ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಕಿಚ್ಚ- ದಚ್ಚು ಬಿಗ್ ಫೈಟ್..?!

ಅದೇನು ಬ್ಯಾಡ್ ಟೈಮೋ ಏನೋ ಗೊತ್ತಿಲ್ಲ. ಬ್ಯಾಡ ಬ್ಯಾಡ ಅಂದ್ರೂ ಮತ್ತೆ ಮತ್ತೆ ಬಾಕ್ಸಾಫೀಸ್ ಕ್ಲ್ಯಾಶ್​ಗೆ ಅಣಿ ಆಗ್ತಾ ಇರುತ್ವೆ ಇವ್ರ ಸಿನಿಮಾಗಳು. ಒಂದ್ಕಾಲದಲ್ಲಿ ಕುಚಿಕು ಗೆಳೆಯರ ತರಹ ಇದ್ದ ಕಿಚ್ಚ- ದಚ್ಚು ಇದೀಗ ನಾನೊಂದು ತೀರ ನೀನೊಂದು ತೀರ. ಅದ್ರಂತೆ ಸಿನಿಮಾಗಳು ಕೂಡ ಒಂದೇ ದಿನ ರಿಲೀಸ್ ಆಗ್ತಿರೋದು ಅಭಿಮಾನಿಗಳಲ್ಲಿ ಆತಂಕ ಹುಟ್ಟಿಹಾಕಿದೆ.

ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಕಿಚ್ಚ- ದಚ್ಚು ಬಿಗ್ ಫೈಟ್..!!
ಒಂದೇ ದಿನ ಒಡೆಯ- ಬಲ್ಲಿ ಸಿಂಗ್ ಮುಖಾಮುಖಿ..?
ಕುರುಕ್ಷೇತ್ರ- ಪೈಲ್ವಾನ್​ನಲ್ಲಿ ಆಗದೇ ಇರೋದು ಈಗ್ಯಾಕೆ..?
ಒಂದು ಪ್ಯಾನ್ ಇಂಡಿಯಾ- ಮತ್ತೊಂದು ಸೌತ್ ಇಂಡಿಯಾ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದರ್ಶನ್ ಈಗ ಸ್ನೇಹಿತರಲ್ಲ. ಒಂದೇ ಚಿತ್ರರಂಗದ ಇಬ್ಬರು ಸ್ಟಾರ್ಸ್​ ಅಷ್ಟೇ. ಅವರ ಪಾಡಿಗೆ ಅವರು ಅವ್ರ ಅಭಿಮಾನಿಗಳು, ಇವ್ರ ಪಾಡಿಗೆ ಇವರು ಇವ್ರ ಅಭಿಮಾನಿಗಳು ಸಿನಿಮಾ ಮಾಡ್ತಾ, ರಿಲೀಸ್ ಸಂಭ್ರಮಾಚರಣೆ ಮಾಡ್ತಾ ಬರ್ತಿದ್ದಾರೆ. ಅದ್ರಲ್ಲೂ ಇವರ ಸಿನಿಮಾಗಳು ಬಾಕ್ಸಾಫೀಸ್ ಕ್ಲ್ಯಾಶ್ ಆಗುತ್ವೆ ಅಂದ್ರೆ ಎಲ್ಲಿಲ್ಲದ ಕುತೂಹಲ, ಆತಂಕ ಹೀಗೆ ಏನೇನೋ ವಿಪರ್ಯಾಸಗಳು & ವಿಕೋಪಗಳು.

ಇದನ್ನ ಈಗ್ಯಾಕೆ ಹೇಳ್ತಾ ಇದ್ದೀವಿ ಅಂದ್ರೆ, ಇತ್ತೀಚೆಗೆ ದಬಾಂಗ್ 3 ಚಿತ್ರದ ಕಿಚ್ಚ ಬಲ್ಲಿ ಸಿಂಗ್ ಫಸ್ಟ್ ಲುಕ್ ರಿವೀಲ್ ಆಗಿತ್ತು. ಮಾಣಿಕ್ಯನ ಬಿಟೌನ್ ಖದರ್ ನೋಡಿ ಇಡೀ ಇಂಡಿಯನ್ ಇಂಡಸ್ಟ್ರಿ ದಂಗಾಗಿತ್ತು. ಅದ್ರಂತೆ ಡಿ ಬಾಸ್ ದಚ್ಚು ಒಡೆಯನ ಫಸ್ಟ್ ಲುಕ್ ಕೂಡ ಅಫಿಶಿಯಲ್ ಆಗಿ ಹೊರಬಿದ್ದಿತ್ತು. ಇದನ್ನ ಇಬ್ಬರೂ ಸ್ಟಾರ್ ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ರು.

ಇದೀಗ ಇವೆರಡೂ ಸಿನಿಮಾಗಳು ಡಿಸೆಂಬರ್ 20ಕ್ಕೆ ಒಟ್ಟೊಟ್ಟಿಗೆ ತೆರೆಗೆ ಬರ್ತಿವೆ ಅನ್ನೋ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಒಂದಷ್ಟು ವೆಬ್ ಪೋರ್ಟಲ್​ಗಳಲ್ಲಿ ಜೋರಾಗಿ ಹರಿದಾಡ್ತಿವೆ. ಒಂದು ಪ್ಯಾನ್ ಇಂಡಿಯಾ ಮೂವಿ ಮತ್ತೊಂದು ಪಕ್ಕಾ ಸೌತ್ ಮೂವಿ. ಆದರೂ ಸಹ ಈ ಮ್ಯಾಟರ್ ಕೇಳಿ ಬಾಕ್ಸಾಫೀಸ್ ಶೇಕ್ ಆಗ್ತಿದೆ. ಇದರಿಂದ ಇಬ್ಬರಿಗೂ ಲಾಸ್ ಆಗೋ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಅಂದಹಾಗೆ ಈ ಹಿಂದೆ ತೆರೆಕಂಡ ಕಿಚ್ಚ- ದಚ್ಚುವಿನ ಪೈಲ್ವಾನ್ ಹಾಗೂ ಕುರುಕ್ಷೇತ್ರ ಸಿನಿಮಾಗಳು ಕೂಡ ಒಂದೇ ದಿನ ಬಿಗ್ ಸ್ಕ್ರೀನ್ ಆವರಿಸಿಕೊಳ್ಳುತ್ವೆ ಎನ್ನಲಾಗ್ತಿತ್ತು. ಆದ್ರೆ ಅದೃಷ್ಟವಶಾತ್ ಎರಡೂ ಬೇರೆ ಬೇರೆ ಸಮಯದಲ್ಲಿ ರಿಲೀಸ್ ಆಗಿ ದೊಡ್ಡ ಅನಾಹುತ ತಪ್ಪಿಸಿದ್ವು. ಪೈಲ್ವಾನ್​ಗಿಂತ ಕುರುಕ್ಷೇತ್ರವೇ ಕೊಂಚ ಬೇಗ ರಿಲೀಸ್ ಆಗಿ, ಎರಡೂ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷೆಗೂ ಮೀರಿ ಸೌಂಡ್ ಮಾಡಿವೆ.

ದಬಾಂಗ್ 3 ಬಾಲಿವುಡ್​ನ ಸಲ್ಮಾನ್ ಖಾನ್ ಸಿನಿಮಾ ಅನ್ನೋದಕ್ಕಿಂತ ಸುದೀಪ್​ರ ಪ್ಯಾನ್ ಇಂಡಿಯಾ ಸಿನಿಮಾ ಅನ್ನಬಹುದು. ಯಾಕಂದ್ರೆ ಸಲ್ಲೂರಷ್ಟೇ ಪವರ್​ಫುಲ್ ಆದ ಖಡಕಗ ಖಳನಾಯಕ ಬಲ್ಲಿ ಸಿಂಗ್ ಪಾತ್ರದಲ್ಲಿ ನಮ್ಮ ಕನ್ನಡದ ರನ್ನ ಕಾಣಿಸಿಕೊಳ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು ಕನ್ನಡ ಅವತರಣಿಕೆ ಕೂಡ ಬರ್ತಿರೋದು ಮತ್ತೊಂದು ಖುಷಿಯ ವಿಚಾರ.

ಮತ್ತೊಂದೆಡೆ ಮೈಸೂರು ಮೂಲದವರಾದ ದರ್ಶನ್ ಒಡೆಯ ಅನ್ನೋ ಟೈಟಲ್​ನಲ್ಲಿ ಪಕ್ಕಾ ಫ್ಯಾಮಿಲಿ ಕಮ್ ಮಾಸ್ ಎಂಟ್ರಟೈನರ್​ನಲ್ಲಿ ಅಬ್ಬರಿಸಲಿದ್ದಾರೆ. ಆ್ಯಕ್ಷನ್ ಪ್ರಿಯರ ಬ್ರಾಂಡ್ ಅಂಬಾಸಿಡರ್ ಆಗಿರೋ ದಾಸ ದರ್ಶನ್​ರ ಒಡೆಯ ಚಿತ್ರದ ಮೇಲೂ ಅತೀವ ನಿರೀಕ್ಷೆಯಿದ್ದು, ಯಾವ್ಯಾವ ಸಿನಿಮಾ ಯಾವ ಮಟ್ಟಕ್ಕೆ ಕಮಾಲ್ ಮಾಡುತ್ವೆ ಅನ್ನೋದು ಕಾದುನೋಡಬೇಕಿದೆ.
ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *