‘ಪ್ರತಾಪ್ ಸಿಂಹ ಬುದ್ದಿವಂತ ಅವನ ಜೊತೆ ಹುಷಾರಾಗಿ ಇರು’

ಮೈಸೂರು: ದಸರಾ ಅಂದರೆ ಅಂಬಾರಿ ಮೆರವಣಿಗೆ ಮಾತ್ರ ಅಂದುಕೊಂಡಿದ್ದೆ. ಅದೇನು ಮೆರವಣಿಗೆ ಮುಗಿಸಿ ಬಿಡಬಹುದು ಅಂತ ಊಹಿಸಿಕೊಂಡಿದ್ದೆ. ಆದರೆ, ಇಷ್ಟೊಂದು ಆಳವಾಗಿರುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಎಂದು ಮೈಸೂರು ಉಸ್ತವಾರಿ ಸಚಿವ ವಿ. ಸೋಮಣ್ಣ ಅವರು ಬುಧವಾರ ಹೇಳಿದರು.

ನಗರದಲ್ಲಿಂದು ಮಾತನಾಡಿದ ವಿ. ಸೋಮಣ್ಣ ಅವರು, ಇಡೀ ದಸರಾ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಮಾಧ್ಯಮದ ಸಹಕಾರದಿಂದ ದಸರಾ ವಿಶ್ವದಾದ್ಯಾಂತ ಪ್ರಚಾರ ಪಡೆದಿದೆ. ದಸರಾ ಯಶಸ್ವಿಯಾಗಲು ಮುಖ್ಯಮಂತ್ರಿ ನನಗೆ ಅವಕಾಶ ಮಾಡಿಕೊಟ್ಟಿದ್ದೇ ಇದಕ್ಕೆ ಕಾರಣ ಎಂದು ಅವರು ತಿಳಿಸಿದರು.

ಅಲ್ಲದೇ ಪ್ರತಾಪ್ ಸಿಂಹ ಅವರ ಕಾರ್ಯ ವೈಖರಿಯನ್ನು ಕೊಂಡಾಡಿದ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಪಕ್ಕದಲ್ಲಿ ಕೂರಿಸಿಕೊಂಡು ಪದೆ-ಪದೆ ಪ್ರತಾಪ್ ಸಿಂಹ ಹೆಸರು ಹೇಳಿ ಶ್ಲಾಘಿಸಿದರು. ಮೈಸೂರಿನ ಎಲ್ಲ ಎಂಎಲ್ಎ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ನಾನು ತುರ್ತಾಗಿ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಲು ಹೊರಟ್ಟಿದ್ದೇನೆ. ಆದರೆ ಎಲ್ಲರಿಗೂ ಧನ್ಯವಾದ ತಿಳಿಸಲು ತುರ್ತಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಇನ್ನು ನಾನು ಈವರೆಗೆ ದಸರಾ ಮಂತ್ರಿಯಾಗಿದ್ದೆ. ಇಂದಿನಿಂದ ವಸತಿ ಸಚಿವನಾಗಿ ಸಂಪುಟದಲ್ಲಿ ಭಾಗಿಯಾಗುತ್ತೇನೆ. ನಾಳೆಯಿಂದ ರಾಜ್ಯಾದ್ಯಂತ ಓಡಾಡಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇನೆ. ದಸರಾ ಆಚರಣೆ ಸಂದರ್ಭ ಎಲ್ಲರ ಸಹಕಾರ ಪಡೆದೆ. ಸಿದ್ದರಾಮಯ್ಯರಿಗೆ ಮೂರ್ನಾಲ್ಕು ಬಾರಿ ಕರೆ ಮಾಡಿ ಮಾತನಾಡಿದೆ. ತೀಟೆಗಾಗಿ ನಾನೇ ಎರ್ಡ್ಮೂರು ಸಲ ಸಿದ್ದರಾಮಯ್ಯರಿಗೆ ಕರೆ ಮಾತನಾಡಿದೆ. ನಾವೆಲ್ಲ ಜೊತೆ ಇದ್ದವರು ಎಂದರು.

ಅಂತೆಯೇ ಪ್ರತಾಪ್ ಸಿಂಹ ಬುದ್ದಿವಂತ ಇದ್ದಾನೆ ಅವನ ಜೊತೆ ಹುಷಾರಾಗಿ ಇರು. ಅವನನ್ನು ಸುಲಭವಾಗಿ ನಂಬಬೇಡ ಅಂತ ಸಿದ್ದರಾಮಯ್ಯ ಸಲಹೆ ಕೊಟ್ಟರು. ಆದರೂ ನಿವೇಲ್ಲಾ ಸೇರಿಕೊಂಡು ಚೆನ್ನಾಗಿ ದಸರಾ ಮಾಡುತ್ತಿದ್ದೀರಿ ಅಂತ ಹೇಳಿದರು ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *