ರಾಹುಲ್ ಗಾಂಧಿಗೆ ಬೇಕು ಅಂತ್ಲೇ ಮಾಡಿದ್ರಾ ಅವಮಾನ..?

ಮಠ, ಎದ್ದೇಳು ಮಂಜುನಾಥ ರೀತಿಯ ಸೂಪರ್​ ಹಿಟ್​​ಗಳನ್ನ ಕೊಟ್ಟ ಜಗ್ಗೇಶ್​ ಮತ್ತು ಗುರುಪ್ರಸಾದ್​ ಜೋಡಿ, ಕೆಲ ಭಿನ್ನಾಭಿಪ್ರಾಯಗಳಿಂದ ಉತ್ತರ ದಕ್ಷಿಣ ದಿಕ್ಕುಗಳಂತಾಗ್ಬಿಟ್ಟಿದ್ರು. ಹಳೆಯದನ್ನೆಲ್ಲಾ ಮರೆತು 10 ವರ್ಷಗಳ ನಂತ್ರ ಪ್ರೇಕ್ಷಕರನ್ನ ನಗಿಸೋಕ್ಕಂತ ಇಬ್ರು ಒಟ್ಟಿಗೆ ಸೇರಿದ್ದಾರೆ. ಇವರಿಬ್ರ ಹ್ಯಾಟ್ರಿಕ್​ ಕಾಂಬಿನೇಷನ್​​ನಲ್ಲಿ ಬರ್ತಿರೋ ರಂಗನಾಯಕ ಸಿನಿಮಾ ಟೀಸರ್​ ಹಲ್​ಚಲ್​ ಎಬ್ಬಿಸಿದ್ದು, ವಿವಾದ ಸೃಷ್ಟಿಸೋ ಸುಳಿವು ಸಿಕ್ತಿದೆ.

ಬಹಳ ಜೋರಾಗಿದೆ ನವರಸನಾಯಕನ ‘ರಂಗ’ಪ್ರವೇಶ..!
ಕಮಲ ಹಿಡಿದ ಕೈಯಲ್ಲೇ ಕೈಯನ್ನ ಸೈಡ್​ಗೆ ತಳ್ಳಿದ ಜಗ್ಗಣ್ಣ..!!
ವಿಡಂಬನೆ, ತಮಾಷೆ, ಫಿಲಾಸಫಿ ಜಗ್ಗಣ್ಣ ಮತ್ತು ಗುರುಪ್ರಸಾದ್​ ಸಿನಿಮಾಗಳ ಟ್ರಂಪ್​ ಕಾರ್ಡ್​. 10 ವರ್ಷಗಳ ನಂತ್ರ ಇಬ್ರು ಒಟ್ಟಿಗೆ ಸೇರಿರೋದ್ರಿಂದ ಆ ಡೋಸ್​​ ಅನ್ನ ಕೊಂಚ ಹೆಚ್ಚಿಸಿದಂತೆ ಕಾಣ್ತಿದೆ. ಟೀಸರ್​​ನಲ್ಲೇ ರಂಗನಾಯಕ ಯಾವ ರೇಂಜ್​​​​ಗೆ ಪ್ರೇಕ್ಷಕರನ್ನ ರಂಜಿಸಬಹುದು ಅನ್ನೋ ಹಿಂಟ್​ ಕೊಟ್ಟಿದ್ದಾರೆ. ಆದ್ರೆ ಎಲ್ಲೋ ಒಂದು ಕಡೆ ಸಿನಿಮಾ ವಿವಾದವನ್ನು ಸೃಷ್ಟಿಸೋ ಸುಳಿವು ಸಿಗ್ತಿದ್ದು, ಟೀಸರ್​​ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದಲ್ಲಿ ರಾಜಕೀಯವನ್ನ ಎಳೆದುತಂದು, ರಾಜಕೀಯ ನಾಯಕರನ್ನ ಅಣಕ ಮಾಡಿರೋದು ಗೊತ್ತಾಗ್ತಿದೆ.

ಶ್ರೀವಿಷ್ಣು ಅವತಾರದಲ್ಲಿ ದರ್ಶನ ಕೊಟ್ಟ ರಂಗನಾಯಕ..!!
ರಾಹುಲ್ ಗಾಂಧಿಗೆ ಬೇಕು ಅಂತ್ಲೇ ಮಾಡಿದ್ರಾ ಅವಮಾನ..?
ಹರಿಕಥೆ, ಯಕ್ಷಗಾನ ಮಾದರಿಯ ಹಾಡಿನ ಹಿನ್ನಲೆಯಲ್ಲಿ ರಂಗನಾಯಕ ಟೀಸರ್ ಶುರುವಾಗುತ್ತೆ. ಶ್ರೀವಿಷ್ಣು ಅವತಾರದಲ್ಲಿ ಮಲಗಿರೋ ಜಗ್ಗಣ್ಣನನ್ನ, ಲಕ್ಷ್ಮಿಯ ಎಬ್ಬಿಸುವಂತೆ ಟೀಸರ್​​ನಲ್ಲಿ ತೋರಿಸಲಾಗಿದೆ. ಇನ್ನು ಟೀಸರ್​ನಲ್ಲಿ ರಾಹುಲ್​ ಗಾಂಧಿ ಹೆಸರನ್ನ ಅಣಕ ಮಾಡಿ ತೋರಿಸಿರೋದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ರಂಗನಾಯಕ, ಕಮಲವನ್ನ ಅಪ್ಪಿ, ಹಸ್ತವನ್ನ ಸೈಡಿಗೆ ತಳ್ಳುವಂತೆ ತೋರಿಸಿರೋದನ್ನ ನೋಡ್ತಿದ್ರೆ, ಸಿನಿಮಾದಲ್ಲಿ ಹೀಗೆ ನೇರವಾಗಿ ರಾಜಕೀಯವನ್ನ ತಂದಿದ್ದು ಸರಿನಾ ಅನ್ನೋ ಪ್ರಶ್ನೆ ಹುಟ್ಟಾಕ್ಕಿದೆ.

ರಾಜಕೀಯವನ್ನ ಸಿನಿಮಾ ಮಠಕ್ಕೆ ಎಳೆತಂದ ಗುರು ಪ್ರಸಾದ್..!
ಡಿವೋರ್ಸ್​ ಅಪ್ಲೇ ಮಾಡಿದವ್ರು ಮತ್ತೆ ಒಂದಾಗಿದ್ಯಾಕೆ ಶಿವ..?
ರಂ ರಂ ಅಂತ ಹೇಳಿ ಮಾಜಿ ಸಂಸದೆ ರಮ್ಯಾ ಅವರ ಹೆಸರನ್ನೂ ಪ್ರಸ್ತಾಪಿಸ್ತಿದ್ದಾರೆ ಅನ್ನೋರು ಇದ್ದಾರೆ. ಇನ್ನು ನೇರವಾಗಿಯೇ ರಾಹುಲ್​ ಗಾಂಧಿ ಹೆಸರನ್ನ ತೆಗೆದುಕೊಂಡಿರೋದು ಗೊತ್ತಾಗ್ತಿದೆ. ಜಗ್ಗೇಶ್​​​ ಬಿಜೆಪಿ ಮುಖಂಡರಾಗಿರೋದ್ರಿಂದ ಬೇಕಂತ್ಲೇ ಹೀಗೆ ಮಾಡಿದ್ರಾ..? ಅಥವಾ ಇದೆಲ್ಲಾ ಪ್ರಮೋಷನ್​ ಗಿಮ್ಮಿಕ್ಕಾ ಗೊತ್ತಾಗ್ತಿಲ್ಲ. ರಂಗನಾಯಕ ಟೀಸರ್​ಗಂತೂ ಭರ್ಜರಿ ರೆಸ್ಪಾನ್ಸೇ ಸಿಕ್ತಿದೆ. ನವರಸ ನಾಯಕನ ರಂಗನಾಯಕ ಅವತಾರವೂ ಅಭಿಮಾನಿಗಳಿಗೆ ಇಷ್ಟವಾಗಿದೆ. ಗುರು​, ಜಗ್ಗೇಶ್​​ ಕಾಂಬೋ ಮತ್ತೊಮ್ಮೆ ಮ್ಯಾಜಿಕ್​ ಮಾಡೋ ನಿರೀಕ್ಷೆ ಹುಟ್ಟಿದೆ.

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

About the Author: TV5 Kannada

Leave a Reply

Your email address will not be published. Required fields are marked *