ಪೈಲ್ವಾನ್ ಆಗೋ ಆಸೆ ವ್ಯಕ್ತಪಡಿಸಿದ ಮತ್ತೊಬ್ಬ ಸ್ಟಾಂಡಲ್​ವುಡ್​​ ಸ್ಟಾರ್​!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪ್ಯಾನ್​ ಇಂಡಿಯಾ ಕನ್ನಡ ಸಿನಿಮಾ ಪೈಲ್ವಾನ್ ವೀಕ್ಷಿಸಿದ ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್ ಪ್ರತಿಕ್ರಿಯಿಸಿದ್ದು, ಸುದೀಪ್ ಆ್ಯಕ್ಟಿಂಗ್, ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ ಎಂದು ಅವರು ಮೆಚ್ಚುಗೆಯ ಮಾತುಗಳಾನ್ನಾಡಿದ್ದಾರೆ.

ನಗರದ ಓರಾಯನ್ ಮಾಲ್​ನಲ್ಲಿಂದು ಚಿತ್ರ ವೀಕ್ಷಣೆ ಮಾಡಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸುದೀಪ್ ದೇಹ ಹುರಿಗೊಳಿಸಿರೋದು ಸಿನಿಮಾದಲ್ಲಿ ಕಾಣುತ್ತಿದೆ. ಸಿನಿಮಾದಲ್ಲಿರೋ ಸಂದೇಶ ಎಲ್ಲರಿಗೂ ಪ್ರೇರಣೆ ಆಗಬೇಕು ಎಂದು ಅವರು ನುಡಿದರು.

ಅಲ್ಲದೇ ಇದೇ ಸಂದರ್ಭದಲ್ಲಿ ತವರಿಗೆ ಬಾ ತಂಗಿ, ಜೋಗಿ ಸಿನಿಮಾಗಳನ್ನು ಶಿವಣ್ಣ ಅವರು ನೆನಪಿಸಿಕೊಂಡರು. ಇಂಟ್ರೆಸ್ಟ್ ತಗೊಂಡು ಸುದೀಪ್ ಸಿನಿಮಾ ಮಾಡಿದ್ದಾರೆ, ಪೈಲ್ವಾನ್ ತರಹದ ಸಬ್ಜೆಕ್ಟ್ ಮಾಡೋ ಆಸೆಯಿದೆ ಎಂದು ಅವರು ತಿಳಿಸಿದರು.
ಇನ್ನು ಪೈಲ್ವಾನ್ ಪೈರಸಿ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ ಅವರು, ಇಂಡಸ್ಟ್ರಿನಲ್ಲಿ ನಾವೆಲ್ಲರೂ ಒಂದು ಎಂದ ಅವರು ಫ್ಯಾನ್ಸ್

ವಾರ್ ಬಗ್ಗೆಯೂ ಮಾತನಾಡಿದರು. ಎಲ್ಲರೂ ಕೂಡ ಫ್ಯಾಮಿಲಿ ತರ ಇರ್ಬೇಕು. ಎಲ್ಲರೂ ಒಂದಾಗಿರ್ಬೇಕು. ಎಲ್ಲರಿಗಿಂತ ದೊಡ್ಡವನು ದೇವರು, ಕನ್ನಡದಲ್ಲಿ ಒಳ್ಳೆ ಸಿನಿಮಾ ಬಂತು ಅಂದರೆ ಅದಕ್ಕೆ ಪ್ರೋತ್ಸಾಹಿಸಬೇಕು ದೇವರು ಎಲ್ಲಾ ನೋಡ್ತಿರ್ತಾನೆ. ಆ ಕೊಂಡಿ ದೇವರ ಕೈಯಲ್ಲಿ ಇರುತ್ತೆ, ಯಾರನ್ನು ಯಾವಾಗ ಮೇಲೆ ಎಳೀತಾನೋ, ಕೆಳಗೆ ತಳ್ತಾನೋ ಅಂತ ಗೊತ್ತಿಲ್ಲ, ಹಾಗಾಗಿ ಎಲ್ಲರೂ ಒಂದಾಗಿರಿ, ಒಟ್ಟಾಗಿರಿ ಎಂದು ಸ್ಯಾಂಡಲ್​ವುಡ್​​ನ ಹಿರಿಯ ನಟ ಹ್ಯಾಟ್ರಿಕ್​ ಹೀರೋ ಡಾ. ಶಿವರಾಜ್​ಕುಮಾರ್​ ಅವರು ಮಾತನಾಡಿದರು.

Recommended For You

About the Author: Manjunatha D

Leave a Reply

Your email address will not be published. Required fields are marked *