ಸಿದ್ದರಾಮಯ್ಯ ನಮ್ಮ ನಾಯಕ ಅಲ್ಲ – ಎಂಟಿಬಿ ನಾಗರಾಜ್​

ಬೆಂಗಳೂರು:  ಮಾಜಿ ಸಚಿವ ಕೃಷ್ಣಬೈರೇಗೌಡರಿಗೆ ಅಧಿಕಾರ ಕಳೆದುಕೊಂಡಿದ್ದಕ್ಕೆ  ಬುದ್ದಿಭ್ರಮಣೆ ಆಗಿದೆ ಎಂದು ಎಂಟಿಬಿ ನಾಗರಾಜ್ ಮಂಗಳವಾರ​ ಆಕ್ರೋಶ ಹೊರಹಾಕಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿ ಮಾಧ್ಯಮಗಳೊಂದಿಗೆ ಕೃಷ್ಣಬೈರೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕೃಷ್ಣಬೈರೇಗೌಡರಿಗೆ ಬುದ್ದಿಭ್ರಮಣೆ ಆಗಿದೆ. ನಾನು ರಾಜಕೀಯ ಜೀವನದಲ್ಲಿ ಎಲ್ಲೂ ಹಣದ ವಿಚಾರವಾಗಿ ಮಾತನಾಡಿಲ್ಲ, ನಾನು ಮಾತನಾಡಿರುವ ಬಗ್ಗೆ ಒಂದೇ ಒಂದು ಹೇಳಿಕೆ ದಾಖಲೆ ನೀಡಲಿ ಎಂದು ಕೃಷ್ಣಬೈರೇಗೌಡ ವಿರುದ್ಧ ಎಂಟಿಬಿ ನಾಗರಾಜ್​ ಕಿಡಿಕಾರಿದರು.

ಸದ್ಯ ಸಂತೋಷ್ ಅವರನ್ನು ನಾನು ಭೇಟಿಯಾಗಿಲ್ಲ,  ಯಾರು ಭೇಟಿ ಆದರು ಅಂತ ಗೊತ್ತಿಲ್ಲ,  ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ನಾನು ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ ಎಂದು ನುಡಿದರು.

ನಂತರ ತಿಳಿಸಿದ ಅವರು, ಶರತ್ ಬಚ್ಚೇಗೌಡರು ಯಾವ ಪಕ್ಷದಿಂದಲೂ ನಿಂತುಕೊಳ್ಳಲಿ, ನಾನು ಎಲ್ಲದ್ದಕ್ಕೂ ಸಿದ್ದನಾಗಿದ್ದೇನೆ.  ಗೆಲ್ಲುವ ವಿಶ್ವಾಸವಿದೆ ಮತ್ತೊಮ್ಮೆ ನಾನು ಗೆಲ್ತೇನಿ ಎಂದು ಎಂಟಿಬಿ ನಾಗರಾಜ್​ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಆಯ್ಕೆಯಾಗುವ ವಿಚಾರವಾಗಿ ಮಾತನಾಡಿದ ಅವರು, ಯಾರೇ ವಿಪಕ್ಷ ನಾಯಕ ಆದರೂ ನಮಗೆ ಸಂಬಂಧ ಇಲ್ಲ,  ನಾವು ಪಕ್ಷ ಬಿಟ್ಟಿದ್ದೇವೆ.  ನಮ್ಮ ನಾಯಕ ಯಾರು ಅಂತ 22 ರ ನಂತರ ಹೇಳ್ತೆನೆ, ಈಗ ಸಿದ್ದರಾಮಯ್ಯ ನಮ್ಮ ನಾಯಕ ಅಲ್ಲ  ಎಂದು ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.

Recommended For You

About the Author: Dayakar

Leave a Reply

Your email address will not be published. Required fields are marked *