Top

ಇವ್ರು ಯಾಕೆ ಸಂಸದರಾಗಿದ್ದು? ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ..! ರಾಮಲಿಂಗಾರೆಡ್ಡಿ

ಇವ್ರು ಯಾಕೆ ಸಂಸದರಾಗಿದ್ದು? ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ..! ರಾಮಲಿಂಗಾರೆಡ್ಡಿ
X

ಬೆಂಗಳೂರು: ಪ್ರಧಾನ ಮಂತ್ರಿಗಳು ಕೇರಳ, ತಮಿಳುನಾಡುಗೆ ಬಂದಿದ್ದರು. ನಮ್ಮಲ್ಲಿ ಸಹ ಚಂದ್ರಯಾನ ನೋಡಲು ಬಂದಿದ್ರು, ಆದ್ರೆ ನರೆ ಪರಿಹಾರಕ್ಕೆ ಸಾವಿರ ಕೋಟಿ ಅಲ್ಲ, ಒಂದು ನಯಾ ಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಸರ್ಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಕೇಂದ್ರದ ಅನುದಾನ ಬಿಡುಗಡೆ ವಿಳಂಬ ಕುರಿತು ಟಿವಿ5 ಯೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಇವ್ರು ಯಾಕೆ ಸಂಸದರಾಗಿದ್ದಾರೆ? ರಾಜೀನಾಮೆ ಕೊಟ್ಟು ಮನೆಯಲ್ಲಿ ಇದ್ದರೆ ಒಳ್ಳೆಯದು ಎಂದು ರಾಮಲಿಂಗಾರೆಡ್ಡಿ ಅವರು ರಾಜ್ಯದ ಸಂಸದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಸದ್ಯ ಬಿಹಾರದಲ್ಲಿ ಚುನಾವಣೆ ಇರಬೇಕು. ಹೀಗಾಗಿ ಕೇಂದ್ರ ಸರ್ಕಾರ ಅವರಿಗೆ ಬೇಗ ಅನುದಾನ ಬಿಡುಗಡೆ ಮಾಡಿದೆ. ಇಲ್ಲಿ ಗೆದ್ದು ಹೋದ ಸಂಸದರು ಇರೋದು ಒಂದೇ, ಇಲ್ದಿರೋದು ಒಂದೇ ಎಂದರು. ಪ್ರಧಾನಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ದೊಡ್ಡ ಉದ್ದಮಿದಾರರ ಬಗ್ಗೆ ಮಾತ್ರ ಕಾಳಜಿ ಇದೆ. ಇಂತವರಿಗೆ ಮುಂದಿನ ದಿನಗಳಲ್ಲಿ ಮತದಾರರು ಬುದ್ಧಿ ಕಲಿಸಬೇಕು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಮನವಿ ಮಾಡಿಕೊಂಡರು.

Next Story

RELATED STORIES