ದುಬಾರಿ ದಂಡಕ್ಕೆ ಬೇಸತ್ತು ‘ಬೆಂಗಳೂರು ಬ್ಯೂಟಿ’ಯ ಸಹಾಯ ಪಡೆದ ವಾಹನ ಸವಾರರು..!

ಸಂಚಾರಿ ದಂಡ ಮೊತ್ತ ಏರಿಕೆಯಿಂದ ವಾಹನ ಸವಾರರಂತೂ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಬೈಕ್, ಕಾರಿನಲ್ಲಿ ಹೋಗ್ತಿದವರು ಇದೀಗ ಅದರ ಸಹವಾಸನೇ ಬೇಡವೆಂದು ಬಿಎಂಟಿಸಿ ಬಸ್ ಮೊರೆ ಹೋಗ್ತಿದ್ದಾರೆ. ಕಳೆದ ಹದಿನೈದು ದಿನದಿಂದ ಜನ ಬಿಎಂಟಿಸಿ ಬಸ್ ಹತ್ತುತ್ತಿದ್ದು, ಪ್ರಯಾಣಿಕರ ಸಂಖ್ಯೆ ಗಣನೀಯ ಇಳಿಕೆಯಾಗಿ ದಿವಾಳಿಯಾಗಿದ್ದ, ಬಿಎಂಟಿಸಿ ಆದಾಯ ಕೂಡ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಭಾರೀ ದಂಡಕ್ಕೆ ಬೆದರಿದ ವಾಹನ ಸವಾರರು..!
ದುಬಾರಿ ದಂಡದಿಂದ ಬೈಕ್, ಕಾರು ಬಿಟ್ಟು ಬಿಎಂಟಿಸಿ ಬಸ್‌ನತ್ತ ಜನ..!
ಸಾರಿಗೆ ನಿಯಮ ಉಲ್ಲಂಘನೆಗೆ ಭಾರಿ ದುಬಾರಿ ದಂಡದಿಂದ ಜನ ಬೇಸತ್ತಿದ್ದಾರೆ. ಇದರಿಂದ ಸ್ವಂತ ಕಾರು, ಬೈಕ್ ತೆಗೆದುಕೊಂಡು ಹೋಗ್ತಿದವರು ಇದರ ಸಹವಾಸವೇ ಬೇಡ ಅಂತ ಬೆಂಗಳೂರಿಗರ ನಿತ್ಯದ ಸಂಗಾತಿ ಬಿಎಂಟಿಸಿ ಬಸ್‌ನತ್ತ ಮುಖ ಮಾಡ್ತಿದ್ದಾರೆ. ಒಂದು ಕಡೆ ವಾಹನಸವಾರರಿಗೆ ಕಂಟಕವಾದರೆ ಮತ್ತೊಂದೆಡೆ ಬಿಎಂಟಿಸಿ ಭಾರಿ ಲಾಭ ತಂದುಕೊಟ್ಟಿದೆ. ಕಳೆದ ಹದಿನೈದು ದಿನದಿಂದ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಹೀಗಾಗಿ ಬಿಎಂಟಿಸಿ ಆದಾಯದಲ್ಲಿ ಏರಿಕೆಯಾಗಿದ್ದು, ಮೋಟಾರು ವಾಹನ ಕಾಯ್ದೆ ಜಾರಿಯಿಂದ 15 ದಿನದಲ್ಲಿ ಬಿಎಂಟಿಸಿ ಆದಾಯ 3.41 ಕೋಟಿ ಹೆಚ್ಚಳವಾಗಿದ್ದು,ಪ್ರಯಾಣಿಕರ ಸಂಖ್ಯೆ ಕೂಡ ಜಾಸ್ತಿಯಾಗಿದೆ.

ದಂಡದ ಮೊತ್ತ ಏರಿಕೆಯಾದ ದಿನದಿಂದ ಚಾಲನಾ ಪರವಾನಗಿ, ವಿಮೆ ನವೀಕರಣ, ಮಾಲಿಕತ್ವ ವರ್ಗಾವಣೆ, ವಾಯುಮಾಲಿನ್ಯ ಪ್ರಯಾಣ ಪತ್ರ ಸೇರಿದಂತೆ ವಿವಿಧ ದಾಖಲಾತಿ ಪಡೆಯಲು ವಾಹನ ಸವಾರರು ಸಾರಿಗೆ ಇಲಾಖೆ ಕಚೇರಿಗೆ ಎಡತಾಕುತ್ತಿದ್ದಾರೆ. ಇನ್ನೊಂದೆಡೆ ದಾಖಲಾತಿಗಳು ಒಂದಿಲ್ಲದಿದ್ದರೂ ವಾಹನಗಳನ್ನ ರಸ್ತೆಗಿಳಿಸಲು ಭಯ ಪಡುತ್ತಿದ್ದಾರೆ.

ಪ್ರತಿ ನಿತ್ಯ ಬಿಎಂಟಿಸಿ ಬಸ್‌ನಲ್ಲಿ 35 ರಿಂದ 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ರು. ಸೆಪ್ಟೆಂಬರ್ ಒಂದರಿಂದ ಈಚೆಗೆ ಹೆಚ್ಚುವರಿಯಾಗಿ 2.5 ಲಕ್ಷ ಪ್ರಯಾಣಿಕರು ಹೆಚ್ಚುವರಿಯಾಗಿ ಬಸ್ ಹತ್ತಿದ್ದಾರೆ. ಈ ಅವಧಿಯಲ್ಲಿ ಸಂಸ್ಥೆ ಆದಾಯ ಏರಿಕೆಯಾಗಿದೆ. ದಂಡಕ್ಕೆ ಹೆದರಿ ಬಸ್ ಹತ್ತುವರ ಸಂಖ್ಯೆ ಹೆಚ್ಚಳ ಕಂಡಿದೆ. ಎಲ್ಲಾ ದಾಖಲಾತಿಗಳಿದ್ದರೂ ಒಂದಿಲ್ಲೊಂದು ಕಾರಣ ಹುಡುಕಿ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ. ಹೊಸದಾಗಿ ನಿಯಮ ಉಲ್ಲಂಘಿಸದೇ ಇದ್ದರೂ ಹಳೆ ಪ್ರಕರಣಗಳಿಗಾದರೂ ದಂಡ ಕಟ್ಟಲೇಬೇಕು. ರಸ್ತೆಯಲ್ಲಿ ಸಂಚಾರಿ ಪೊಲೀಸರ ಬಳಿ ಅಂಗಲಾಚುವ ಬದಲು ಬಿಎಂಟಿಸಿ ಬಸ್‌ನಲ್ಲೇ ಸಂಚಾರ ಮಾಡಿದರೆ ಲೇಸು ಅನ್ನೋ ತೀರ್ಮಾನಕ್ಕೆ ಜನ ಬಂದಿದ್ದಾರೆ.

ಒಟ್ಟಿನಲ್ಲಿ ಮೆಟ್ರೋ ಆರಂಭವಾದ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿತ್ತು. ಇದೀಗ ಕೇಂದ್ರ ಸರ್ಕಾರ ತಂದಿರುವ ಹೆವಿ ಫೈನ್‌ನಿಂದ ಬಿಎಂಟಿಸಿ ಅಂತೂ ಲಾಭ ಪಡೆದಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬಿಎಂಟಿಸಿಗೆ ಜನ ಬಂದರೆ ಆದಾಯವೂ ಹರಿದುಬರುತ್ತೆ, ನಗರದಲ್ಲಿ ಟ್ರಾಫಿಕ್ ಕಿರಿಕಿರಿ ಕೂಡ ತಪ್ಪಲಿದೆ.
ಕೃಷ್ಣಮೂರ್ತಿ ಟಿ ವಿ 5 ಬೆಂಗಳಳೂರು

Recommended For You

About the Author: Dayakar

Leave a Reply

Your email address will not be published. Required fields are marked *