ದರ್ಶನ್, ಯಶ್ ಪರ ಬ್ಯಾಟಿಂಗ್, ಹೆಚ್​ಡಿಕೆಗೆ ಟಾಂಗ್​ ನೀಡಿದ ಸುಮಲತಾ ಅಂಬರೀಶ್​

ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿಯವರು ಕೆಲಸ ಮಾಡಿದ್ದರು  ಆ ಕಾರಣದಿಂದ ನಾನು ಅವರಿಗೆ ಕೃತಜ್ಞತೆ ಹೇಳಲು ಬಯಸಿದ್ದೆ ಅದಕ್ಕಾಗಿ ಇವತ್ತು ಇಲ್ಲಿಗೆ ಬಂದಿದ್ದೇನೆ ಎಂದು ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯದ ಬಿಜೆಪಿ ಕಚೇರಿಯಲ್ಲಿ  ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷ ಸೇರುವುದಾದರೆ ಎಲ್ಲರಿಗೂ ಹೇಳಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ತೇನೆ. ಮುಚ್ಚಿಟ್ಟು ಮರೆಮಾಡಿ ಪಕ್ಷ ಸೇರ್ಪಡೆಯಾಗೋದಿಲ್ಲ ಎಂದು ತಿಳಿಸಿದರು.

ಮಾಜಿ ಸಂಸದ ಶಿವರಾಮೇಗೌಡ ಜೋಡೆತ್ತು ಈಗ ಎಲ್ಲಿ ಎಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದ 8 ಜನ ಶಾಸಕರೇ ಇದ್ದಾರೆ. ಅಧಿಕಾರದಲ್ಲಿರುವ ಶಾಸಕರನ್ನು ಒತ್ತಾಯಿಸುವ ಬದಲು ಜೋಡೆತ್ತುಗಳ ಮೇಲೆ ಏಕೆ ಟೀಕೆ ಎಂದು  ನಟರಾದ ದರ್ಶನ್, ಯಶ್ ಪರ ಸುಮಲತಾ ಬ್ಯಾಟಿಂಗ್ ಮಾಡಿದರು, ನಾನು ಒಬ್ಬಳು ಗೆದ್ದ ಮೇಲೆ ಉಳಿದವರ ಜವಾಬ್ದಾರಿ ಮುಗಿದಿದೆಯಾ ಅಥವಾ ಅವರ ಸೌಲಭ್ಯಗಳು ಕಡಿತವಾಗಿವೆಯಾ ಎಂದು ಸುಮಲತಾ ಅಂಬರೀಶ್ ಇದೇ ವೇಳೆ ಪ್ರಶ್ನೆ ಮಾಡಿದರು.

ಸುಮಲತಾ ಫಾರಿನ್ ಟೂರ್ ಇನ್ನೂ ಮುಗಿಸಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ, ಹೊರ ದೇಶದಲ್ಲಿ ಯಾರಿದ್ದರು, ಹೇಗಿದ್ದರು ಎಂಬುದು ಫೋಟೋಸ್ ರಿಲೀಸ್ ಆಗಿವೆ. ಜನರಿಗೆ ಯಾರು ಏನು ಎಂಬುದು ಗೊತ್ತಾಗಿದೆ ಎಂದು ಕುಮಾರಸ್ವಾಮಿ ಕೆಸಿನೋ ಎಂಜಾಯ್ಮೆಂಟ್​​ಗೆ ಪರೋಕ್ಷವಾಗಿ ಸುಮಲತಾ ಅಂಬರೀಶ್ ಟಾಂಗ್ ಕೊಟ್ಟರು

Recommended For You

About the Author: TV5 Kannada

Leave a Reply

Your email address will not be published. Required fields are marked *