ಡಾ.ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ರೇಡ್ ಆದ ಬಗ್ಗೆ ಫುಲ್‌ ಡಿಟೇಲ್ಸ್..!

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಎರಡನೇ ದಿನವೂ ಜಾಲಾಡಿದ್ರು. ಮೆಡಿಕಲ್ ಹಾಗೂ ಇಂಜಿನಿಯರ್ ಕಾಲೇಜು ಸೀಟುಗಳ ಹಂಚಿಕೆಯಲ್ಲಿ ವಿಚಾರವಾಗಿ ಕಿಂಗ್ ಪಿನ್‌ಗಳನ್ನ ಕೂಡ ವಿಚಾರಣೆಗೆ ಒಳಪಡಿಸಿದ್ರು. ಕಾಲೇಜಿನ ಅಡ್ಮಿನ್ ಬ್ಲಾಕ್ನಲ್ಲಿ ದೇವಾಲಯವೊಂದರ ಹುಂಡಿಹಣ ಪತ್ತೆ, ತೆರಿಗೆ ಹಣವನ್ನ ಸಹ ಕಟ್ಟದೆ ಬಾಕಿ ಉಳಿಸಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ.

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಎರಡನೇ ದಿನವೂ ಐಟಿ ದಾಳಿ ಮುಂದುವರೆದಿದೆ. ನಗರದ ಮರಳೂರಿನ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಂಜಾನೆ 8 ಗಂಟೆ ಬಳಿಕ ಐಟಿ ಅಧಿಕಾರಿಗಳು ತಮ್ಮ ಕೆಲಸ ಮುಂದುವರೆಸಿದ್ರು. ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ನಲ್ಲಿ ಎರಡನೇ ದಿನದ ಶೋಧ ಕಾರ್ಯ ಮಧ್ಯಾಹ್ನ 2.30 ಕ್ಕೆ ಪೂರ್ಣಗೊಳಿಸಿ ತೆರಳಿದ್ರು. ಈ ವೇಳೆ ಆಡಳಿತ ಕಚೇರಿಯಲ್ಲಿ ಕೆಲವು ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಐಟಿ ಅಧಿಕಾರಿಗಳು ಇನ್ನಷ್ಟು ದಾಖಲೆಗಳ ಸಂಗ್ರಹದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಪರಮೇಶ್ವರ್ ಸಹೋದರ ಶಿವಪ್ರಸಾದ್ ಅವರ ಮಗ ಆನಂದ್ ವಿಚಾರಣೆಗೆ ಬೆಂಗಳೂರಿನಲ್ಲಿ ಹಾಜರಾಗಿದ್ದರು. ಬೆಳಗಿನಿಂದ ಸಂಜೆಯವರೆಗೂ ತುಮಕೂರಿನ ಸಪ್ತಗಿರಿ ಬಡಾವಣೆಯ ಮನೆಯಲ್ಲಿ ತಪಾಸಣೆ ನಡೆಸಿದರು. ಇನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಮಹಾ ವಂಚನೆಯ ಆರೋಪವೊಂದು ಕೇಳಿಬಂದಿದೆ. ಐಟಿ ಅಧಿಕಾರಿಗಳಿಗೆ ಮಹಾ ವಂಚನೆಯ ದಾಖಲೆ ಲಭ್ಯವಾಗಿದೆ. ಕೋಟಿಗಟ್ಟಲೆ ತೆರಿಗೆ ಕಟ್ಟದೆ ಶಿಕ್ಷಣ ಸಂಸ್ಥೆ ವಂಚನೆ ಮಾಡಿದೆ ಅನ್ನೋ ಮಾಹಿತಿ ಲಭ್ಯವಿದೆ. ಶಿಕ್ಷಣ ಸಂಸ್ಥೆಯ ಜಾಗದ ತೆರಿಗೆಯನ್ನ ತುಮಕೂರು ಮಹಾನಗರ ಪಾಲಿಕೆಗೆ ಕಟ್ಟದೆ 2002 ರಿಂದ ಕಟ್ಟಿಲ್ಲಾ. ಪಾಲಿಕೆಗೆ ಕಟ್ಟಬೇಕಾದ ಸುಮಾರು 2ಕೋಟಿ ರೂ ತೆರಿಗೆ ಕಟ್ಟುವಂತೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.

ಮೆಡಿಕಲ್ ಕಾಲೇಜಿನ ಸೀಟುಗಳ ಹಂಚಿಕೆಯಲ್ಲಿ ಗೋಲ್ ಮಾಲ್ ನಲ್ಲಿ ಪ್ರಮುಖ ಕಿಂಗ್‌ಪಿನ್‌ಗಳಾದ ರವಿ, ಶ್ರೀಜು ,ರಾಬಿನ್ , ಸುಪ್ರೀತ್ ಅವರು ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಸೀಟುಗಳನ್ನ ಕೋಟ್ಯಾಂತರ ರೂಪಾಯಿಗಳಿಗೆ ಹಂಚಿಕೆ ಆರೋಪ ಕೇಳಿದಲ್ಲಿ ಅವರನ್ನೂ ವಿಚಾರಣೆ ಮಾಡಲಾಗಿದೆ. ಪ್ರತಿವರ್ಷ 50 ಕೋಟಿವರೆಗೂ ಮೆಡಿಕಲ್ ಸೀಟ್‌ಗಳನ್ನು ಡೀಲ್ ಮಾಡಿ, ಮಧ್ಯವರ್ತಿಗಳು ಮಾರಾಟ ಮಾಡ್ತಿದ್ದರು ಎನ್ನಲಾಗಿದೆ. ಅಲ್ಲದೇ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿಪ್ರಕಾಶ್ ಹಾಗೂ ಅಕೌಂಟ್ ವಿಭಾಗದ ಸಿಬ್ಬಂದಿಯನ್ನ ವಿಚಾರಣೆ ಮಾಡಿ, ಇನ್ನಷ್ಟು ಬ್ಯಾಂಕಿನ ಮೂಲ ದಾಖಲೆಗಳ ಪರಿಶೀಲನೆಯಲ್ಲಿ ನಡೆಸಿದ್ದಾರೆ.

ಇನ್ನಷ್ಟು ದಾಖಲೆಗಳ ವಿಚಾರಣೆಗೆ ಪರಮೇಶ್ವರ್ ಆಪ್ತ ಕುಮಾರ್ ಭಾಸ್ಕರಪ್ಪ ಅವ್ರನ್ನ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ನಡುವೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಟೌನ್ ಹಾಲ್‌ನಲ್ಲಿ ಕೈ ನಾಯಕರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ್ರು. ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ನಾಳೆಯೂ ಕೆಲವು ಕಡೆಗಳಲ್ಲಿ ಐಟಿ ತನ್ನ ಭೇಟಿ ಕಾರ್ಯ ಮುಂದುವರೆಸಲಿದೆ. ಅನ್ನೋ ಮಾಹಿತಿ ಇದೆ. ಅಧಿಕಾರಿಗಳ ತನಿಖೆಯಿಂದ ಪರಂ ಅವ್ಯವಹಾರ ನಡೆಸಿದ್ದಾರೆ ಇಲ್ವಾ ಅನ್ನೋದಕ್ಕೆ ಹಲವು ದಿನ ಕಾಯಲೇಬೇಕು.
ಕ್ಯಾಮರಾಮ್ ಹರೀಶ್‌ಕುಮಾರ್ ಜೊತೆ ಟಿ.ಯೋಗೀಶ್ ಟಿವಿ-5, ತುಮಕೂರು.

Recommended For You

About the Author: Dayakar

Leave a Reply

Your email address will not be published. Required fields are marked *