Top

ಶ್ರೀಲಂಕಾ ಲೆಜೆಂಡ್ ಮುರಳಿಧರನ್ ದಾಖಲೆ ಸರಿಗಟ್ಟಿದ ಅಶ್ವಿನ್

ಶ್ರೀಲಂಕಾ ಲೆಜೆಂಡ್ ಮುರಳಿಧರನ್ ದಾಖಲೆ  ಸರಿಗಟ್ಟಿದ ಅಶ್ವಿನ್
X

ಟೀಮ್ ಇಂಡಿಯಾದ ಕೇರಮ್ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್​ನಲ್ಲಿ ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ. ವೈಜಾಗ್ ಅಂಗಳದಲ್ಲಿ ಹರಿಣಗಳ ವಿರುದ್ಧ ಸ್ಪಿನ್ ಜಾದೂ ಮಾಡಿ ಕಮಾಲ್ ಮಾಡಿದ್ದ ಕೇರಮ್ ಇದೀಗ ವಿಶ್ವ ದಾಖಲೆ ಬರೆದಿದ್ದಾರೆ.

ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆಫ್ರಿಕಾ ಬ್ಯಾಟ್ಸ್​ಮನ್ಸ್​ಗಳ ಅಬ್ಬರದ ಹೊರತಾಗಿಯೂ ಸ್ಪಿನ್ ಮ್ಯಾಜಿಕ್ ಮಾಡಿದ ಆರ್. ಅಶ್ವಿನ್ ಬರೊಬ್ಬರಿ 7 ವಿಕೆಟ್ ಪಡೆದು ಮಿಂಚಿ ತಂಡಕ್ಕೆ 71 ರನ್​ಗಳ ಮುನ್ನಡೆ ಕೊಡಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇದರೊಂದಿಗೆ ಅಶ್ವಿನ್ 5ಕ್ಕಿಂತ ಹೆಚ್ಚು ವಿಕೆಟ್​ಗಳನ್ನು 27ನೇ ಬಾರಿ ಪಡೆದಿದ್ದರು.

ವೈಟ್ ಜೆರ್ಸಿಯಲ್ಲಿ ಒಂದು ವರ್ಷದ ಬಳಿಕ ಆಡುತ್ತಿರುವ ಈ ತಮಿಳುನಾಡು ಸ್ಪಿನ್ನರ್ ನಿನ್ನೆ ಐದನೇ ದಿನದಾಟದ ಪಂದ್ಯದಲ್ಲಿ ಬ್ರುಯುನ್​ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ 350 ನೇ ವಿಕೆಟ್ ಪಡೆದ ಸಾಧನೆ ಮಾಡಿದರು.

ಬ್ರುಯುನ್​ ಅವರ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಲಂಕಾದ ಸ್ಪಿನ್​ ಲೆಜೆಂಡ್ ಮುರಳಿಧರನ್ ದಾಖಲೆ ಸರಿಗಟ್ಟಿದರು. ಆರ್. ಅಶ್ವಿನ್ 350 ವಿಕೆಟ್ ಪಡೆಯಲು 66 ಪಂದ್ಯಗಳನ್ನು ತೆಗೆದುಕೊಂಡರು. ಇದರೊಂದಿಗೆ ಅಶ್ವಿನ್ ವೇಗವಾಗಿ 350 ವಿಕೆಟ್ ಪಡೆದ 2ನೇ ಬೌಲರ್ ಎನಿಸಿದರು. ಮುರಳಿಧರನ್ ಕೂಡ 350 ಪಡೆಯಲು 66 ಪಂದ್ಯಗಳನ್ನು ತೆಗೆದುಕೊಂಡಿದರು.

ಟೆಸ್ಟ್​ನಲ್ಲಿ ವೇಗವಾಗಿ 350 ಪಡೆದವರು

ಮುತ್ತಯ್ಯ ಮುರಳಿಧರನ್ 66

ಆರ್​. ಅಶ್ವಿನ್ 66

ರಿಚರ್ಡ್​ ಹ್ಯಾಡ್ಲಿ 69

ಡೇಲ್​ ಸ್ಟೇನ್ 69

ಡೆನ್ನಿಸ್​ ಲಿಲ್ಲಿ 70

ಲಂಕಾದ ಸ್ಪಿನ್ ದಂತ ಕತೆ ಮುತ್ತಯ್ಯ ಮುರಳಿಧರನ್ 350 ವಿಕೆಟ್​ಗಳನ್ನು ಪಡೆಯಲು 66 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಕೇರಮ್ ಸ್ಪಿನ್ನರ್ ಆರ್. ಅಶ್ವಿನ್ ಕೂಡ 66 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದ ಮಾಜಿ ವೇಗಿ 69 ಪಂದ್ಯ, ಸೌತ್ ಆಫ್ರಿಕಾದ ಡೇಲ್ ಸ್ಟೇನ್ 69 ಮತ್ತು ಆಸ್ಟ್ರೇಲಿಯಾ ತಂಡದ ವೇಗಿ ಡೆನ್ನಿಸ್ ಲಿಲ್ಲಿ 70 ಪಂದ್ಯ ತೆಗೆದುಕೊಂಡಿದ್ದಾರೆ. ​

ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಆರ್​. ಅಶ್ವಿನ್ ವಿಶ್ವ ದಾಖಲೆ ಬರೆದು ತಂಡಕ್ಕೆ ಗ್ರೇಟ್ ಕಮ್​ಬ್ಯಾಕ್​ ಮಾಡಿದ್ದಾರೆ. ಆರ್. ಅಶ್ವಿನ್ ಇನ್ನುಷ್ಟು ಸ್ಪಿನ್ ಮ್ಯಾಜಿಕ್ ಮಾಡಿ ಇನ್ನಷ್ಟು ಮೈಲುಗಲ್ಲುಗಳನ್ನು ಮುಟ್ಟಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ.

Next Story

RELATED STORIES