Top

ರಜಾ ದಿನದಲ್ಲೂ ಅಧಿಕಾರಿಗಳು ನೀಡಿದ್ರು ಖಡಕ್​ ಸೂಚನೆ..!

ರಜಾ ದಿನದಲ್ಲೂ ಅಧಿಕಾರಿಗಳು ನೀಡಿದ್ರು ಖಡಕ್​ ಸೂಚನೆ..!
X

ಬೆಂಗಳೂರು: ಹಬ್ಬ ಬಂದರೆ ಸಾಕು ಸಿಲಿಕಾನ್ ಸಿಟಿ ಸಂಪೂರ್ಣ ಕಸಮಯವಾಗುತ್ತೆ. ಹಬ್ಬದ ವಸ್ತುಗಳನ್ನ ಮಾರಾಟ ಮಾಡಲು ಬಂದವರು, ಎಲ್ಲೆಂದ್ರಲ್ಲಿ ಕಸ ಬಿಟ್ಟು ಹೋಗೋದ್ರಿಂದ ಸಮಸ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಹಬ್ಬದ ದಿನದಲ್ಲೂ ಪೌರಕಾರ್ಮಿಕರಿಂದ ಕಸ ಎತ್ತಿಸಲು ಪಾಲಿಕೆ ಮುಂದಾಗಿದ್ದು, ಇದೀಗ ಸ್ವಲ್ಪ ಮಟ್ಟಿಗೆ ಕಸದ ಸಮಸ್ಯೆ ತಡೆಗಟ್ಟಿದಂತಾಗಿದೆ.

ಕೆ.ಆರ್ ಮಾರುಕಟ್ಟೆ, ಮಲ್ಲೇಶ್ವರಂ ಸೇರಿದಂತೆ, ನಗರದ ಹಲವೆಡೆ ದಸರ ಹಬ್ಬಕ್ಕಾಗಿ ತಂದಿದ್ದ, ಬೂದಗುಂಬಳ, ಬಾಳೆಕಂದು, ಮಾವಿನ ಎಲೆ ಮಾರಾಟ ಮಾಡಲಾಗಿತ್ತು. ಇನ್ನು ಅನೇಕ ಹಬ್ಬದ ವಸ್ತುಗಳು ಮಾರಾಟವಾಗದೆ ಉಳಿದಿದ್ದು, ಅಲ್ಲಿಯೇ ಬಿಟ್ಟು ಹೋಗಲಾಗಿದೆ.

ಪ್ರತೀ ಬಾರಿಯೂ ಕೂಡ ಇದೇ ರೀತಿ, ಎಲ್ಲೆಂದ್ರಲ್ಲಿ ಕಸ ಬಿಟ್ಟು ಹೋಗ್ತಿದ್ದು. ಪಾಲಿಕೆಗೆ ಕಸದ ಹೆಚ್ಚಿನ ಹೊರೆಯಾಗ್ತಿದೆ. ಹಬ್ಬ ಮುಗಿದು ಎರಡು ದಿನಗಳ ಬಳಿಕ, ಹಬ್ಬದ ಕಸವನ್ನು ತೆರವುಗೊಳಿಸಲಾಗ್ತಿತ್ತು. ಇದರಿಂದ ನಗರದ ರಸ್ತೆಗಳೆಲ್ಲಾ ಕಸಮಯವಾಗಿ, ವಾಹನಗಳ ಸಂಚಾರಕ್ಕೆ ಕಷ್ಟಕರವಾಗ್ತಿತ್ತು. ಆದ್ರೀಗ, ಹಬ್ಬದ ರಜೆಯಿದ್ರೂ ಕೂಡ, ಪೌರಕಾರ್ಮಿಕರು ಹಾಜರಾಗಿ ಕಸವನ್ನ ತೆಗೆಯುತ್ತಿದ್ದಾರೆ. ಇದರಿಂದ ಮಲ್ಲೇಶ್ವರಂ, ಗಾಂಧಿ ಬಜಾರ್, ಕೆ.ಆರ್ ಮಾರುಕಟ್ಟೆಯಂತ ರಸ್ತೆಗಳಲ್ಲಿ ಸಂಚಾರ ಮಾಡಲು ಅನುಕೂಲಕರವಾಗಿದೆ. ಎಲ್ಲಾ ಕಡೆ ಕಸ ತೆಗೆದರೆ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ ಅಂತ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಹಬ್ಬಕ್ಕೆ ಬೇಕಾದ ಹಾಗೂ ಹಸಿ ಕಸವಾಗುವಂತಹ ವಸ್ತುಗಳನ್ನ ಮಾತ್ರ ಮಾರಾಟ ಮಾಡಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕಪ್, ತಟ್ಟೆ, ಸ್ಪೂನ್ಗಳನ್ನು ಮಾರಾಟ ಮಾಡದಂತೆ, ಅಂಗಡಿ ಮಾಲೀಕರಿಗೆ ಸೂಚಿಸಿರೋದಾಗಿ ವಿಶೇಷ ಆಯುಕ್ತ ರಂದೀರ್ ತಿಳಿಸಿದರು.

ಕೇವಲ ಹಸಿಕಸದ ವಸ್ತುಗಳ ಮಾರಾಟ ಮಾಡಿದರೆ, ಉಳಿದರೂ ಆ ಕಸವನ್ನು ನೇರವಾಗಿ ಲ್ಯಾಂಡ್ ಫಿಲ್ಗೆ ಹಾಕಬಹುದಾಗಿದ್ದು. ಇದರಿಂದ ಕಸವನ್ನು ವಿಂಗಡಿಸೋ ಸಮಸ್ಯೆ ಇರೋದಿಲ್ಲ ಅಂತ ಸ್ಪಷ್ಟಪಡಿಸಿದರು.

ಹಬ್ಬ ಬಂತಂದರೆ ಕಸ ತೆರವಿನದ್ದೇ ದೊಡ್ಡ ಸಮಸ್ಯೆಯಾಗ್ತಿತ್ತು. ಆದರೆ ಇದೇ ಮೊದಲ ಬಾರಿಗೆ, ರಜೆಯಲ್ಲೂ ಕಸವನ್ನು ತೆರವುಗೊಳಿಸೋ ಕೆಲಸ ನಡೆಯುತ್ತಿದೆ. ಇನ್ನೂ ನಗರದ ಇತರೆ ಭಾಗಗಳಲ್ಲೂ ಕಸ ಬಿದ್ದಿದ್ದು, ಅವುಗಳ ತೆರವು ಕಾರ್ಯ ಕೂಡ ನಡೆಯಬೇಕಿದೆ.

Next Story

RELATED STORIES