ಅಭಿಮಾನಿಗಳಿಂದ ಟ್ರೋಲ್ ಆದ ಪಾಕ್ ಬ್ಯಾಟ್ಸ್​ ಮನ್

ಪಾಕ್ ತಂಡದ ಅನುಭವಿ ಆಟಗಾರ ಉಮರ್ ಅಕ್ಮಲ್ ತಮಗೆ ಬೇಡವಾದ ದಾಖಲೆಯೊಂದನ್ನು ಬರೆದಿದ್ದಾರೆ. ತವರಿನಲ್ಲಿ ಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅವರು ತಮಗೆ ಬೇಡವಾದ ದಾಖಲೆ ಬರೆದು ನಗೆಪಾಟಲಿಕ್ಕೀಡಾಗಿದ್ದಾರೆ.

ಮೊನ್ನೆ ಲಾಹೋರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ 64 ರನ್​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟ್​ ಮಾಡಿದ ಲಂಕಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165ರನ್ ಕಲೆ ಹಾಕಿತು. 166 ರನ್ ಬೆನ್ನಟ್ಟಿದ ಪಾಕಿಸ್ತಾನ 17. 4 ಓವರ್​ಗಳಲ್ಲಿ 101ರನ್​ಗಳಿಗೆ ಆಲೌಟ್ ಆಯಿತು.

ಈ ಪಂದ್ಯದಲ್ಲಿ ಐದನೆ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಉಮರ್ ಅಕ್ಮಲ್ ಸ್ಪಿನ್ನರ್​ ಡಿ ಸಿಲ್ವಾ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದರು. ಮೊದಲ ಟಿ20 ಪಂದ್ಯದಲ್ಲೂ ಉಮರ್ ಪ್ರದೀಪ್​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದಿದರು. ಇದರೊಂದಿಗೆ ಉಮರ್ ಗೋಲ್ಡನ್ ಡಕ್​ಔಟ್ ಎಂಬ ಹಣೆ ಪಟ್ಟಿ ಹೊತ್ತಿದ್ದಾರೆ.

ಆಡಿದ ಎರಡು ಪಂದ್ಯಗಳಲ್ಲಿ ಡಕೌಟ್ ಆಗುವ ಮೂಲಕ ಉಮರ್ ಅಕ್ಮಲ್ , ಲಂಕಾ ತಂಡದ ಮಾಜಿ ಸ್ಪೋಟಕ ಬ್ಯಾಟ್ಸ್ ಮನ್ ತಿಲಕರ್ತನೆ ದಿಲ್ಶಾನ್ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ದಿಲ್ಶಾನ್ ಆಸ್ಟ್ರೇಲಿಯಾ ಬಿಗ್​ಬ್ಯಾಶ್ ಟೂರ್ನಿಯಲ್ಲಿ ಎರಡು ಬಾರಿ ಡಕ್ ಔಟ್ ಆಗಿದರು.

ಉಮರ್ ಅಕ್ಮಲ್ ಡಕೌಟ್ ಆಗಿದ್ದೆ ತಡ ಅಭಿಮಾನಿಗಳು ಉಮರ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಫಾರ್ಮ್​ ಸಮಸ್ಯೆಯಿಂದ ಬಳಲುತ್ತಿರುವ ಉಮರ್ ಅಕ್ಮಲ್ ಮೂರು ವರ್ಷಗಳ ಹಿಂದೆ ತಂಡದ ಹೆಡ್ ಕೋಚ್ ಆಗಿದ್ದ ಮೈಕ್ ಆರ್ಥರ್ ವಿರುದ್ಧ ಕಿತ್ತಾಡಿಕೊಂಡಿದರು. ಇದೇ ಕಾರಣಕ್ಕೆ ಉಮರ್ ಅಕ್ಮಾಲ್ ಪಾಕ್ ಕ್ರಿಕೆಟ್​ ಮಂಡಳಿ ಒಂದು ಲಕ್ಷ ಡಾಲರ್ ದಂಡ ಮತ್ತು ಮೂರು ಪಂದ್ಯಗಳಿಂದ ಅಮಾನತು ಶಿಕ್ಷೆಯನ್ನ ನೀಡಿತ್ತು. ಅಮಾನತು ಶಿಕ್ಷೆ ಮುಗಿಸಿ ಬಂದ ಉಮರ್​ ಡಕೌಟ್ ಆಗಿ ತಂಡದಿಂದಲೆ ಗೇಟ್ ಪಾಸ್ ಪಡೆಯುವ ಹಂತ ತಲುಪಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *