ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ: ಜವಾಬ್ದಾರಿ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು..?

ಬೆಂಗಳೂರು: ಕೆಲ ಪ್ರಮುಖ ಷರತ್ತುಗಳನ್ನ ವಿಧಿಸಿ ಕಾಂಗ್ರೆಸ್ ಹೈಕಮಾಂಡ್‌ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಪ್ರತಿಪಕ್ಷ ಸ್ಥಾನದ ಜೊತೆಗೆ ಸಿದ್ದರಾಮಯ್ಯಗೆ ಬೈ ಎಲೆಕ್ಷನ್ ಸಂಪೂರ್ಣ ಜವಾಬ್ದಾರಿ ಕೊಡಲಾಗಿದೆ. ಸೋಲು, ಗೆಲುವಿನ ಹೊಣೆಗಾರಿಕೆಯೂ ಸಿದ್ದರಾಮಯ್ಯ ಹೆಗಲ ಮೇಲೆ ಹಾಕಲಾಗಿದ್ದು, ಗುಂಪು ಗಾರಿಕೆ ವಿಚಾರಕ್ಕೆ ಬೇಸರಗೊಂಡಿರುವ ಹೈಕಮಾಂಡ್, ಎಲ್ಲರನ್ನ ಸರಿದೂಗಿಸಿಕೊಂಡು ಹೋಗುವಂತೆ ಸೂಚನೆ ನೀಡಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದಾರೆ. ಸೋನಿಯಾ, ರಾಹುಲ್ ಗಾಂಧಿಗೆ ಧನ್ಯವಾದ ಸಲ್ಲಿಸ್ತೇನೆ. ನನಗೆ ಐದು ವರ್ಷ ಸಿಎಂ ಆಗೋಕ್ಕೆ ಅವಕಾಶ ನೀಡಿದ್ರು. ಈಗ ಪಕ್ಷ ಬಲಪಡಿಸುವ ಜವಾಬ್ದಾರಿ ವಹಿಸಿದ್ದಾರೆ. ವರ್ಕಿಂಗ್ ಕಮಿಟಿಯಿಂದ ಕೈಬಿಡಲು ಮನವಿ ಮಾಡಿದ್ದೆ. ವಿಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶಕ್ಕೆ ಕೋರಿದ್ದೆ. ಅದರಂತೆ ಸಿ.ಡಬ್ಲ್ಯೂ.ಸಿ ಸದಸ್ಯತ್ವದಿಂದ ತೆರವು ಮಾಡಿದ್ದಾರೆ ಎಂದು ಹೇಳಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *