ಸೋನಿಯಾ ಗಾಂಧಿಗೆ ಸವಾಲ್ ಹಾಕಿದ ನಳೀನ್​ ಕುಮಾರ್ ಕಟೀಲ್​

ಹಾವೇರಿ: ನನಗೆ ಅಮಿತ್ ಷಾ ಅವರು ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರುವುದು ಅಧಿಕಾರದಲ್ಲಿ ಇರಲು ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಬುಧವಾರ ಹೇಳಿದರು.

ನಗರದಲ್ಲಿಂದು ವಿಧಾನಸಭಾ ಕ್ಷೇತ್ರದ ಶಕ್ತಿಕೇಂದ್ರಗಳ ಪ್ರಮುಖ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯನ್ನು ರಾಜ್ಯದಲ್ಲಿ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗಲು, ಬಿಜೆಪಿಯಲ್ಲಿ ಇರುವ ಸಾವಿರ, ಸಾವಿರ ಕಾರ್ಯಕರ್ತರು ಪಾರ್ಟಿ ಅಧ್ಯಕ್ಷನಾಗಲು ಸಾಧ್ಯವಿದೆ ಎಂದರು.

ಅಂತೆಯೇ ನಮ್ಮ ಗುರಿ ಭಾರತವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು. ನಮ್ಮ ಸರ್ಕಾರ ಜಮ್ಮು-ಕಾಶ್ಮೀರ ರಾಜ್ಯವನ್ನು ಉಳಿಸಿದೆ ಅದು ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಎಂದು ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಇನ್ನು ರಾಮಮಂದಿರ ಬಗ್ಗೆ ಮಾತನಾಡಿದ ಅವರು,  ರಾಮಮಂದಿರ ವನ್ನು ಕಟ್ಟುವ ತಾಕತ್ತು ಬಿಜೆಪಿ ಗೆ ಮಾತ್ರ ಇದೆ. ಅದೇ ಸೋನಿಯಾ ಗಾಂಧಿಗೆ ಇದೆಯಾ(?), 372ನೇ ವಿಧಿಯನ್ನು ರಾಹುಲ್ ಗಾಂಧಿ ಒಪ್ಪುತ್ತಾರಾ(?) ಎಂದ ಅವರು, ಜಗತ್ತಿನಲ್ಲಿ ಆರ್ಥಿಕ ಕುಸಿತದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಕೆಲವು ಸಮಸ್ಯೆಯಿಂದ ಕುಸಿತ ಕಂಡಿದೆ ಎಂದು ಅವರು ಹೇಳಿದರು.

ಅಲ್ಲದೇ ಕೇರಳದಲ್ಲಿ ಇನ್ನೂ ಎರಡು ವರ್ಷದಲ್ಲಿ ಪ್ರತಿ ಹಳ್ಳಿಯ ಮನೆಯಲ್ಲಿ ಬಿಜೆಪಿ ಬಾವುಟ ಹಾರಲಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ಕೆಲಸ ಮಾಡಿದವರಿಗೆ ಆಧ್ಯತೆ ಕೊಡಲಾಗುವುದು. ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, ಕಲ್ಲು ತೋರುವವರಿಗೆ ಇಲ್ಲಿ ಅವಕಾಶವಿಲ್ಲ ಎಂದರು. ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕುವುದಕ್ಕೆ ನಾನು ಬಿಡಲ್ಲ. ಪ್ರತಿಯೊಬ್ಬ ಕಾರ್ಯಕರ್ತರನ್ನು ಕಾಪಾಡುವುದು ನಮ್ಮ ಬಿಜೆಪಿ ಯ ಕರ್ತವ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *