ಜನ್ಯಾನೋ..? ಹರಿಕೃಷ್ಣಾನೋ..?: ತಮ್ಮ ಚಿತ್ರದ ಸಂಗೀತ ಸಂಯೋಜನೆ ಬಗ್ಗೆ ಡಿ ಬಾಸ್ ಕ್ಲ್ಯಾರಿಫಿಕೇಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಆಸ್ಥಾನದ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ. ಆದ್ರೆ, ಒಡೆಯ ಮತ್ತು ರಾಬರ್ಟ್​ ಸಿನಿಮಾಗಳ ಸಂಗೀತ ಸಂಯೋಜನೆ ಜವಾಬ್ದಾರಿ ಅರ್ಜುನ್​ ಜನ್ಯ ಪಾಲಾಗಿತ್ತು. ಇದೀಗ ಇದ್ರ ಬಗ್ಗೆ ಸ್ವತ: ಡಿ ಬಾಸ್​ ದರ್ಶನ್​ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ.

ಹಂಸಲೇಖ ಮತ್ತು ರವಿಚಂದ್ರನ್​ ಬಿಟ್ರೆ, ಕನ್ನಡ ಚಿತ್ರರಂಗದಲ್ಲಿ ಸೂಪರ್​ ಹಿಟ್​ ಸಾಂಗ್ಸ್​ ಮೂಲಕ ಸದ್ದು ಮಾಡ್ತಿರೋ ಮತ್ತೊಂದು ಜೋಡಿ ದರ್ಶನ್​ ಮತ್ತು ವಿ. ಹರಿಕೃಷ್ಣ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಬಂದಿರೋ ಬಹುತೇಕ ಆಲ್ಬ್​​ಗಳು ಸೂಪರ್​ ಹಿಟ್​ ಆಗಿದೆ. ಭೂಪತಿ ಸಿನಿಮಾದಿಂದ ಒಂದಾದ ಈ ಜೋಡಿ ಯಜಮಾನ ಸಿನಿಮಾದಿಂದ 25 ಸಿನಿಮಾಗಳನ್ನ ಕಂಪ್ಲೀಟ್​ ಮಾಡಿದೆ. ಆದ್ರೆ ಇದ್ದಕ್ಕಿಂತ ಒಡೆಯ ಮತ್ತು ರಾಬರ್ಟ್​ ಸಿನಿಮಾದಿಂದ ಹರಿಕೃಷ್ಣ ಹೆಸ್ರು, ಮಿಸ್ಸಾಗಿತ್ತು.

ಒಡೆಯ, ರಾಬರ್ಟ್​​ ಚಿತ್ರಗಳಿಗೆ ಅರ್ಜುನ್​ ಜನ್ಯಾ ಸಾಂಗ್ಸ್
ವಿ. ಹರಿಕೃಷ್ಣ ರೀ ರೆಕಾರ್ಡಿಂಗ್​ ಮಾಡ್ತಾರೆ ಅಂದ್ರು ಡಿ ಬಾಸ್
ಒಡೆಯ ಮತ್ತು ರಾಬರ್ಟ್​​ ಸಿನಿಮಾಗಳಿಗೆ ಅರ್ಜುನ್​ ಜನ್ಯಾ ಟ್ಯೂನ್​ ಹಾಕ್ತಿದ್ಧಾರೆ. ಅರೇ, ಇದ್ದಕ್ಕಿದಂತೆ ವಿ. ಹರಿಕೃಷ್ಣ, ದರ್ಶನ್​ ಕ್ಯಾಂಪ್​ನಿಂದ ಹೊರಬಂದ್ರಾ ಅನ್ನೋ ಗುಸುಗುಸು ಗಾಂಧೀನಗರದಲ್ಲಿ ಹರಿದಾಡ್ತಿತ್ತು. ಈ ಎರಡು ಸಿನಿಮಾಗಳ ಸಂಗೀತ ನಿರ್ದೇಶನಕ್ಕೆ ಹರಿ ಹೆಸ್ರು ಕೇಳಿಬಂದಿದ್ದು ನಿಜ. ಆದ್ರೆ, ಏನಾಯ್ತೋ ಗೊತ್ತಿಲ್ಲ. ಅರ್ಜುನ್​ ಜನ್ಯಾ ಆ ಜಾಗಕ್ಕೆ ಬಂದ್ರು.

ಇದೀಗ ಸ್ವತ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿ ಎಲ್ಲಾ ಅಂತೆಕಂತೆಗಳಿಗೆ ಇತಿಶ್ರೀ ಹಾಡಿದ್ಧಾರೆ. ಎರಡೂ ಸಿನಿಮಾಗಳಲ್ಲಿ ವಿ. ಹರಿಕೃಷ್ಣಗೆ ಅವಕಾಶ ಮಾಡಿಕೊಟ್ಟಿದ್ಧಾರೆ. ಒಡೆಯ ಮತ್ತು ರಾಬರ್ಟ್​ ಸಿನಿಮಾ ಹಾಡುಗಳಿಗೆ ಅರ್ಜುನ್​ ಜನ್ಯಾ ಟ್ಯೂನ್​ ಹಾಕಿದ್ರೆ, ಹಿನ್ನೆಲೆ ಸಂಗೀತವನ್ನ ವಿ. ಹರಿಕೃಷ್ಣ ನೀಡಲಿದ್ದಾರೆ. ರೀರೆಕಾರ್ಡಿಂಗ್​ ಕಿಂಗ್​ ಅಂತ್ಲೇ ಕರೆಸಿಕೊಂಡಿರೋ ಹರಿಕೃಷ್ಣಗೆ ಆ ಜವಾಬ್ದಾರಿ ವಹಿಸಿದ್ದಾರೆ.

ಎಂ. ಡಿ ಶ್ರೀಧರ್​ ನಿರ್ದೇಶನದ ಫ್ಯಾಮಿಲಿ ಆ್ಯಕ್ಷನ್​ ಸಿನಿಮಾ ಒಡೆಯ. ಈಗಾಗಲೇ ಶೂಟಿಂಗ್​ ಮುಗಿಸಿರೋ ಟೀಂ, ಪ್ರಮೋಷನ್​ಗೆ ಚಾಲನೆ ಕೊಟ್ಟಿದೆ. ಮತ್ತೊಂದ್ಕಡೆ ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್​ ಚಿತ್ರದಲ್ಲಿ ದರ್ಶನ್ ನಟಿಸ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.
ಎಂಟ್ರಟ್ರೈನ್​ಮೆಂಟ್​ ಬ್ಯೂರೋ, ಟಿವಿ5

Recommended For You

About the Author: TV5 Kannada

Leave a Reply

Your email address will not be published. Required fields are marked *