‘ಬಕೆಟ್ ಹಿಡಿದವರ ರೀತಿ ಪ್ರಧಾನಿಯನ್ನ ಹೊಗಳುತ್ತಾರೆ ಥತ್’

ಬೆಂಗಳೂರು: ನೆರೆ ಪರಿಹಾರ ವಿಚಾರವಾಗಿ ಇಂದು ಅಧಿವೇಶನದಲ್ಲಿ ಮಾತನಾಡಿದ ಆರ್.ಬಿ.ತಿಮ್ಮಾಪುರ್, ಬಿಜೆಪಿ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೆರೆ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿ ಅವಕಾಶ ಸಿಗದ ಬಗ್ಗೆ ಆಕ್ರೋಶ ಹೊರಹಾಕಿದ ತಿಮ್ಮಾಪುರ್, ಯಾಕೆ ಯಡಿಯೂರಪ್ಪ ಬೇಡವಾದ ಕೂಸಾ..? ಕೇಂದ್ರದಲ್ಲಿ ನಮ್ಮ ಮುಖ್ಯಮಂತ್ರಿಗಳ ವಿರುದ್ಧ ಅಸಡ್ಡೆ ಭಾವನೆ ಇದೆ. ಕೇಂದ್ರದ ಬಳಿ ಯಾಕೆ ರಾಜ್ಯ ನಿಯೋಗ ಹೋಗ್ಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಮುಧೋಳ ಜನರ ಸಂಕಷ್ಟ ನೋಡ್ಲಿಕ್ಕೆ ಆಗೊಲ್ಲ. ಊರೇ ಮುಳುಗಿ ಹೋಗಿದೆ. ಆದ್ರೆ ಅವರಿಗೆ ಇನ್ನೂ ಪರಿಹಾರ ಬಂದಿಲ್ಲ. ಸಂತ್ರಸ್ತರು ಆಸ್ಪತ್ರೆಗೆ ಹೋಗಲಾರದೆ ಸಾಯುತ್ತಿದ್ದಾರೆ. ಪ್ರವಾಹಕ್ಕೆ ಈಡಾದವರಿಗೆ ಪರಿಹಾರದ ಜೊತೆಗೆ ಸತ್ತವರ ಕುಟುಂಬಕ್ಕೂ ಪರಿಹಾರ ಕೊಡಬೇಕು ಎಂದು ತಿಮ್ಮಾಪುರ್ ಆಗ್ರಹಿಸಿದ್ದಾರೆ.

ನಾವು 33ಸಾವಿರ ಕೋಟಿ ಪರಿಹಾರ ಕೇಳಿದ್ರೆ, ಕೇಂದ್ರ ಕೊಟ್ಟಿದ್ದು ಮಾತ್ರ 1,200 ಕೋಟಿ ರೂಪಾಯಿ. ಕೇಂದ್ರದ ಅನುದಾನ ಎಲ್ಲಿಗೆ ಸಾಲುತ್ತೆ…? ಯಾರನ್ನ ನೋಡಿಕೊಳ್ಳಕಾಗುತ್ತೆ ಆ ಹಣದಲ್ಲಿ..? ಬಕೆಟ್ ಹಿಡಿದವರ ರೀತಿ ಪ್ರಧಾನಿಯನ್ನ ಹೊಗಳುತ್ತಾರೆ ಥತ್. 1,200 ಕೋಟಿ ಎಲ್ಲಿಗೆ ಹಂಚಿಕೆ ಮಾಡ್ತೀರಿ..? ಎಂದು ತಿಮ್ಮಾಪುರ ಸಾಲು ಸಾಲು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

Recommended For You

About the Author: Shravani Bhat

Leave a Reply

Your email address will not be published. Required fields are marked *