ಈ ಬಾರಿ ಬಿಗ್​ಬಾಸ್ ಮನೆಯ ಅತಿಥಿಗಳ್ಯಾರು ಗೊತ್ತಾ..?

ಬಿಗ್​ಬಾಸ್​.. ಬಿಗ್​ಬಾಸ್​.. ಬಿಗ್​ಬಾಸ್.. ಸದ್ಯ ಕರುನಾಡಿನಲ್ಲಿ ಬಿಗ್​ಬಾಸ್​​ ಜಪ ಶುರುವಾಗಿದೆ. ಕಿರುತೆರೆಯ ಸೂಪರ್​ ಹಿಟ್​ ರಿಯಾಲಿಟಿ ಶೋ ಹೊಸ ಸೀಸನ್​ ಸ್ಟಾರ್ಟ್​ ಆಗ್ತಿದೆ. ಕೆಲದಿನಗಳಿಂದ ಶೋ ಬಗ್ಗೆ ಕುತೂಹಲ ಕೆರಳಿಸುವಂತ ಪ್ರೋಮೋಗಳು ಪ್ರಸಾರವಾಗ್ತಿದೆ. ಬಿಗ್​ಬಾಸ್​ ಕಿಚ್ಚ ಸುದೀಪ್​, ಬಹಳ ಕ್ರಿಯೇಟಿವ್ ಆಗಿ ಮಾಡಿರೋ ಪ್ರೋಮೋಗಳಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಶೋ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ.

ಈ ಬಾರಿ ಬಿಗ್​ಬಾಸ್ ಮನೆಯ ಅತಿಥಿಗಳ್ಯಾರು ಗೊತ್ತಾ..?
ಬಿಗ್ ಮನೆ ಬಗ್ಗೆ ಬಾದ್​ಷಾ ಬಿಚ್ಚಿಟ್ಟ ರಹಸ್ಯವಾದ್ರು ಏನು..?
ಹಿಂದಿ ಬಿಗ್​ಬಾಸ್​ ಬಿಟ್ರೆ, ಕನ್ನಡ ಬಿಗ್​ಬಾಸ್​ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಬರ್ತಿದೆ. 6 ಸೀಸನ್​ಗಳು ಯಶಸ್ವಿಯಾಗಿ ಮುಕ್ತಾಯವಾಗಿದ್ದು, 7ನೇ ಸೀಸನ್​ ಇದೇ ಭಾನುವಾರದಿಂದ ಶುರುವಾಗ್ತಿದೆ. 6 ಸೀಸನ್​​ಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಈ ಬಾರಿಗೂ ಆ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ. ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೇ 100 ದಿನಗಳ ಕಾಲ ವಿವಿಧ ಕ್ಷೇತ್ರಗಳಿಗೆ ಸೇರಿದ 17 ಮಂದಿ ಸ್ಪರ್ಧಿಗಳು ದೊಡ್ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ.

ಖಾಸಗಿ ಜಿಇಸಿ ವಾಹಿನಿಯಲ್ಲಿ ಬಿಗ್​ಬಾಸ್ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಕ್ಟೋಬರ್​ 13ರ ಸಂಜೆ 6ಗಂಟೆಗೆ ಗ್ರ್ಯಾಂಡ್​ ಓಪನಿಂಗ್​ ನಡೆಯಲಿದ್ದು, ಸೋಮವಾರದಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ಕಿಚ್ಚನ ಜೊತೆ ವಾರದ ಕಥೆ ಪ್ರಸಾರವಾಗಲಿದೆ.

ಈ ಬಾರಿ ಕಾಮನ್​ ಮ್ಯಾನ್​ಗೆ ಅವಕಾಶ ಯಾಕೆ ಇಲ್ಲ..?
ಕಳೆದ ಸೀಸನ್​ ಅಭಿನಯ ಚಕ್ರವರ್ತಿಗೆ ಬೇಸರ ತಂದಿದ್ಯಾಕೆ..?
ಸದ್ಯ ಸುದ್ದಿಯಲ್ಲಿರುವ ಒಂದಷ್ಟು ಜನ ಸೆಲೆಬ್ರೆಟಿಗಳು 100 ದಿನಗಳ ಕಾಲ ಬಿಗ್​​ಬಾಸ್​ ಮನೆ ವಾಸಕ್ಕೆ ಹೋಗಲಿದ್ದಾರೆ. ಆ ಪಟ್ಟಿಯಲ್ಲಿ ಕಲಾವಿದರಾದ ಕುರಿಪ್ರತಾಪ್, ದೀಪಿಕಾ ದಾಸ್, ರಾಹುಲ್, ದುನಿಯಾ ರಶ್ಮಿ, ಗಾಯಕ ಹನುಮಂತಪ್ಪ ಹೀಗೆ ಒಂದಷ್ಟು ಜನರ ಹೆಸ್ರುಗಳು ಕೇಳಿಬರ್ತಿದೆ. ಈ ಬಾರಿ ಕಾಮನ್​ ಮ್ಯಾನ್​​ಗೆ ಬಿಗ್​ಬಾಸ್​ ಮನೆ ಪ್ರವೇಶಿಸೋ ಅವಕಾಶ ಸಿಗ್ತಿಲ್ಲ.

ಬಿಗ್​ಬಾಸ್​ ಸೀಸನ್​ 7ರ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಸುದೀಪ್​ ಮತ್ತು ವಾಹಿನಿ ಮುಖ್ಯಸ್ಥ ಪರಮೇಶ್ವರ್​ ಗುಂಡ್ಕಲ್​ ಮಾಹಿತಿ ನೀಡಿದ್ರು. ಕಾಮನ್​ಮ್ಯಾನ್​ ಕಾನ್ಸೆಪ್ಟ್​ ಕನ್ನಡದಲ್ಲೇ ಮೊದಲು ಮಾಡಿದ್ದು. ಆದ್ರೆ, ಈ ಬಾರಿ ಬೇಡ ಅಂತ್ಲೇ ಕಾಮನ್​ಮ್ಯಾನ್​ಗೆ ಅವಕಾಶಕ ಕೊಡ್ತಿಲ್ಲ ಅಂದ್ರು. ಈ ಬಾರಿಯ ಶೋ ನೋಡುಗರಿಗೆ ಮತ್ತಷ್ಟು ಮನರಂಜನೆ ಕೊಡುತ್ತೆ ಅನ್ನೋ ಆಶಾಭಾವನೆ ವ್ಯಕ್ತಪಡಿಸಿದ್ರು.

ಸೀಸನ್​ 6 ನಡೆಯುತ್ತಿರೋವಾಗ್ಲೇ ರೆಬಲ್​ ಸ್ಟಾರ್​ ಅಂಬರೀಶ್​, ಕೊನೆಯುಸಿರೆಳೆದಿದ್ರು. ಇದು ಕಿಚ್ಚನಿಗೆ ಬಹಳ ನೋವು ತಂದಿತ್ತಂತೆ. ಬಹಳ ಬೇಸರದಿಂದ್ಲೇ ಶೋನ ಕಂಪ್ಲೀಟ್​ ಮಾಡಿದ್ರಂತೆ.

ಮಲ್ಟಿಪ್ಲೆಕ್ಸ್​​​ಗಳಲ್ಲಿ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ಲೈವ್
ಇನ್ನು ಈ ಬಾರಿ ಶೋಗೆ ಮತ್ತಷ್ಟು ಖದರ್​ ತರೋಕ್ಕೆ ವಿಭಿನ್ನ ಪ್ರಯತ್ನ ಮಾಡಲಾಗ್ತಿದೆ. ಗ್ರ್ಯಾಂಡ್​ ಓಪನಿಂಗ್ ಕಾರ್ಯಕ್ರಮವನ್ನ ಮಲ್ಟಿಪ್ಲೆಕ್ಸ್​ಗಳಲ್ಲಿ ಲೈವ್​ ಸ್ಕ್ರೀನಿಂಗ್​ ಮಾಡಲಾಗ್ತಿದೆ. ಆ ಮೂಲಕ ದೊಡ್ಡ ಮಟ್ಟದಲ್ಲಿ ವೀಕ್ಷಕರನ್ನ ಸೆಳೆಯೋ ಕೆಲಸ ನಡೀತಿದೆ.

ಒಟ್ಟಾರೆ ಬಿಗ್​ಬಾಸ್​ ಕನ್ನಡ ಸೀಸನ್​ 7 ಬಹಳ ಕುತೂಹಲ ಕೆರಳಿಸಿದೆ. 100 ದಿನಗಳ ಕಾಲ ಭರಪೂರ ಮನರಂಜನೆ ಕೊಡೋದಕ್ಕೆ ಪರಮೇಶ್ವರ್​ ಗುಂಡ್ಕಲ್​ ಅಂಡ್​ ಟೀಂ ಸಿದ್ಧವಾಗಿದ್ದು, ಅವರಿಗೆ ಕಿಚ್ಚನ ಸಾಥ್​ ಸಿಕ್ತಿದೆ. ಮನೆ ಮನೆಗಳಲ್ಲಿ ಬಿಗ್​ಬಾಸ್​ ಅನ್ನೋ ಅಶರೀಶವಾಣಿ ಕೇಳೋಕ್ಕೆ ಇನ್ನೆರಡು ದಿನ ಕಾಯ್ಬೇಕಷ್ಟೆ.
ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *