ಯುವರತ್ನನ ಖದರ್‌ಗೆ ಪ್ರೇಕ್ಷಕರಿಂದ ಬಾಲಿವುಡ್ ಸೆಲೆಬ್ರಿಟಿಗಳ ತನಕ ಮೆಚ್ಚುಗೆ..!

ಇದಪ್ಪ ನಿರೀಕ್ಷೆ ಅಂದ್ರೆ . ಅದ್ಯಾಕೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ ಅಭಿಮಾನಿಗಳು ಯುವರತ್ನಕ್ಕಾಗಿ ಕಾಯುತ್ತಿದ್ರು. ಆ ಚಿತ್ರದ ಮೇಲೆ ಯಾಕೆ ಅಷ್ಟೊಂದು ನಿರೀಕ್ಷೆ ಇಟ್ಕೊಂಡಿದ್ದಾರೆ ಅನ್ನೋದು ಈಗ ಗೊತ್ತಾಗುತ್ತಿದೆ. ಪವರ್ ಫುಲ್ ಮತ್ತು ಯೂತ್​​ಫುಲ್ ಯುವರತ್ನ ಟೀಸರ್​​​ಗೆ ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಸೆಲೆಬ್ರಿಟಿಗಳ ತನಕ ಬಹುಪರಾಕ್ ಎಂದಿದ್ದಾರೆ.

ಪವರ್​​​​ಫುಲ್ & ಯೂತ್​​ಫುಲ್ ಯುವರತ್ನ ಟೀಸರ್
ಸೋಷಿಯಲ್ ಮೀಡಿಯಾದಲ್ಲಿ ಅಪ್ಪುದೇ ದರ್ಬಾರ್
ಪ್ರೇಕ್ಷಕರಿಂದ ಬಾಲಿವುಡ್ ಸೆಲೆಬ್ರಿಟಿಗಳ ತನಕ ಮೆಚ್ಚುಗೆ..!
ಸಿಕ್ಕಿತು ಯುವರತ್ನನಿಗೆ ಅಭಿಮಾನಿ ದೇವರುಗಳ ಅಪ್ಪುಗೆ..!
ಯುವರತ್ನ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಬೇಕೇ ಬೇಕು ‘ಯುವರತ್ನ’ನ ಟೀಸರ್ ಬೇಕೇ ಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಾಗ , ನಿರ್ದೇಶಕ ಸಂತೋಷ್ ಆನಂದ್ ರಾಮ್ ಪವರ್ ಫುಲ್- ಯುಥ್ ಫುಲ್ ‘ಯುವರತ್ನ’ ಟೀಸರನ್ನು ದಸರಾ ಪ್ರಯುಕ್ತ ಪವರ್ ಸ್ಟಾರ್ ಅಭಿಮಾನಿಗಳಿಗಾಗಿ ನೀಡಿದ್ದಾರೆ.


‘ಯುವರತ್ನ’ ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿಯೇ ಬಂದಿದೇ ಬಂದಿದ್ದು ಸೆನ್ಸೆಷನ್ ಕ್ರಿಯೆಟ್ ಮಾಡುತ್ತಿದೆ. ಪ್ರೇಕ್ಷಕರಿಂದ ಸ್ಟಾರ್ ಸೆಲೆಬ್ರಿಟಿಗಳ ತನಕ ‘ಯುವರತ್ನ’ ಟೀಸರ್ ಇಷ್ಟವಾಗಿ , ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಾಗಿ ನಂಬರ್ ಒನ್ ಟ್ರೆಡಿಂಗ್ ಪಟ್ಟ ಅಲಂಕರಿಸಿದೆ. ರಗ್ಬಿ ಆಟಗಾರನಾಗಿ ಯಂಗ್​ ಅಂಡ್​ ಎನರ್ಜಿಟಿಕ್​​​ ಲುಕ್​ನಲ್ಲಿ ಪವರ್​ ಸ್ಟಾರ್ ಖದರ್​ ತೋರ್ಸಿದ್ದಾರೆ.

ಆಯುಧ ಪೂಜೆಯ ದಿನ ಬೆಂಗಳೂರಿನ ಸಂತೋಷ್ ಥಿಯೇಟರ್​ನಲ್ಲಿ ಸಾವಿರಾರು ಪವರ್​​ಸ್ಟಾರ್ ಫ್ಯಾನ್ಸ್​​​​​ಗಳ ಸಮ್ಮುಖದಲ್ಲಿ ‘ಯುವರತ್ನ’ ಟೀಸರ್ ಲಾಂಚ್ ಆಗಿದೆ. ರಾಜ್ಯದ ನಾನಾ ಭಾಗದಲ್ಲಿ ಪವರ್ ಸ್ಟಾರ್ ಪುನೀತ್ ಫ್ಯಾನ್ಸ್ ‘ಯುವರತ್ನ’ ಟೀಸರ್​ ಭಕ್ತಿಯಿಂದ ಪೂಜಿಸಿ ಸ್ವಿಕರಿಸಿದ್ದಾರೆ. ಎಸ್​​​. ತಮನ್​ ಸೌಂಡಿಂಗ್​ ಬಿಜಿಎಂ ಹಿನ್ನಲೆಯಲ್ಲಿ ಸಾಗೋ ಯುವರತ್ನ ಟೀಸರ್​ ನೋಡುಗರಿಗೆ ಸಖತ್​ ಕಿಕ್​ ಕೊಡ್ತಿದೆ.

ಇನ್ನು ಅಭಿಮಾನಿಗಳಂತೆ ಸ್ಟಾರ್ ಸೆಲೆಬ್ರಿಟಿಗಳು ಕೂಡ ‘ಯುವರತ್ನ’ ಟೀಸರ್​​ಗೆ ಬಹುಪರಾಕ್ ಎಂದಿದ್ದಾರೆ. ಬಾಲಿವುಡ್ ಮುನ್ನ ಭಾಯ್ ಸಂಜಯ್ ದತ್ತ್ , ಬಾಕ್ಸಾಫೀಸ್ ವಿಶ್ಲೇಷಕ ತರುಣ್ ಆದರ್ಶ್ , ಕಿಚ್ಚ ಸುದೀಪ್ , ನಿರ್ದೇಶಕ ಪ್ರಶಾಂತ್ ರಾಜ್ , ನಟಿ ಆಶಿಕಾ ರಂಗನಾಥ್ , ಮಾನ್ವಿತಾ ಕಾಮತ್ ಸೇರಿದಂತೆ ಬಾಲಿವುಡ್​ನಿಂದ ಸ್ಯಾಂಡಲ್​​​ವುಡ್ ತನಕ ಅನೇಕ ತಾರೆಯರು ‘ಯುವರತ್ನ’ ಟೀಸರನ್ನು ಮೆಚ್ಚಿಕೊಂಡಿದ್ದಾರೆ.

ಈ ವರ್ಷದ ಕೊನೆಯಲ್ಲಿ ‘ಯುವರತ್ನ’ ಸಿರಿಗನ್ನಡ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಚಿತ್ರಕ್ಕೆ ನಿರೀಕ್ಷೆ ಯಾವ ಮಟ್ಟಕ್ಕೆ ಇದೆ ಅನ್ನೋದು ಹುಟ್ಟಿಕೊಂಡಿರುವ ಟೀಸರ್ ಕ್ರೇಜ್‌ನಿಂದಲೇ ಅರ್ಥವಾಗುತ್ತದೆ. ‘ರಾಜಕುಮಾರ’ ಚಿತ್ರದಂತೆ ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಜೋಡಿ ‘ಯುವರತ್ನ’ ಚಿತ್ರದಿಂದ ಮತ್ತೊಮ್ಮೆ ಮೋಡಿ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಶ್ರೀಧರ್ ಶಿವಮೊಗ್ಗ _ ಎಂಟರ್​​​​ಟೈನ್ಮೆಂಟ್ ಬ್ಯೂರೋ – ಟಿವಿ5

Recommended For You

About the Author: Shravani Bhat

Leave a Reply

Your email address will not be published. Required fields are marked *