ಬಂಗಾಳದ ನೆಲದಲ್ಲಿ ದೀದಿ ವಿರುದ್ಧ ಗುಡುಗಿದ ಅಮಿತ್​ ಶಾ

ನವದೆಹಲಿ: ಇಡೀ ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಪಕ್ಕಾ. ಬಂಗಾಳದಲ್ಲಿ ಎನ್‌ಆರ್‌ಸಿ ಅನುಷ್ಠಾನ ಮಾಡಲು ಬಿಡಲ್ಲ ಎಂದಿದ್ದ ದೀದಿಗೆ ಅಮಿತ್ ಶಾ ಗುದ್ದು ನೀಡಿದ್ದಾರೆ. ಬೇರೆ ದೇಶಗಳಿಂದ ವಲಸೆ ಬಂದಿರೋ ಹಿಂದೂಗಳಿಗೆ ಪೌರತ್ವ ನೀಡಲು ಕೇಂದ್ರ ಮುಂದಾಗಿದೆ.

ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆೆ ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಟ್ಟಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಘೋಷಿಸಿದ್ದಾರೆ. ಹಾಗೆಯೇ, ದೀದಿಗೆ ಗುದ್ದು ಕೊಟ್ಟಿರುವ ಚಾಣಾಕ್ಯ, ಎನ್‌ಆರ್‌ಸಿ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಅಪಪ್ರಚಾರ ಮಾಡಿ ಜನರಲ್ಲಿ ಆತಂಕ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಇಂದು ಕೋಲ್ಕತ್ತಾದಲ್ಲಿ ನಡೆದ ಎನ್ಆರ್‌ಸಿ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅಮಿತ್ ಶಾ, ಎನ್‌ಆರ್‌ಸಿ ಬಗ್ಗೆ ಜನರಲ್ಲಿ ಮೂಡಿರುವ ಆತಂಕ ನಿರಾರಿಸುವ ಕೆಲಸ ಮಾಡಿದರು. ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದ ಲಕ್ಷಾಂತರ ಹಿಂದೂ ನಿರಾಶ್ರಿತರನ್ನು ದೇಶದಿಂದ ಹೊರಗೆ ದಬ್ಬಲಾಗ್ತಿದೆ ಎಂದು ದೀದಿ ಹೇಳ್ತಿದ್ದಾರೆ. ಆದರೆ, ಇದೊಂದು ದೊಡ್ಡ ಸುಳ್ಳು. ಈ ಮಸೂದೆಯಿಂದ ಯಾವುದೇ ಹಿಂದು, ಸಿಖ್‌, ಜೈನ ಹಾಗೂ ಬೌದ್ಧ ನಿರಾಶ್ರಿತರಿಗೆ ತೊಂದೆರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ, ಮುಂದುವರಿದ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ, ನೆರೆ ದೇಶಗಳಿಂದ ಬಂದಿರುವ ಅಲ್ಪಸಂಖ್ಯಾತ ವಲಸಿಗರಿಗೂ ಪೌರತ್ವ ನೀಡುವ ಮಸೂದೆಯನ್ನು 2016ರಲ್ಲೇ ರಾಜ್ಯಸಭೆಯಲ್ಲಿ ಬಿಜೆಪಿ ಸರ್ಕಾರ ಮಂಡಿಸಿದೆ. ಆದರೆ, ತೃಣಮೂಲ ಕಾಂಗ್ರೆಸ್ ಸಂಸದರೇ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಮೇಲ್ಮನೆಯಲ್ಲಿ ನೆನೆಗುದಿಗೆ ಬಿದ್ದಿದೆ ಎಂದರು. ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡುತ್ತೇವೆ. ಆದ್ರೆ, ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರಹಾಕ್ತೇವೆ ಎಂದು ಹೇಳಿದ್ದಾರೆ.

ಮತಬ್ಯಾಂಕ್‌ಗಾಗಿ ಮಮತಾ ಬ್ಯಾನರ್ಜಿ ನುಸುಳುಕೋರರಿಗೆ ಬೆಂಬಲ ನೀಡ್ತಿದ್ದಾರೆ ಅಂತಲೂ ಆರೋಪಿಸಿದರು. ನುಸುಕೋರರಲು ಕಮ್ಯೂನಿಷ್ಟ್‌ ಪಕ್ಷಕ್ಕೆ ಮತ ಹಾಕುತ್ತಿದ್ದಾಗ ಅವರನ್ನು ವಿರೋಧಿಸಿದರು. ಆದರೆ, ಈಗ ತೃಣಮೂಲ ಕಾಂಗ್ರೆಸ್ ಪರ ಮತ ಹಾಕುತ್ತಿದ್ದು, ಈಗ ಮಮತಾಗೆ ಅವರು ಬೇಕಾಗಿದ್ದಾರೆ. ಮಮತಾಗೆ ದೇಶಕ್ಕಿಂತ ಪಕ್ಷದ ಹಿತವೇ ಮುಖ್ಯ. ಆದ್ರೆ, ನಮಗೆ ಯಾವುದೋ ಒಂದು ಪಕ್ಷದ ಹಿತಕ್ಕಿಂತ ದೇಶದ ಹಿತಾಸಕ್ತಿಯೇ ಪ್ರಮುಖ ಎಂದಿದ್ದಾರೆ.

ಕಳೆದ ತಿಂಗಳು ದೆಹಲಿ ಪ್ರವಾಸ ಕೈಗೊಂಡಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಭೇಟಿ ಮಾಡಿ ಎನ್‌ಆರ್‌ಸಿ ಬಗ್ಗೆ ಚರ್ಚಿಸಿ ಬಂದಿದ್ದರು. ಪಶ್ಚಿಮ ಬಂಗಾಳದಲ್ಲಿ ಎನ್ಆರ್‌ಸಿ ಜಾರಿ ಮಾಡದಂತೆ ಮನವಿ ಮಾಡಿದ್ದರು. ಅಲ್ಲದೆ, ಅಸ್ಸೋಂ ಎನ್‌ಆರ್‌ಸಿ ಪಟ್ಟಿಯಿಂದ ಹಿಂದಿ ಮಾತನಾಡುವ, ಬೆಂಗಾಲಿ ಮಾತನಾಡುವ ಮತ್ತು ಸ್ಥಳೀಯ ಅಸ್ಸಾಮಿಗಳು ಹೊರಗುಳಿದಿದ್ದಾರೆ. ದೇಶದ ಮತದಾರರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ಅಮಿತ್‌ ಶಾಗೆ ಮನವಿ ಪತ್ರ ನೀಡಿದ್ದರು. ಆದರೆ, ಈಗ ಅಮಿತ್ ಶಾ ಅದೆಲ್ಲಾ ಸಾಧ್ಯವೇ ಇಲ್ಲ. ದೇಶದಲ್ಲಿ ಅಕ್ರಮ ವಲಸಿಗರಿಗೆ ನೆಲೆ ಇಲ್ಲ ಎಂದು ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ದೇಶದಾದ್ಯಂತ ಜಾರಿಗೆ ತರೋದಾಗಿಯೂ ಪುನರುಚ್ಚರಿಸಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *