ಮೋದಿಗೆ ಪತ್ರ ಬರೆದಿದ್ದ 50 ಸೆಲೆಬ್ರಿಟಿಗಳ ಮೇಲೆ FIR ದಾಖಲು..! ಸೆಲೆಬ್ರಿಟಿಗಳು ಯಾರು ಗೊತ್ತಾ..?

ಮುಜಾಫರ್​ಪುರ್: ಗುಂಪು ಹಲ್ಲೆ ಖಂಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದದ್ದ ಸುಮಾರು 50 ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ದೇಶದಲ್ಲಿ ಗುಂಪು ಹಲ್ಲೆ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಮಾರು 50 ಸೆಲೆಬ್ರಿಟಿಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ನಿರ್ದೇಶಕ ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣಾ ಸೇನ್, ನಟಿ ಸೌಮಿತ್ರಾ ಚಟರ್ಜಿ, ಶ್ಯಾಮ್ ಬೆನಗಲ್, ಬರಹಗಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಶುಭಾ ಮುದ್ಗಲ್, ಅಡೂರ್ ಗೋಪಾಲಕೃಷ್ಣನ್ ಸೇರಿದಂತೆ 50 ಮಂದಿ ವಿರುದ್ಧ ಬಿಹಾರದ ಮುಜಾಫರ್‌ಪುರ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಎರಡು ತಿಂಗಳ ಹಿಂದೆ ಸೆಲೆಬ್ರಿಟಿಗಳ ವಿರುದ್ಧ ಸಲ್ಲಿಸಿದ ಅರ್ಜಿ ಪರಿಗಣಿಸಿದ ಮುಖ್ಯ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದರು. ಪತ್ರ ಬರೆದ ಸೆಲೆಬ್ರಿಟಿಗಳ ವಿರುದ್ಧ ದೇಶದ್ರೋಹ, ಸಾಮಾಜಿಕ ಕಿರುಕುಳ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಶಾಂತಿ ಕದಡುವ ಯತ್ನ ಮೊದಲಾದ ಆರೋಪ ಹೊರಿಸಲಾಗಿದೆ.

ದೇಶದ ಘನತೆ ಹಾಳು ಮಾಡಲು ಮತ್ತು ಪ್ರಧಾನಮಂತ್ರಿಯ ಕೆಲಸ ನಿರ್ವಹಣೆಯ ಶಕ್ತಿಗುಂದಿಸುವುದಕ್ಕಾಗಿ ಸೆಲೆಬ್ರಿಟಿಗಳು ಯತ್ನಿಸಿದ್ದಾರೆ ಎಂದು ವಕೀಲ ಓಜಾ ದೂರಿದ್ದರು.

Recommended For You

About the Author: Sushmitha T S

Leave a Reply

Your email address will not be published. Required fields are marked *