‘ಯಡಿಯೂರಪ್ಪನವರ ಬಗ್ಗೆ ನನಗೆ ಪ್ರೀತಿಯಿದೆ, ಅನುಕಂಪವೂ ಇದೆ’

ಬೆಂಗಳೂರು: ಇಂದು ಮೊದಲ ದಿನದ ಅಧಿವೇಶನ ನಡೆದಿದ್ದು, ವಿಪಕ್ಷ ನಾಯಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ರು.

ಬರಪರಿಹಾರ ಲೇಟಾಗಿ ಕೊಟ್ಟಿದ್ದಕ್ಕೆ, ಬಿಲ್ ಪಾಸ್ ಮಾಡುವಾಗ ಅರ್ಜೆಂಟ್ ಮಾಡಿದಕ್ಕೆ, ಕೆಲ ಬಿಜೆಪಿ ಸಂಸದರು, ಶಾಸಕರು ಸರಿಯಾಗಿ ಕೆಲ ಜಿಲ್ಲೆಗಳಿಗೆ ಭೇಟಿ ಕೊಟ್ಟು, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸದ್ದಕ್ಕೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ, ಸಿಎಂ ಯಡಿಯೂರಪ್ಪ ಬಗ್ಗೆಯೂ ವ್ಯಂಗ್ಯವಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪನವರ ಬಗ್ಗೆ ನನಗೆ ಪ್ರೀತಿಯಿದೆ. ಆದರೆ ಸ್ವತಂತ್ರವಾಗಿ ಕೆಲಸ ಮಾಡೋಕೆ ಆಗ್ತಿಲ್ವಲ್ಲ. ಪಾಪ ನನಗೂ ಇದರ ಬಗ್ಗೆ ಅನುಕಂಪವಿದೆ ಎಂದು ಸಿಎಂ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ನಾನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವನು. ಐದು ವರ್ಷ ಸಿಎಂ ಆಗಿದ್ದವನು. ನನಗೆ ಪಕ್ಷದಲ್ಲಿ ಎಂದೂ, ಯಾರೂ ಹಸ್ತಕ್ಷೇಪ ಮಾಡಲಿಲ್ಲ. ಅಧಿಕಾರ ನಡೆಸೋಕೆ ಸಂಪೂರ್ಣ ಸಹಕಾರ ನೀಡಿದ್ರು. ಪಾಪ ಸಿಎಂ ಆಗಿ ಯಡಿಯೂರಪ್ಪ ಒಂದು ತಿಂಗಳು ಕಳೆದ್ರು ಸಚಿವರಿಲ್ಲದೆ ಏಕವ್ಯಕ್ತಿ ಪ್ರದರ್ಶನ ನಡೆಸಿದ್ರು. ನನಗೆ ನಮ್ಮ ಪಕ್ಷದಲ್ಲಿ ಸಂಪೂರ್ಣ ಸ್ವಾತಂತ್ರ ಕೊಟ್ಟಿದ್ದರು. ಪಾಪ ನಿಮಗೆ ಅವಕಾಶವನ್ನೇ ನೀಡ್ತಿಲ್ಲ. ಹೈಕಮಾಂಡ್‌ಗೆ ಯಡಿಯೂರಪ್ಪ ಒಲ್ಲದ ಶಿಶು. 25 ದಿನ ಮಂತ್ರಿ ಮಂಡಲ ರಚನೆಗೆ ಅವಕಾಶ ನೀಡ್ಲಿಲ್ಲ ಎಂದು ಸಿದ್ದರಾಮಯ್ಯ ಸಿಎಂ ಬಗ್ಗೆ ವ್ಯಂಗ್ಯವಾಡಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *