ಟೀಂ ಇಂಡಿಯಾದ ಬೌಲಿಂಗ್ ದಾಳಿಗೆ ಹರಿಣಗಳು ಉಡೀಸ್​..!

ವಿಶಾಖಪಟ್ಟಣಂ: ವೈಜಾಕ್ ಅಂಗಳದಲ್ಲಿ ಟೀಮ್ ಇಂಡಿಯಾ ಮ್ಯಾಜಿಕ್ ಮಾಡಿದ್ದು, ಹರಿಣಗಳ ವಿರುದ್ಧದ ಮೊದಲ ಟೆಸ್ಟ್​ನಲ್ಲಿ  203 ರನ್​ಗಳ​ ಅಂತರದಿಂದ ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ 502 ರನ್‌ಗಳ ಬಿಗ್‌ ಸ್ಕೋರ್ ಕಲೆಹಾಕಿತ್ತು. ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್​ ಹರಿಣಗಳ ಬೌಲರ್‌ಗಳ ಬೆಂಡೆತ್ತಿದ್ದರು.

ಅಲ್ಲದೇ ಡಬಲ್‌ ಸೆಂಚುರಿ ಸಿಡಿಸಿದ ಅಗರ್ವಾಲ್ ತಂಡಕ್ಕೆ 215 ರನ್‌ಗಳ ಕಾಣಿಕೆ ನೀಡಿದರೆ, ರೋಹಿತ್‌ ಶರ್ಮಾ 176ರನ್ ಸಿಡಿಸಿದ್ದರು, 7 ವಿಕೆಟ್ ನಷ್ಟಕ್ಕೆ 502 ರನ್‌ ಕಲೆಹಾಕಿದ್ದಾಗ, ವಿರಾಟ್ ಬಳಗವು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು.

ಈ ಬಿಗ್‌ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ, ಕೂಡ ಡೀಸೆಂಟ್ ಬ್ಯಾಟಿಂಗ್ ಪ್ರದರ್ಶಿಸಿತು. ಡೀನ್ ಎಲ್ಗರ್‌ 160 ರನ್‌ ಸಿಡಿಸಿದರೆ, ಕ್ಯಾಪ್ಟನ್ ಡಿ ಕಾಕ್ 111ರನ್ ಸಿಡಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಹರಿಣಗಳು ತನ್ನೆಲ್ಲಾ ವಿಕೆಟ್ ಕಳೆದುಕೊಂಡು, 431 ರನ್‌ಗಳನ್ನ ಕಲೆಹಾಕಿತು.

ಇದರೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್‌ಗಳ ಮುನ್ನಡೆ ಸಾಧಿಸಿತು. ಫಸ್ಟ್ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದ್ದರು. ರೋಹಿತ್ ಶರ್ಮಾ, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಟೀಮ್ ಇಂಡಿಯಾ ಸ್ಕೋರ್ ಹೆಚ್ಚಿಸಿ, ಆಕರ್ಷಕ ಶತಕ ಸಿಡಿಸಿ ಆಫ್ರಿಕನ್ನರಿಗೆ ತಲೆನೋವಾಗಿ ಕಾಡಿದ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ 127 ರನ್ ನೆರವಿನೊಂದಿಗೆ 4 ವಿಕೆಟ್ ನಷ್ಟಕ್ಕೆ 323 ರನ್‌ಗಳಿಸಿದ್ದಾಗ ವಿರಾಟ್ ಇನ್ನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿದ್ದರು, ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್‌ನೊಂದಿಗೆ ಹರಿಣಗಳಿಗೆ ಒಟ್ಟು 395 ರನ್‌ಗಳ ಟಾರ್ಗೆಟ್ ನೀಡಲಾಯಿತು.

ಈ ಗುರಿ ಬೆನ್ನತ್ತಿದ ಹರಿಣಗಳನ್ನು ಎನ್ನಿಲ್ಲದೇ ಕಾಡಿ, ಜಡೇಡಾ 4 ವಿಕೆಟ್, ಶಮಿ 5 ವಿಕೆಟ್ ಹಾಗೂ ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆಯುವುದರ ಮೂಲಕ ಹರಿಣಗಳ ರನ್ ಕಲೆ ಹಾಕಲು ಕಡಿವಾಣ ಹಾಕಿದರು. ಎರಡನೆ ಇನ್ನಿಂಗ್ಸ್​ನಲ್ಲಿ ಆಫ್ರಿಕಾ 191 ರನ್ ಕಲೆಹಾಕುವುದರೊಳಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿತು.

Recommended For You

About the Author: Dayakar

Leave a Reply

Your email address will not be published. Required fields are marked *