100% ಫನ್ ಕೊಡೋಕ್ಕೆ ಬರ್ತಿದ್ದಾರೆ ವೆಂಕಿ- ನಾಗಚೈತನ್ಯ..!

ಎಸ್​ವಿಎಸ್​ಸಿ ಸಿನಿಮಾ ನೋಡಿ ಅಬ್ಬಾ..! ಪ್ರಿನ್ಸ್ ಮಹೇಶ್ ಬಾಬು- ವಿಕ್ಟರಿ ವೆಂಕಟೇಶ್ ಕಾಂಬಿನೇಷನ್ ಸೂಪರ್ ಗುರು ಅಂದುಕೊಂಡ್ರು. ಅಷ್ಟೇ ಅಲ್ಲ, ಅದೇ ರೀತಿಯ ಸಿನಿಮಾಗಳು ಮತ್ತೆ ಮತ್ತೆ ಬರ್ಲಿ ಅಂತ ಎದುರು ಕೂಡ ನೋಡ್ತಿದ್ರು. ಇದೀಗ ಅದಕ್ಕೆ ಸುದೀಪ್- ಅಂಬಿಯ ವೀರ ಪರಂಪರೆ ಚಿತ್ರಕಥೆಗಾರ ಬಾಬಿ ಮತ್ತೊಮ್ಮೆ ಮಹೂರ್ತ ಇಟ್ಟಿದ್ದಾರೆ.

ಅಂದು ಮಹೇಶ್ ಬಾಬು- ವೆಂಕಿ.. ಇಂದು ವೆಂಕಿ- ಚೈತು
‘ವೆಂಕಿ ಮಾಮ’ನಿಗೆ ‘ವೀರ ಪರಂಪರೆ’ ರೈಟರ್ ಸಾರಥಿ..!!
100% ಫನ್ ಕೊಡೋಕ್ಕೆ ಒಂದಾದ್ರು ಅಳಿಯ- ಮಾವ..!
ವಿಕ್ಟರಿ ವೆಂಕಟೇಶ್​ರಿಂದ ವಿಕ್ಟರಿ ಬಾರಿಸೋಕ್ಕೆ ಬಾಬಿ ಸ್ಕೆಚ್
ದಸರಾ ಸ್ಪೆಷಲ್ ರೀಸೆಂಟ್ ಆಗಿ ರಿಲೀಸ್ ಆದ ವೆಂಕಿ ಮಾಮ ಚಿತ್ರದ ಕಲರ್​ಫುಲ್ ಟೀಸರ್ ರಿಲೀಸ್ ಆಗಿದ್ದು, ವಿಕ್ಟರಿ ವೆಂಕಟೇಶ್ ಹಾಗೂ ಅಕ್ಕೀನೇನಿ ನಾಗಚೈತನ್ಯ ಜೋಡಿ ಮೋಡಿ ಮಾಡೋಕ್ಕೆ ಬರ್ತಿರೋ ಹಂಡ್ರೆಡ್ ಪರ್ಸೆಂಟ್ ಕಾಮಿಡಿ ಎಂಟ್ರಟೈನರ್. ಈ ಸಿನಿಮಾಗಾಗಿ ಆಫ್ ಸ್ಕ್ರೀನ್ ಅಳಿಯ- ಮಾವ, ಆನ್ ಸ್ಕ್ರೀನ್​ನಲ್ಲೂ ಅಳಿಯ- ಮಾವನಾಗಿರೋದು ಸಿನಿಪ್ರಿಯರಿಗೆ ಸಖತ್ ಕಿಕ್ ಕೊಡ್ತಿದೆ.

ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸಿನಿಮಾ ನೋಡಿ ಪ್ರಿನ್ಸ್ ಮಹೇಶ್ ಬಾಬು ಹಾಗೂ ವೆಂಕಟೇಶ್​ರನ್ನ ಮತ್ತೆ ಅದೇ ರೀತಿಯ ಫ್ಯಾಮಿಲಿ ಡ್ರಾಮಾದಲ್ಲಿ ಕಾಣೋ ಮನಸ್ಸು ಮಾಡಿದ್ರು ಟಾಲಿವುಡ್ ಸಿನಿರಸಿಕರು. ಆದ್ರೀಗ ಅದೇ ಕಾಂಬೋ ಅಲ್ಲದಿದ್ರೂ, ಅದೇ ಫೀಲ್ ಕೊಡೋ ಅಂತಹ ಅಂತಹದ್ದೇ ಮತ್ತೊಂದು ಜೋಡಿಯನ್ನ ಕರೆತರೋ ಪ್ರಯತ್ನ ಮಾಡಿದ್ದಾರೆ ಡೈರೆಕ್ಟರ್ ಬಾಬಿ. ವೆಂಕಿ ಮತ್ತು ಚೈತನ್ಯರನ್ನ ಒಂದೇ ಸಿನಿಮಾದಲ್ಲಿ ಒಂದೇ ಫ್ರೇಮ್​ನಲ್ಲಿ ಸೆರೆಹಿಡಿಯುತ್ತಿದ್ದಾರೆ.

ಅಂದಹಾಗೆ ಡೈರೆಕ್ಟರ್ ಬಾಬಿ ಮೂಲತಃ ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ರೈಟರ್. ಕನ್ನಡದ ತಾಯಿಯ ಮಡಿಲು, ಚಂಡ, ಚೈತ್ರದ ಚಂದ್ರಮ, ಚಿಕ್​ಪೇಟೆ ಸಾಚಾಗಳು ಹಾಗೂ ವೀರಪರಂಪರೆ ಸಿನಿಮಾಗಳಿಗೆ ಕಥೆ ಹಾಗೂ ಚಿತ್ರಕಥೆ ಬರೆದಿದ್ರು. ಕಿಚ್ಚ ಸುದೀಪ್ ಹಾಗೂ ಅಂಬರೀಶ್​ರ ವೀರ ಪರಂಪರೆ ಚಿತ್ರದ ನಂತ್ರ ತೆಲುಗಿನಲ್ಲೇ ಬ್ಯುಸಿ ಆಗಿದ್ದ ಬಾಬಿ, ಇದೀಗ ವೆಂಕಿ ಮಾಮನನ್ನ ಪ್ರೇಕ್ಷಕರ ಮುಂದೆ ತರ್ತಿದ್ದಾರೆ.

ಪವರ್, ಸರ್ದಾರ್ ಗಬ್ಬರ್ ಸಿಂಗ್ ಹಾಗೂ ಜೈ ಲವಕುಶ ಹೀಗೆ ಮಾಡಿದ ಮೂರೂ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ನೆಲಕಚ್ಚಿದ್ವು. ಆದ್ರೆ, ವೆಂಕಿ ಮಾಮ ಮೂಲಕ ಮೈಕೊಡವಿ ಎದ್ದು ಬರೋ ಸೂಚನೆ ಕೊಟ್ಟಿದ್ದಾರೆ ಬಾಬಿ. ಫ್ಯಾಮಿಲಿ ಆಡಿಯನ್ಸ್ ಮೆಚ್ಚೋ ಸ್ಟಾರ್ ವಿಕ್ಟರಿ ವೆಂಕಟೇಶ್​ರನ್ನ ಇಟ್ಟಿಕೊಂಡು ಸಕ್ಸಸ್ ವಿಕ್ಟರಿಗೆ ನಾಂದಿ ಹಾಡಿದ್ದಾರೆ.

ಅದೇನೇ ಇರಲಿ, ಎಫ್-2 ನಂತ್ರ ವೆಂಕಟೇಶ್ ನಟಿಸ್ತಿರೋ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಇದಾಗಿದ್ದು, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಫ್ಲೇವರ್​ನಲ್ಲಿ ಫ್ಯಾಮಿಲಿ, ಫನ್ ಹಾಗೂ ಎಮೋಷನ್ಸ್​ನಿಂದ ಸಿನಿಮಾ ಕೂಡಿರಲಿದೆ. ವೆಂಕಿ- ಮಹೇಶ್ ಬಾಬು ಕೆಮಿಸ್ಟ್ರಿ ವೆಂಕಿ-ಚೈತುನಲ್ಲಿ ಕಾಣಸಿಗ್ತಿದೆ.
ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Recommended For You

About the Author: TV5 Kannada

Leave a Reply

Your email address will not be published. Required fields are marked *