ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಂದು ಯಡವಟ್ಟು

ಟೀಮ್ ಇಂಡಿಯಾದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆಟಕ್ಕಿಂತ ಸದಾ ವಿವಾದದಲ್ಲೆ ಕಾಲ ಕಳೆಯುವ ಈ ಬರೋಡಾ ಸ್ಟಾರ್ ಸೌತ್ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.  ಸದ್ಯ ಕ್ರಿಕೆಟ್​ನಿಂದ ದೂರ ಇದ್ದ ಹಾರ್ದಿಕ್ ಪಾಂಡ್ಯ ಬೆನ್ನು ನೋವಿಗೆ ಗುರಿಯಾಗಿದ್ರು. ಹೀಗಾಗಿ ಮೊನ್ನೆಯಷ್ಟೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದರು.

ರೆಸ್ಟ್​ನಲ್ಲಿರುವ ಹಾರ್ದಿಕ್ ಪಾಂಡ್ಯ ಯಡವಟ್ಟೊಂದನ್ನ ಮಾಡಿಕೊಂಡಿದ್ದಾರೆ. ಆ ಯಡವಟೊಂದನ್ನು ಮಾಡಿದ್ದಾರೆ. ಹಾರ್ದಿಕ್​ಗೂ ವಿವಾದಗಳಿಗೂ ಬಿಡದ ನಂಟು ಕೆಲವು ತಿಂಗಳ ಹಿಂದೆ ರಿಯಾಲಿಟಿ ಟಾಕ್ ಶೋವೊಂದರಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿ ಎಲ್ಲರಿಂದ ಭಾರೀ ಟೀಕೆಗಳಿಗೆ ಗುರಿಯಾಗಿದರು ನಂತರ ಹಾರ್ದಿಕ್​ ಎಲ್ಲರ ಕ್ಷಮೆ ಕೇಳಿದರು.

ಕಾಫಿ ವಿತ್ ಕರಣ್ ವಿವಾದದ ನಂತರ ಹಾರ್ದಿಕ್ ತುಂಬ ಬದಲಾಗಿದರು. ಕೇವಲ ಆಟದ ಕಡೆ ಮಾತ್ರ ಗಮನ ಕೇಂದ್ರಿಕರಿಸಿದರು. ಹಾರ್ದಿಕ್ ಸರಿ ಹೋದರು ಅಂದುಕೊಳ್ಳುವಾಗಲೇ ದೊಡ್ಡ ಯಡವಟ್ಟೊಂದನ್ನ ಮಾಡಿಕೊಂಡಿದ್ದಾರೆ. ಆ ಯಡವಟ್ಟೇನು ಅನ್ನೋದನ್ನ ಮುಂದೆ ಓದಿ.

ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಮೊನ್ನೆ 41ನೇ ಹುಟ್ಟುಹಬ್ಬವನ್ನ ತಮ್ಮ ಪಾಡಿಗೆ ತಾವು ಆಚರಿಸಿಕೊಂಡ್ರು. ಜಹೀರ್​ಗೆ ಇಡೀ ಕ್ರಿಕೆಟ್​ ಲೀಕವೇ ಶುಭಾಶಯ ತಿಳಿಸಿತ್ತು. ಜಹೀರ್​ಗೆ ಹಾರ್ದಿಕ್ ಕೂಡ ಟ್ವೀಟರ್ ಮೂಲಕ ಹುಟ್ಟು ಹಬ್ಬದ ವಿಶ್ ತಿಳಿಸಿದರು. ಆದರೆ ವಿಶ್​ ಮಾಡುವ ವೇಳೆ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಧಿಮಾಕು ತೋರಿಸಿದ್ದಾರೆ.

ನಾನು ಸಿಕ್ಸರ್ ಸಿಡಿಸಿದಂತೆ ನೀವೂ ಕೂಡ ಚೆಂಡನ್ನು ಮೈದಾನದ ಹೊರಗೆ ಕಳುಹಿಸುವಿರಿ ಎಂದು ಭಾವಿಸಿದ್ದೇನೆ.

ಜಹೀರ್ ಖಾನ್‌ಗೆ ಟ್ವೀಟ್ ಮೂಲಕ ಶುಭಕೋರಿದ ಪಾಂಡ್ಯ, ಜಹೀರ್ ಎಸೆತಕ್ಕೆ ಸಿಕ್ಸರ್ ಸಿಡಿಸೋ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನಾನು ಸಿಕ್ಸರ್ ಸಿಡಿಸಿದಂತೆ ನೀವೂ ಕೂಡ ಚೆಂಡನ್ನು ಮೈದಾನದ ಹೊರಗೆ ಕಳುಹಿಸುವಿರಿ ಎಂದು ಭಾವಿಸಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಕ್ರಿಕೆಟ್​ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಹಾರ್ದಿಕ್ ಟ್ವೀಟ್​ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಕ್ರಿಕೆಟ್ ಅಭಿಮಾನಿಗಳು ಹಾರ್ದಿಕ್ ನೋಡುತ್ತಿದ್ದಂತೆ ಹೌಹಾರಿದ್ದಾರೆ. ಹಣ ಮತ್ತು ಹೆಸರು ಇದ್ರೆ ಯಾವ ಸ್ಥಾನಮಾನಕ್ಕೂ ಗೌರವ ಕೊಡೊದಿಲ್ಲ ಅನ್ನೋದಕ್ಕೆ ಹಾರ್ದಿಕ್ ಪಾಂಡ್ಯ ಒಂದು ಒಳ್ಳೆಯ ಉದಾಹರಣೆಯಾಗಿದ್ದಾರೆ.

ಟೀಮ್ ಇಂಡಿಯಾದ ಬೌಲಿಂಗ್ ಡಿಪಾರ್ಟ್​ಮೆಂಟ್​ಗೆ ಹೊಸ ಚರಿಷ್ಮಾ ಬರೆದಿದ್ದು ಸ್ವಿಂಗ್ ಕಿಂಗ್ ಜಹೀರ್ ಖಾನ್. ಟೀಮ್ ಇಂಡಿಯಾದ ಬೌಲಿಂಗ್ ಡಿಪಾರ್ಟ್​ ಮುನ್ನಡೆಸುತ್ತಿದ್ದ ಜಹೀರ್ ತಮ್ಮ ಸ್ವಿಂಗ್ ಮೂಲಕ ಘಾಟಾನುಘಟಿ ಬ್ಯಾಟ್ಸ್​ಮನ್​ಗಳನ್ನ ನೆಲಕುರುಳಿಸಿದ್ರು. ಜಹೀರ್ ಕಾಲದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಡಿಪಾರ್ಟ್​ಮೆಂಟ್ ವಿಶ್ವ ಕ್ರಿಕೆಟ್​​ನಲ್ಲಿ ಗುರುತಿಸಿಕೊಂಡಿತ್ತು.

ಲೆಜೆಂಡ್ ಜಹೀರ್ ಬಗ್ಗೆ ಹಾರ್ದಿಕ್ ಪಾಂಡ್ಯ ಇಷ್ಟು ಹಗುರವಾಗಿ ಟ್ವೀಟ್ ಮಾಡಿದ್ದು ನಿಜಕ್ಕೂ ಅವಮಾನ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಮಾಡಿದ ತಪ್ಪುಗಳಿಂದ ಇನ್ನು ಪಾಠ ಕಲಿತಂತೆ ಕಾಣುತ್ತಿಲ್ಲ. ಇನ್ನಾದ್ರೂ ಹಾರ್ದಿಕ್ ಮಾಡಿದ ತಪ್ಪುಗಳಿಂದ ಪಾಠ ಕಲಿಯಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *