ಯೂಟ್ಯೂಬ್ ನೋಡಿ ಈ ಕೆಲಸ ಮಾಡಲು ಹೋಗಿ ಪೊಲೀಸರ ಅತಿಥಿಯಾದ್ರು..!

ಬೆಂಗಳೂರು: ಯೂಟ್ಯೂಬ್, ಗೂಗಲ್‌ನಿಂದ ಎಷ್ಟು ಉಪಯೋಗ ಇದ್ಯೋ ಅಷ್ಟೇ ದುರುಪಯೋಗ ಕೂಡ ಇದೆ. ಯಾಕೆ ಹೀಗೆ ಹೇಳ್ತಿದ್ದೀವಂದ್ರೆ ಇಲ್ಲೊಂದು ಐನಾತಿ ಗ್ಯಾಂಗ್ ಯೂಟ್ಯೂಬ್‌ನಲ್ಲಿ ಕಾರುಗಳ ಲಾಕ್ ಓಪನ್ ಮಾಡುವಂತಹ ಪ್ರೋಗ್ರಾಂಗಳನ್ನ ನೋಡ್ಕೊಂಡು ಕಳ್ಳತನ ಮಾಡಿ ಇದೀಗ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ರ ಅತಿಥಿಯಾಗಿದ್ದಾರೆ.

ದಿಲೀಶ್, ಶಾಜಿ ಹಾಗೂ ಅಲಿ ಅಹಮ್ಮದ್ ಬಂಧಿತ ಆರೋಪಿಗಳು. ಬಂಧಿತರ ಪೈಕಿ ಅಲಿ ಅಹಮ್ಮದ್ ಮಂಗಳೂರಿನ ಸುರತ್ಕಲ್ ಬಳಿ ಗ್ಯಾರೇಜೊಂದನ್ನ ನಡೆಸ್ತಿದ್ದು. ಕಾರನ್ನ ಕಳ್ಳತನ ಮಾಡೋಕೆ ಶಾಜಿ ಹಾಗೂ ದಿಲೀಶ್‌ನನ್ನ ಬೆಂಗಳೂರಿಗೆ ಕಳುಹಿಸಿಕೊಡ್ತಿದ್ದ.

ರಾತ್ರಿ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಯಾವೆಲ್ಲಾ ಕಾರುಗಳನ್ನ ನಿಲ್ಲಿಸಲಾಗಿದೆ ಅನ್ನೋದನ್ನ ಸರ್ವೆ ಮಾಡಿಕೊಂಡು ಹೋಗ್ತಿದ್ರು. ನಂತರ ನಡುರಾತ್ರಿ ಕಾರಿರುವ ಜಾಗಕ್ಕೆ ತೆರಳಿ ನಕಲಿ ಕೀ ಹಾಗೂ ಆಪರೇಟಿಂಗ್ ಪ್ರೋಗ್ರಾಂಗಳನ್ನ ಬಳಸಿ ಕಾರನ್ನ ಕಳ್ಳತನ ಮಾಡ್ತಿದ್ರು. ಇನ್ನು ಕದ್ದ ಕಾರನ್ನ ಟೋಲ್‌ಗಳ ಮೂಲಕ ಕೊಂಡೊಯ್ಯದೇ ಹಳ್ಳಿಗಳ ರೂಟ್‌ನಲ್ಲಿ ಹೋಗಿ ಮಂಗಳೂರು ಸೇರಿಕೊಳ್ತಿದ್ರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಾಗಲಗುಂಟೆ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳಿಂದ ನಲವತ್ತು ಲಕ್ಷ ರೂಪಾಯಿ ಮೌಲ್ಯದ 9 ಕಾರುಗಳನ್ನ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ದತ್ತರಾಜ್ ಪಡುಕೋಣೆ, ಟಿವಿ5, ಬೆಂಗಳೂರು

Recommended For You

About the Author: Dayakar

Leave a Reply

Your email address will not be published. Required fields are marked *