ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ವಿಚಾರ: ಕಾಗೇರಿ ವಿರುದ್ಧ ಸಿಎಂ ಬಿಎಸ್‌ವೈ ಅಸಮಾಧಾನ..!

ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲು ರಾಜ್ಯ ಸರ್ಕಾರದ ಒಂದು ಬಣ ಚಿಂತನೆ ನಡೆಸಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಪ್ರಸ್ತಾಪವಿಟ್ಟಿದ್ದು, ಇದನ್ನ ಸಿಎಂ ಯಡಿಯೂರಪ್ಪ ವಿರೋಧಿಸಿದ್ದಾರೆ.

ಬಿಜೆಪಿಯಲ್ಲಿ ಒಂದು ಬಣ ಕಾಗೇರಿ ನಿರ್ಧಾರಕ್ಕೆ ಸಮ್ಮತಿಸಿದ್ದು, ಇನ್ನೊಂದು ಬಣ ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಸೈ ಎಂದಿದೆ. ಈ ಬಗ್ಗೆ ಹರಿಹಾಯ್ದ ಸಿಎಂ ಯಡಿಯೂರಪ್ಪ, ನಮ್ಮವರಿಗೆ ನಾನು ಅಧಿಕಾರ ನಡೆಸುವುದು ಇಷ್ಟ ಇಲ್ಲವಾ..? ನಮ್ಮವರೇ ನಮ್ಮ ಮೇಲೆ ಪ್ರಾಬ್ಲಂ ಕ್ರಿಯೇಟ್ ಮಾಡ್ತಾರೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಮಾಧ್ಯಮ ನಿರ್ಬಂಧ ಪ್ರಸ್ತಾವನೆಯನ್ನ ಬಿಜೆಪಿ ವಿರೋಧಿಸಿತ್ತು. ಈಗ ಬಹಳಷ್ಟು ಸಮಸ್ಯೆಗಳು ಇವೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ನಮ್ಮ ಸವಾರಿ ಬೇಕಾ ಎಂದು ಯಡಿಯೂರಪ್ಪ ಗರಂ ಆಗಿದ್ದಾರೆ.

ಅಲ್ಲದೇ, ನಾವು ವಿರೋಧ ಪಕ್ಷಗಳನ್ನ ಎದುರಿಸಬೇಕು, ಆ ಕಡೆ ಗಮನ ಕೊಡಬೇಕು. ಅದನ್ನ ಬಿಟ್ಟು ನಮ್ಮ ಸರ್ಕಾರದ ಅವಧಿಯಲ್ಲೇ ಬದಲಾವಣೆ ಹೆಸರಿನಲ್ಲಿ ನಿರ್ಬಂಧ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Recommended For You

About the Author: Shravani Bhat

Leave a Reply

Your email address will not be published. Required fields are marked *