ಬಹುಶಃ ಈ ತರ ಕಾಗೆಯನ್ನು ಎಲ್ಲಿಯೂ ನೋಡಿರೋಕೆ ಚಾನ್ಸೇ ಇಲ್ಲ..!

ಹುಬ್ಬಳ್ಳಿ: ಅದೆಷ್ಟೋ ಜನರು ಕಾಗೆಯನ್ನು ನೋಡಿದರೆ ಅಪಶಕುನ ಎಂಬ ನಂಬಿಕೆ ಇದೆ. ಅಲ್ಲದೇ ಇದು ಕಪ್ಪು ಬಣ್ಣ ಇರುವುದರಿಂದ ಕಾಗೆ ಅಪಶಕುನ ಎಂಬ ಮಾತುಗಳನ್ನುಅನೇಕರು ಆಡುತ್ತಿರುತ್ತಾರೆ.  ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪದ ದುಮ್ಮವಾಡದ ನೀರಸಾಗರ ಕೆರೆಯ ಬಳಿ ಕಪ್ಪು ಕಾಗೆಗಳ‌ ಮಧ್ಯೆ ಒಂದು ಬಿಳಿ ಕಾಗೆ ಪ್ರತ್ಯಕ್ಷವಾಗುವ ಮೂಲಕ ಅಲ್ಲಿನ ಜನರಿಗೆ ಅಚ್ಚರಿಯನ್ನುಂಟು ಮಾಡಿತು.

ಇಷ್ಟು ದಿನ ಕರಿ‌ ಕಾಗೆಗಳನ್ನು ನೋಡಿದ ಜನರಲ್ಲಿ ಕೌತುಕ ಮನೆ ಮಾಡಿದ್ದು, ಇದು ಪಾರಿವಾಳ ಇರಬೇಕು ಎಂದು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರೆ, ಇನ್ನು ಕೆಲವರು ಕೇಡುಗಾಲಕ್ಕೆ ಕಾಗೆ ಬಿಳಿ ಬಣ್ಣಕ್ಕೆ ತಿರುಗಿಕೊಂಡಿದೆ ಎಂದು ಕೌತುಕದಿಂದ ಕಾಗೆ ವೀಕ್ಷಿಸಿದರು.

ಇನ್ನು ಕೆಲವರು ಅಪರೂಪ ಬಣ್ಣದ ಕಾಗೆಯನ್ನು ನೋಡಿದ ಜನರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಕೆಲವೊಮ್ಮೆ ಜಿನ್​ಗಳ ಬದಲಾವಣೆಯಿಂದ ಈ ರೀತಿಯಲ್ಲಿ ಹುಟ್ಟುತ್ತವೆ ಎಂಬುದು ಪಕ್ಷಿ ತಜ್ಞರು ಹೇಳಿದ್ದಾರೆ.

ಆದರೆ ಈ ಕಾಗೆ ಎಲ್ಲಾ ಲಕ್ಷಣಗಳು ಕಾಗೆಯನ್ನು ಹೊಲುತ್ತಿದ್ದು, ರೆಕ್ಕೆಗಳು ಮಾತ್ರ ಬಿಳಿ ಇದ್ದು, ಕೊಕ್ಕು ಹಾಗೂ ಕಾಲು ಕಾಗೆಯಂತೆ ಇದೆ. ಬಣ್ಣ ಬದಲಾದರು ಇತರೆ ಕಾಗೆಗಳು ಬಿಳಿ ಕಾಗೆಯನ್ನು ದೂರ ಮಾಡದೆ ತಮ್ಮ ಬಳಿ‌ ಕರೆದುಕೊಂಡು ಅನೋನ್ಯವಾಗಿರುವುದು ಇಲ್ಲಿ ಕಂಡುಬಂದಿತು.

[youtube https://www.youtube.com/watch?v=OkCkwXAqmZ8]

Recommended For You

About the Author: Manjunatha D

Leave a Reply

Your email address will not be published. Required fields are marked *