‘ಕಳ್ಳರು, ಕಾಮ್ ಚೋರರು ಚಾಮುಂಡಿ ದೇಗುಲ ಕಟ್ಟಿದ್ದಾರೆ’

ಮೈಸೂರು: ಯದುವಂಶದ ಅರಸರು ಎಂದು ಸಹ ಚಾಮುಂಡಿ ಹೆಸರಿನಲ್ಲಿ ದಸರಾ ಮಾಡಿಲ್ಲ, ಮಾನವೀಯತೆ, ಸಮಾನತೆ, ಸ್ವಾತಂತ್ರ್ಯವನ್ನು ನಿಯಂತ್ರಿಸುವ ಒಂದು ಶಕ್ತಿ ಚಾಮುಂಡಿ ಎಂದು ಪ್ರೊಫೆಸರ್ ಮಹೇಶ್ ಚಂದ್ರ ಗುರು ಅವರು ಬುಧವಾರ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮುಂಡಿ ಎನ್ನೋದು ಒಂದು ನಕಲಿ ಪಾತ್ರವಾಗಿದೆ. ಹೊಟ್ಟೆಪಾಡಿಗಾಗಿ ವೈದಿಕರು ಚಾಮುಂಡೇಶ್ವರಿ ಹೆಸರಿನಲ್ಲಿ ದೇಗುಲ ಕಟ್ಟಿದ್ದಾರೆ. ಕಳ್ಳರು, ಕಾಮ್ ಚೋರರು ಚಾಮುಂಡಿ ದೇಗುಲ ಕಟ್ಟಿದ್ದಾರೆ ಎಂದರು.

ಇನ್ನು ಮಹಿಷಾಸುರ ರಾಕ್ಷಸನಲ್ಲ, ಅವನೊಬ್ಬ ರಕ್ಷಕ. ಯದುವಂಶಕ್ಕೂ ಮೊದಲು ಮಹಿಷಾಸುರ ಒಳ್ಳೆಯ ಆಡಳಿತ ನಡೆಸಿದ್ದಾನೆ. ಮಹಿಷಾಸುರ ಸರ್ವ ರಕ್ಷಕ. ಮೈಸೂರು ಅರಸರು ಎಲ್ಲೆಡೆ ಮಹಿಷೂರು ಎಂದು ಉಲ್ಲೇಖಿಸಿದ್ದಾರೆ. ಮೈಸೂರು ಎಂದು ಎಲ್ಲೂ ನಮೂದಿಸಿಲ್ಲ ಎಂದು ಅವರು ತಿಳಿಸಿದರು.

ಅಲ್ಲದೇ ಮೈಸೂರು ಅರಸರನ್ನು ಮಹಿಷಾ ಮಂಡಲಾಧೀಶ್ವರ ಎಂದು ಬಹುಪರಾಕ್ ಹಾಕಲಾಗುತ್ತಿತ್ತು. ಹಾಗಾಗಿ ಮಹಿಷಾ ದಸರಾ ಆಚರಣೆ ಮಾಡಲಾಗ್ತಿದೆ. ಮಹಿಷಾ ದಸರಾ ಯಾವುದೇ ಧರ್ಮದ ವಿರುದ್ಧವಲ್ಲ, ಮಹಿಷನ ಮಹತ್ವ ತಿಳಿಸಲು ಈ ಆಚರಣೆ ಅಷ್ಟೇ. ಸೆ.27ರಂದು ಮಹಿಷಾ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಮೈಸೂರಿನಲ್ಲಿ ಪ್ರೊಫೆಸರ್ ಮಹೇಶ್ ಚಂದ್ರ ಗುರು ಅವರು ಮಾತನಾಡಿದ್ದಾರೆ.

Recommended For You

About the Author: Manjunatha D

Leave a Reply

Your email address will not be published. Required fields are marked *