Top

ಹೇಗಿದೆ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ..?ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಹೇಳಿದ್ದೇನು..?

ಹೇಗಿದೆ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ..?ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಹೇಳಿದ್ದೇನು..?
X

ಅಧ್ಯಕ್ಷ ಇನ್​ ಅಮೇರಿಕಾ. ಸ್ಯಾಂಡಲ್​ವುಡ್​ ಕಾಮಿಡಿ ಅಧ್ಯಕ್ಷ ಶರಣ್​ ಆಭಿನಯದ ತಾಜಾ ಸಿನಿಮಾ. ನಾಲ್ಕು ವರ್ಷಗಳ ಹಿಂದೆ ಚಿ. ತೂ ಸಂಘದ ಅಧ್ಯಕ್ಷರನ್ನ ನೋಡಿದವರು ಅಮೇರಿಕಾ ಅಧ್ಯಕ್ಷರನ್ನ ನೋಡೋಕ್ಕೆ ಕಾಯ್ತಿದ್ರು. ಥಿಯೇಟರ್​ ಅಂಗಳಕ್ಕೆ ಅಧ್ಯಕ್ಷರ ಆಗಮನವಾಗಿದೆ.

ಅಧ್ಯಕ್ಷ ಅನ್ನೋ ಟೈಟಲ್​ಗೆ ಬ್ರಾಂಡ್​ ಅಂಬಾಸಿಡರ್ ಕಾಮಿಡಿ ಸ್ಟಾರ್ ಶರಣ್. ಇದೀಗ ಅದೇ ಟೈಟಲ್​ನಲ್ಲಿ ಮತ್ತೊಂದು ಔಟ್ ಅಂಡ್​ ಔಟ್ ಕಾಮಿಡಿ ಎಂಟರ್​ಟೈನರ್​, ಚಿತ್ರ ತೆರೆಗೆ ಬಂದಿದೆ. ಅದೇ ಅಧ್ಯಕ್ಷ ಇನ್​ ಅಮೇರಿಕಾ. ಈ ಬಾರಿ ಅಧ್ಯಕ್ಷ ಗಾಂಧಿನಗರ ದಾಟಿ ದೂರದ ಅಮೇರಿಕಾಗೇ ಹೋಗಿದ್ದು, ವಿದೇಶದಲ್ಲಿ ಶರಣ್ ಅಧ್ಯಕ್ಷಗಿರಿಯನ್ನ ಪ್ರೇಕ್ಷಕರು ಸಖತ್​ ಎಂಜಾಯ್​ ಮಾಡ್ತಿದ್ದಾರೆ.

ಅಧ್ಯಕ್ಷ ಇನ್ ಅಮೇರಿಕಾ ಸ್ಟೋರಿಲೈನ್

ಒಂದೂರಲ್ಲಿ , ಒಂದೊಳ್ಳೆ ತುಂಬು ಕುಟುಂಬದಲ್ಲಿ, ಏನೂ ಕೆಲಸ ಇಲ್ಲದೇ, ಕೆಲಸ ಮಾಡದೇ , ಉಂಡಾಡಿ ಗುಂಡನಂತೆ ಸ್ನೇಹಿತರ ಜೊತೆ ಓಡಾಡಿಕೊಂಡು ಇರೋ ಹುಡುಗ ಉಲ್ಲಾಸ್. ಆದ್ರೆ ಏನು ಕೆಲಸ ಮಾಡದೇ ಒಂದೇ ಸಲ ಶ್ರೀಮಂತನಾಗಿಬಿಡಬೇಕು ಅನ್ನೋ ಆಸೆ. ಅದಕ್ಕಂತ್ಲೇ ಊರಿನ ಲಕ್ಷಾಧೀಶ್ವರ ವಿಕಲ ಚೇತನ ಮಗಳನ್ನ ಮದುವೆಯಾಗೋಕ್ಕೆ ಒಪ್ಪಿಕೊಳ್ತಾನೆ. ಆದ್ರೆ ದುಡ್ಡಿಗೆ ಆಸೆ ಬಿದ್ದು ಕೋಟ್ಯಾಧೀಶ್ವರೆಯಾದ ನಾಯಕಿ ನಂದಿನಿಯನ್ನ ಮದುವೆಯಾಗಿ ಅಮೇರಿಕಾಗೇ ಹಾರಿ ಬಿಡ್ತಾನೆ. ಮದ್ವೆ ನಂತ್ರ ಹೆಂಡ್ತಿಗೆ ದುಷ್ಚಟ ಇದೆ ಅಂತ ಗೊತ್ತಾಗತ್ತೆ. ಏನದು ಕೆಟ್ಟ ಅಭ್ಯಾಸ? ಆಮೇಲೆ ಏನಾಗುತ್ತೆ? ಏನ್ ಕಥೆ? ಅನ್ನೋದನ್ನ ಥೀಯೇಟರ್​ನಲ್ಲಿ ಕೂತು ಸಿನಿಮಾ ನೋಡಿದ್ರೇನೆ ಮಜಾ.

ಅಧ್ಯಕ್ಷ ಇನ್ ಅಮೇರಿಕಾ ಆರ್ಟಿಸ್ಟ್​ ಪರ್ಫಾಮೆನ್ಸ್​

ಚಿತ್ರದ ನಾಯಕ ಉಲ್ಲಾಸ್​ ಪಾತ್ರದಲ್ಲಿ ಮಿಂಚಿರೋ ಶರಣ್​ ಅಭಿನಯದ ಬಗ್ಗೆ ಎರಡನೇ ಮಾತೇಯಿಲ್ಲ. ಇಡೀ ಸಿನಿಮಾದ ಹೈಲೈಟ್ ಶರಣ್. ಪಾತ್ರಕ್ಕೆ ತಕ್ಕಂತ ಬಾಡಿ ಲಾಂಗ್ವೇಜ್ , ಡೈಲಾಗ್ ಡೆಲಿವರಿ,ಅದ್ರ ಜೊತೆಗೆ ಸಖತ್ ಡಾನ್ಸ್​ ಹೀಗೆ ಕಂಪ್ಲಿಟ್ ಪ್ಯಾಕೇಜ್​ ಪರ್ಫಾಮೆನ್ಸ್​ ಕೊಟ್ಟಿದ್ದಾರೆ ಶರಣ್.

ಇನ್ನು ನಾಯಕಿ ನಂದಿನಿಯಾಗಿ, ರಾಗಿಣಿ ದ್ವಿವೇದಿ ಮಿಂಚಿದ್ದು, ಬೋಲ್ಡ್ ಅಂಡ್ ಬ್ಯೂಟಿಫುಲ್​ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕಾಮಿಡಿ ಜಾನರ್​ ಸಿನಿಮಾದಲ್ಲಿ ಅಭಿನಯಿಸಿರೋ ರಾಗಿಣಿ ಪಾತ್ರಕ್ಕೆ ತಕ್ಕಂತೆ ಅಭಿನಯ ಮಾಡಿದ್ದಾರೆ. ಕಾಮಿಡಿ ಸ್ಟಾರ್​ಗಳಾದ ಸಾಧುಕೋಕಿಲ, ತಬಲಾ ನಾಣಿ, ರಂಗಾಯಣ ರಘೂ, ಶಿವರಾಜ್​ ಕೆ.ಆರ್ ಪೇಟಿ, ಕಾಮಿಡಿಯ ಮೃಷ್ಟಾನ್ನ ಭೋಜನವನ್ನೇ ಬಡಿಸಿದ್ದಾರೆ. ಪೋಷಕ ಪಾತ್ರದಲ್ಲಿ ಅವಿನಾಶ್, ಪ್ರಕಾಶ್ ಬೆಳವಾಡಿ, ಹಿರಿಯ ನಟ ಅಶೋಕ್, ಪದ್ಮಜಾ ರಾವ್, ಮಕರಂದ್​ ದೇಶ್​ಪಾಂಡೆ ಅದ್ಭುತ ಅಭಿನಯ ನೀಡಿದ್ದಾರೆ.

ಅಧ್ಯಕ್ಷ ಇನ್ ಅಮೇರಿಕಾ ಪ್ಲಸ್ ಪಾಯಿಂಟ್ಸ್

⦁ ಕಾಮಿಡಿ

⦁ ಬ್ಯಾಗ್ರೌಂಡ್​ ಮ್ಯೂಸಿಕ್ & ಸಾಂಗ್ಸ್

⦁ ಕಲಾವಿದರ ಪರ್ಫಾಮೆನ್ಸ್

⦁ ಡೈಲಾಗ್ಸ್

ಅಧ್ಯಕ್ಷ ಇನ್ ಅಮೇರಿಕಾ ಮೈನಸ್ ಪಾಯಿಂಟ್ಸ್

ಅಧ್ಯಕ್ಷ ಇನ್ ಅಮೇರಿಕಾ ಸಿನಿಮಾ ಔಟ್ ಅಂಡ್ ಔಟ್ ಕಾಮಿಡಿ ಎಂಟರ್​ಟೈನರ್​ ಆಗಿದ್ದು, ಸಿಂಪಲ್​ ಕಥೆ ಇಟ್ಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಚಿತ್ರದಲ್ಲಿರೊ ಕೆಲವು ಸೆಟ್​ಗಳು ಅಷ್ಟಕ್ಕಷ್ಟೇ, ಮೇಕಿಂಗ್​ ವೈಸ್​ ಇನ್ನೊಂದಷ್ಟು ಕೆಲಸ ಮಾಡ್ಬಹುದಿತ್ತು ಅನ್ನೋದನ್ನ ಬಿಟ್ರೆ ಅಧ್ಯಕ್ಷನನ್ನ ಒಮ್ಮೆಯಲ್ಲ,ಎರಡು ಸರಿ ನೋಡೋಕ್ಕು ಅಡ್ಡಿಯಿಲ್ಲ.

TV5 ರೇಟಿಂಗ್: 4/5

ಫೈನಲ್​ ಸ್ಟೇಟ್​ಮೆಂಟ್​

ಅಧ್ಯಕ್ಷ ಇನ್ ಅಮೇರಿಕಾ . ಇಡೀ ಕುಟುಂಬ ಸಮೇತರಾಗಿ ಕೂತು ಹೊಟ್ಟೆ ಹುಣ್ಣಾಗುವಷ್ಟು ನಗುವಂತಹ ಸಿನಿಮಾ. ಫಸ್ಟ್ ಹಾಫ್​ ಅದ್ದೂರಿಯಾಗಿದೆ. ಸೆಕೆಂಡ್​ ಹಾಫ್​ ಭರ್ಜರಿಯಾಗಿದೆ. ಸೋ.. ಟೋಟಲಿ ಅಧ್ಯಕ್ಷ ಇನ್ ಅಮೇರಿಕಾ ಒಂದು ರಿಫ್ರೆಶ್​ಮೆಂಟ್ ಸಿನಿಮಾ.

ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ, ಟಿವಿ5

Next Story

RELATED STORIES