ಮಠ ಸಿನಿಮಾ ಕಲೆಕ್ಷನ್ ಸೀಕ್ರೆಟ್​ ಹಂಚಿಕೊಂಡ ನವರಸ ನಾಯಕ ಜಗ್ಗೇಶ್

ನಾನೊಂದು ತೀರ ನೀನೊಂದು ತೀರ ಅಂತಿದ್ದ ಜಗ್ಗೇಶ್​ ಮತ್ತು ಗುರುಪ್ರಸಾದ್​​ ಮತ್ತೆ ಒಂದಾಗಿದ್ದಾರೆ. ಕಳೆದ ವರ್ಷವೇ ಇವರಿಬ್ಬರ ಕಾಂಬಿನೇಷನ್​​ನಲ್ಲಿ ಸಿನಿಮಾ ಬರೋ ಸುಳಿವು ಸಿಕ್ಕಿತ್ತು. ಇದೀಗ ಫೈನಲಿ ಆ ಸಿನಿಮಾ ಅನೌನ್ಸ್​ ಆಗಿದ್ದು, ಟೀಸರ್​ ರಿಲೀಸ್​ ಕೂಡ ಆಗಿದೆ. ಮಾತಿನ ಮಲ್ಲ ಗುರುಪ್ರಸಾದ್,​ ಕಾಮಿಡಿ ಕಿಲಾಡಿ ಜಗ್ಗಣ್ಣನನ್ನ ಈ ಬಾರಿ ರಂಗನಾಯಕನನ್ನಾಗಿ ಮಾಡಿದ್ದಾರೆ. ಟೀಸರ್​ನಲ್ಲೇ ಮುಂದಿನ ದಿನಗಳಲ್ಲಿ ರಂಗನಾಯಕ ಸಿನಿಮಾ ಸೆನ್ಸೇಷನ್​ ಕ್ರಿಯೇಟ್​ ಮಾಡೋ ಸುಳಿವು ಸಿಕ್ತಿದೆ.

ಮಠ ಮತ್ತು ಎದ್ದೇಳು ಮಂಜುನಾಥದಂತ ಹಿಟ್​ ಸಿನಿಮಾಗಳನ್ನ ಕೊಟ್ಟ ಜಗ್ಗೇಶ್​​ ಮತ್ತು ಗುರುಪ್ರಸಾದ್​ ಮತ್ತೆ ಒಟ್ಟಿಗೆ ಸಿನಿಮಾ ಮಾಡ್ಬೇಕು ಅಂತ ಅಭಿಮಾನಿಗಳು ಕಾಯ್ತಿದ್ರು. ಕೆಲದಿನಗಳ ಹಿಂದೆ ಮಠ ಸೀಕ್ವೆಲ್​​ ಬರುತ್ತೆ ಅಂತ್ಲೂ ಹೇಳಲಾಗಿತ್ತು. ಆದ್ರೆ, ಪ್ರೇಕ್ಷಕರನ್ನ ನಗಿಸೋಕಂತ ಈಗ ಈ ಜೋಡಿ ಒಟ್ಟಿದೆ ಸೇರಿದೆಯಂತೆ.

ಎಷ್ಟೆ ಎತ್ತರಕ್ಕೆ ಹೋದ್ರು, ನಿರ್ದೇಶಕರೇ ಅದಕ್ಕೆಲ್ಲಾ ಕಾರಣ. ನಮ್ಮಂತ ನಟರನ್ನ ಬೆಳೆಸೋದು ಇಂತಹ ಶಕ್ತಿವಂತ ನಿರ್ದೇಶಕರು. ನಿರ್ದೇಶಕರನ್ನ ಆರಾಮವಾಗಿ ಬಿಟ್ಟಷ್ಟು ಒಳ್ಳೆ ಸಿನಿಮಾಗಳನ್ನ ಕೊಡ್ತಾರೆ ಅಂದ್ರು. ಸಿನಿಮಾ ಕಥೆಯೇ ಸಿದ್ಧವಾಗ್ದೆ ಇದ್ರು, ಗುರುಪ್ರಸಾದ್​​ ಮೇಲೆ ನಂಬಿಕೆ ಇಟ್ಟು ಚಿತ್ರದಲ್ಲಿ ನಟಿಸೋಕ್ಕೆ ಒಪ್ಪಿದ್ದಾರಂತೆ.

ಆಕಸ್ಮಿಕವಾಗಿ ರಾಜಕೀಯರಂಗಕ್ಕೆ ಬಂದ್ರಾ ನವರಸನಾಯಕ..?
ಮಠ ಸಿನಿಮಾ ಕಲೆಕ್ಷನ್ ಸೀಕ್ರೆಟ್​ ಹಂಚಿಕೊಂಡ ಜಗ್ಗೇಶ್..!!
ನೂರನೇ ಸಿನಿಮಾ ಸೋಲುತ್ತೆ ಅಂತ್ಲೇ ಎಲ್ಲರೂ ಹೇಳ್ತಾರೆ. ಆದ್ರೆ, ಗುರುಪ್ರಸಾದ್ ಮಾಡಿದ ಮಠ ಸಿನಿಮಾ ಹೊಸ ದಾಖಲೆ ಬರೀತು. ಅವತ್ತಿನ ಕಾಲಕ್ಕೆ ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡ್ತು. ಯಾರದ್ದೋ ಮಾತು ಕೇಳಿ ರಾಜಕೀಯರಂಗ ಪ್ರವೇಶಿಸಿದ್ದ ಸಮಯದಲ್ಲಿ ಮಠ ಸಿನಿಮಾ ನನಗೆ ಬಹಳ ದೊಡ್ಡ ಯಶಸ್ಸು ಕೊಡ್ತು. ಆ ಸಿನಿಮಾವನ್ನ ನಾನು ಎಂದಿಗೂ ಮರೆಯೋಲ್ಲ ಅಂದ್ರು.

ಒಂದೇ ದಿನದಲ್ಲಿ ರಂಗನಾಯಕ ಸಿನಿಮಾ ಟೀಸರ್​ ಶೂಟ್ ಮಾಡಿದೆ ಚಿತ್ರತಂಡ. ಚಿತ್ರಕ್ಕೆ ಅನೂಪ್​ ಸಿಳೀನ್​ ಸಂಗೀತ ನೀಡ್ತಿದ್ದು, ಮನೋಹರ್ ಜೋಷಿ ಛಾಯಾಗ್ರಹಣ ಚಿತ್ರಕ್ಕಿದೆ. ಟೀಸರ್​ನಲ್ಲೇ ಹೇಳಿರುವಂತೆ ಇನ್ನು ಕಥೆ, ಚಿತ್ರಕಥೆ ಸಿದ್ಧವಾಗ್ಬೇಕಿದೆ. ವಿಖ್ಯಾತ್​ ಚಿತ್ರ ಸಂಸ್ಥೆ ರಂಗನಾಯಕ ಸಿನಿಮಾ ನಿರ್ಮಾಣ ಮಾಡ್ತಿದೆ. ಟೀಸರ್​ ನೋಡ್ತಿದ್ರೆ, ಚಿತ್ರದಲ್ಲಿ ರಾಜಕೀಯ ಎಳೆ ಇದ್ದಂಗಿದೆ ಅಂದ್ರೆ, ಇಲ್ಲ ಇಲ್ಲ ಅದನ್ನ ತಮಾಷೆಯಾಗಿ ತಗೊಳ್ಳೋಣ ಬಿಡಿ ಅಂತಾರೆ ಜಗ್ಗೇಶ್.

ಸದ್ಯ ರಂಗನಾಯಕ ಟೀಸರ್​ ಲಾಂಚ್​ ಮಾಡಿ ಕಥೆ, ಚಿತ್ರಕಥೆ ಬರೆಯೋಕ್ಕೆ ಗುರುಪ್ರಸಾದ್ ಮುಂದಾಗಿದ್ದಾರೆ. ಜಗ್ಗೇಶ್​- ಗುರುಪ್ರಸಾದ್​ ಸಿನಿಮಾ ಅಂದ್ರೆ, ನೆಕ್ಸ್ಟ್​ ಲೆವೆಲ್​ ಎಂಟ್ರಟ್ರೈನ್​ಮೆಂಟ್​ ಅಂತ ಪ್ರೇಕ್ಷಕರು ಕಾಯ್ತಿದ್ದಾರೆ. ಯಾವ್ದೆ ವಿವಾದಗಳಿಲ್ಲದೇ ಒಂದು ಸದಭಿರುಚಿಯ ಸಿನಿಮಾ ನಿರ್ಮಾಣವಾಗಲಿ, ತೆರೆಗೆ ಬಂದು ಎಲ್ಲರನ್ನ ರಂಜಿಸಲಿ ಅನ್ನೋದು ಅಭಿಮಾನಿಗಳ ಆಶಯ.
ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

About the Author: TV5 Kannada

Leave a Reply

Your email address will not be published. Required fields are marked *