‘ಯಾವ ವೇದಿಕೆ ಕೊಟ್ರೂ, ಕನ್ನಡ ಮಾತಾಡೋಕ್ಕೆ ನಾನ್ಯಾವತ್ತೂ ಹಿಂಜರಿಯಲ್ಲ’

ಕಿಚ್ಚ ಸುದೀಪ್ ಅವರಿಗೆ ಡಬಲ್ ಸಂಭ್ರಮ ಸಡಗರ. ಅಭಿನಯ ಚಕ್ರವರ್ತಿಗೆ ಇನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಮತ್ತಷ್ಟು ಕೆಲಸ ಮಾಡಬೇಕು ಅನ್ನೋ ಹುರುಪು ಬಂದಿದೆ. ಕಿಚ್ಚನ ಕಲಾಸಾಧನೆಗೆ ಇಡೀ ಇಂಡಿಯಾ ಮೆಚ್ಚಿಕೊಂಡಾಡುತ್ತಿದೆ , ಕನ್ನಡ ಪರ ಸಂಘಟನೆಗಳು ಬಹುಪರಾಕ್ ಅಂತ ಸನ್ಮಾನಿಸಿವೆ.

ಅಭಿನಯ ಚಕ್ರವರ್ತಿಗೆ ಕನ್ನಡ ಸಂಘಟನೆಗಳು ಉಘೇ ಉಘೇ..!
ಸೈರಾ ಕನ್ನಡ ವರ್ಷನ್​​ ಸಕ್ಸಸ್​ನಿಂದ ಎದ್ದಿದೆ ಹೊಸ ಚೈತನ್ಯ ಬುಗ್ಗೆ..!
ಅವುಕು ರಾಜನ ಗತ್ತು- ಗೈರತ್ತಿಗೆ ಇಡೀ ಇಂಡಿಯಾ ಸ್ಟನ್..!!
ಸೈರಾ ನರಸಿಂಹರೆಡ್ಡಿ ಜೊತೆ ಸಕ್ಸಸ್ ಹಂಚಿಕೊಂಡ ಪೈಲ್ವಾನ್..!
ಡಬ್ಬಿಂಗ್ ಕುರಿತು ಅಭಿನಯ ಚಕ್ರವರ್ತಿ ಫುಲ್ ಕ್ಲ್ಯಾರಿಟಿ..!
ಕಿಚ್ಚನಿಗೆ ಸಿಗಲಿದೆ ಸಲ್ಮಾನ್ ಖಾನ್​​​​​​​ಗೆ ಕನ್ನಡ ಕಲಿಸಿದ ಕೀರ್ತಿ..!
ಮೊದ ಮೊದಲು ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ನಮ್ಮ ಭಾಷೆಯನ್ನ ಕಲಿತು ಆಡಲು ಪರಭಾಷೆ ಸಿನಿಮಾಗಳು ತುದಿಗಾಲಲ್ಲಿ ನಿಂತಿವೆ. ಈಗ ಕನ್ನಡವನ್ನು ಕಲಿಸುವ ಜವಾಬ್ದಾರಿ ಕಲಾವಿದ ಕನ್ನಡಿಗರು ಬೇಕು. ನೀವು ಕನ್ನಡ ಮಾತನಾಡೋದು ಬೇಡ ಅಂದ್ರೆ , ಪರಭಾಷ ಚಿತ್ರಗಳು ಸಲಿಸಾಗಿ ಅವರದ್ದೇ ಭಾಷೆಯನ್ನು ಆಡುತ್ತ ಜೇಬುತುಂಬ ರೊಕ್ಕವನ್ನು ತುಂಬಿಕೊಂಡು ಅವರವರ ಊರಿಗೆ ಹೋಗುತ್ತಾರೆ. ಈ ಕಾರಣಕ್ಕೆ ಕೆಲ ಮಂದಿ ಡಬ್ಬಿಂಗ್ ಬೇಕು ಎಂದು ವಾದಿಸಿದ್ದು.

ನಮ್ಮ ಸಿನಿಮಾಗಳು ಬೇರೆ ಭಾಷೆಯಲ್ಲಿ ಗೆಜ್ಜೆ ಕಟ್ಟಿ ಕುಣಿಯುತ್ತಿವೆ. ನಮ್ಮ ಸಿನಿಮಾಗಳು ದೇಶೀಯ ಮಟ್ಟದಲ್ಲಿ ಮಿನುಗುತ್ತಿವೆ. ಈಗ ಕನ್ನಡ ಚಿತ್ರರಂಗವೂ ಕೂಡ ಹುಷಾರಾಗಬೇಕು , ಮಾರುಕಟ್ಟೆಗೆ ತಕ್ಕಂಗೆ ಮಾಗಬೇಕು , ಬಾಗಬೇಕು ಒಳ್ಳೆಯ ವ್ಯಾಪಾರ ಮಾಡಿ ಗೆಲ್ಲಬೇಕು. ಡಬ್ಬಿಂಗ್ ಸಿನಿಮಾಗಳ ಚಿಕ್ಕ ಚಿಕ್ಕ ಪ್ರಯತ್ನಗಳ ನಡುವೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡ ಡಬ್ಬಿಂಗ್ ವಿಚಾರದಲ್ಲಿ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ.

ಕಿಚ್ಚನ ಕಂಚಿನ ಕಂಠಕ್ಕಾಗಿ ಸೈರಾಗೆ ಬರ್ತಿದ್ದಾರೆ ಪ್ರೇಕ್ಷಕರು..!
ರಾಜ್ಯದಲ್ಲೂ ನರಸಿಂಹ ರೆಡ್ಡಿ ಹವಾ ಜೋರಾಗಿದೆ ಗುರೂ..!!
ಸೈರಾ ಸಿನಿಮಾ ಬಹುಕೋಟಿ ವೆಚ್ಚದ ದೇಶಿಯ ಮಟ್ಟದ ಸ್ವಾತಂತ್ರ್ಯ ಸಂಗ್ರಾಮದ ಸಿನಿಮಾ. ಈ ಸಿನಿಮಾವನ್ನು ಎಲ್ಲಾ ಭಾಷೆಯಲ್ಲಿಯೂ ನೋಡಬೇಕು ಎಂದುಕೊಂಡ ಚಿತ್ರತಂಡ ಕನ್ನಡದಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡಿತ್ತು. ಸೈರಾದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕಿಚ್ಚ ಸುದೀಪ್ ಕನ್ನಡದಲ್ಲಿಯೂ ಕೂಡ ಡಬ್ ಮಾಡಿದ್ರು. ಆ ಒಂದು ಧ್ವನಿ ಈಗ ಸೈರಾವನ್ನು ಕನ್ನಡಿಗರು ಇಷ್ಟ ಪಡುವಂತೆ ಮಾಡಿದೆ. ಒಳ್ಳೆಯ ಪರಭಾಷ ಸಿನಿಮಾಗಳು ಕನ್ನಡದಲ್ಲಿಯೇ ಮಾತನಾಡಲು ಹೆದ್ದಾರಿ ಮಾಡಿಕೊಟ್ಟಿದೆ.

ದಿನದಿಂದ ದಿನಕ್ಕೆ ಸೈರಾ ಕನ್ನಡ ಅವತರಣಿಕೆಯನ್ನು ನೋಡಲು ಕನ್ನಡಿಗರು ಥಿಯೇಟರ್​ನತ್ತ ಸಾಗಿ ಬರ್ತಿದ್ದಾರೆ. ಕನ್ನಡಕ್ಕೆ ಸದಾ ಮಲತಾಯಿ ಧೋರಣೆ ಮಾಡುತ್ತ ಬಂದಿರುವ ಮಲ್ಟಿಫ್ಲೆಕ್ಸ್ ಮಂದಿಯೂ ಸೈರಾ ಸಿನಿಮಾವನ್ನು ಕನ್ನಡದಲ್ಲಿಯೇ ಪ್ರದರ್ಶಿಸುತ್ತಿವೆ. ಇದೊಂದು ಒಳ್ಳೆಯ ಬೆಳವಣಿಗೆಯೆಂದ ಕನ್ನಡ ಪರ ಸಂಘಟನೆಯಗಳು ಸುದೀಪ್ ಅವರಿಗೆ ಅಭಿನಂದಿಸಿವೆ.

ಕರ್ನಾಟಕ ರಕ್ಷಣಾ ವೇದಿಕೆ ಬನವಾಸಿ ಬಳಗ , ಕರ್ನಾಟಕ ಗ್ರಾಹಕರ ಕೂಡ , ಕರುನಾಡ ಸೇವಕರು , ಕರ್ನಾಟಕ ರಣಧೀರ ಪಡೆ ಮತ್ತು ಕರುನಾಡ ಯೋಧರು ಬಳಗದವರು ಕಿಚ್ಚ ಸುದೀಪ್ ಅವರಿಗೆ ಅಭಿನಂದಿಸಿದ್ದಾರೆ. ಕನ್ನಡದ ಭಗವದ್ಗೀತೆ ಮಂಕುತ್ತಿಮನ ಕಗ್ಗವನ್ನು ಕೊಟ್ಟು ಸನ್ಮಾನಿಸಿದ್ದಾರೆ.

ಈ ವೇಳೆ ಕಿಚ್ಚ ಸುದೀಪ್ ಮನ ಬಿಚ್ಚಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಾನು ಯಾವುದೇ ಪ್ರತಿಫಲಪೇಕ್ಷೆಯಿಂದ ಈ ಕಾರ್ಯವನ್ನು ಮಾಡಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡಿದ್ದೇನೆ. ನನ್ನ ಭಾಷೆಯನ್ನ ಮಾತನಾಡೋಕೆ ನನಗೇಕೆ ಭಯ. ಸೈರಾ ನಂತರ ಈಗ ದಬಾಂಗ್ ಚಿತ್ರದಲ್ಲಿ ಸ್ವತಃ ಸಲ್ಮಾನ್ ಖಾನ್ ಅವರೇ ಕನ್ನಡದಲ್ಲಿ ಡಬ್ ಮಾಡಲು ಪ್ರೀತಿ ವ್ಯಕ್ತಪಡಿಸಿದ್ದಾರೆ ಎಂದು ಸುದೀಪ್ ಮನಬಿಚ್ಚಿ ಮಾತನಾಡಿದ್ರು. ಕನ್ನಡ ಪರ ಹೋರಾಟಗಳಿಗೆ ನಾನು ಸದ ಸಿದ್ದ ಎಂದು ಭರವಸೆ ನುಡಿಗಳನ್ನಾಡಿದ್ರು.

ಕಲೆ ಹಿಂದೆ ಹೋದ್ರೆ ಯಶಸ್ಸು​​ ತಂತಾನೆ ಹುಡುಕಿ ಬರುತ್ತೆ..!
ದಾದಾನ ಮೊದಲು ಕಿಚ್ಚ ಭೇಟಿ ಮಾಡಿದ್ದು ಯಾವಾಗ ಗೊತ್ತೆ..?
ತೆಲುಗು ಮತ್ತು ಹಿಂದಿ ದಿಗ್ಗಜ ಕಲಾವಿದರ ಜೊತೆ ಅಷ್ಟೇ ಅಲ್ಲ, ಡಾ. ವಿಷ್ಣುವರ್ಧನ್​, ರೆಬಲ್ ಸ್ಟಾರ್​ ಅಂಬರೀಶ್​ರಂತಹ ದಿಗ್ಗಜರ ಜೊತೆ ಸಿನಿಮಾ ಮಾಡಿದವರು ಸುದೀಪ್. ಕಲೆ ಹಿಂದೆ ಹೋದ್ರೆ, ಯಶಸ್ಸು ಹುಡುಕಿ ಬರುತ್ತೆ. ದಿಗ್ಗಜ ನಟರ ಸಿನಿಮಾ ನೋಡ್ತಿದ್ದ ನಾನು ಅವರ ಜೊತೆ ನಟಿಸ್ತಿದ್ದೀನಿ ಅಂದ್ರೆ, ಅದು ತಮಾಷೆ ಮಾತಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಸುದೀಪ್ ಅವರ ನಟನೆಯಿಂದ ಇಡೀ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಜೊತೆಗೆ ಕನ್ನಡ ಭಾವುಟವನ್ನು ಕೂಡ ಮುಗಿಲೆತ್ತರಕ್ಕೆ ಹಾರಿಸುತ್ತಿದ್ದಾರೆ. ಹೀಗೆ ಸಾಗಲಿ ಅಭಿನಯ ಚಕ್ರವರ್ತಿಯ ಕಲಾ ಸೇವೆ.
ಶ್ರೀಧರ್ ಶಿವಮೊಗ್ಗ_ಎಂಟರ್​​​ಟೈನ್ಮೆಂಟ್ ಬ್ಯೂರೋ-ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *