿಮಾನಿಗಳು ದೇಹ ದಂಡಿಸೋಕ್ಕೆ ಈ ವೀಡಿಯೋ ಪ್ರೇರೇಪಿಸುವಂತಿದೆ.
ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *