ಈತನ ತಲೆಗೆ ಹೊಂದಿಕೊಳ್ಳುವ ಹೆಲ್ಮೆಟ್​​ ಭಾರತದಲ್ಲೇ ಲಭ್ಯವಿಲ್ಲ!

ಗುಜರಾತ್, ಅಹಮ್ಮದಾಬಾದ್: ದೇಶದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದಾಗಿ ಎಲ್ಲಕಡೆ ನಿಯಮ ಪಾಲನೆ ಮಾಡುವಂತ ಜಾಗೃತಿ ಮೂಡುತ್ತಿದೆ. ಇದಕ್ಕೆ ಕಾರಣ ಭಾರೀ ದಂಡಕ್ಕೆ ಬೆಚ್ಚಿ ಬಿದ್ದಿರುವ ವಾಹನ ಸವಾರರು, ನಿಯಮ ಪಾಲಿಸಲು ಮುಂದಾಗಿದ್ದಾರೆ. ಆದರೆ, ಗುಜರಾತ್​ನ ಅಹಮ್ಮದಾಬಾದ್‌ ಮೂಲದ ಝಾಕಿರ್ ಮೆಮನ್‌ ಎಂಬ ವ್ಯಕ್ತಿಯೂ ಹೆಲ್ಮೆಟ್ ಧರಿಸದೇ ಇದ್ದರು ಸಹ ಯಾವುದೇ ದಂಡ ಕಟ್ಟುವಂತಿಲ್ಲ.

ಟ್ರಾಫಿಕ್​​ನಲ್ಲಿ ಅತೀ ಹೆಚ್ಚು​ ​ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಹೆಲ್ಮೆಟ್ ರಹಿತ ಪ್ರಯಾಣವೇ ಹೆಚ್ಚಾಗಿ ಕಂಡು ಬಂದಿದೆ. ಕೆಲವು ನಗರಗಳಲ್ಲಿ ಹೆಲ್ಮೆಟ್ ಹಾಕದವರಿಗೆ ಪೊಲೀಸರು ಸ್ಥಳದಲ್ಲೇ ಹಣ ಪಡೆದು ಹೆಲ್ಮೆಟ್ ನೀಡುತ್ತಿದ್ದಾರೆ. ಆದರೆ, ಝಾಕೀರ್ ಮೆಮನ್ ಅವರು ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಿದ್ದಾರೆ. ಇಲ್ಲಿತನಕ ಅವರಿಗೆ ದಂಡ ಹಾಕಿಲ್ಲ, ಇದಕ್ಕೆ ಪ್ರಮುಖ ಕಾರಣ ಅವರ ತಲೆಗೆ ಹೊಂದಿಕೊಳ್ಳುವಂತಹ ಹೆಲ್ಮೆಟ್ ಭಾರತದಲ್ಲಿ ಲಭ್ಯವಾಗಿಲ್ಲ!

ಝಾಕೀರ್‌ ಅವರನ್ನು ಇತ್ತೀಚೆಗೆ ಪೊಲೀಸರು ನಿಲ್ಲಿಸಿ ಹೆಲ್ಮೆಟ್ ಹಾಕದ ಕಾರಣಕ್ಕೆ ದಂಡ ಹಾಕಲು ಮುಂದಾಗಿದ್ದರು. ಆದರೆ ಆತ ಮಾತ್ರ ತಕ್ಷಣವೇ ತಮ್ಮ ಸಮಸ್ಯೆಯನ್ನು ಸಂಚಾರಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ನನ್ನ ತಲೆ ಗಾತ್ರ ದೊಡ್ಡದಿದೆ, ಹೀಗಾಗಿ ಈ ಗಾತ್ರಕ್ಕೆ ತಕ್ಕ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗಿಲ್ಲ ಎಂದು ಟ್ರಾಫಿಕ್​ ಪೊಲೀಸರ ಬಳಿ ವಿವರಿಸಿದ್ದಾರೆ.

ಸದ್ಯ ಇವರ ಮಾತು ಕೇಳಿಸಿಕೊಂಡಿರುವ ಟ್ರಾಫಿಕ್ ಇನ್ಸ್‌ಪೆಕ್ಟರ್ ವಾಹನದ ಇತರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಡ್ರೈವಿಂಗ್ ಲೈಸೆನ್ಸ್, ಎಮಿಶನ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಝಾಕೀರ್ ಇಟ್ಟುಕೊಂಡಿದ್ದಾರೆ. ಇಷ್ಟೇ ಅಲ್ಲ, ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಹೀಗಾಗಿ ಅವರಿಗೆ ಹೆಲ್ಮೆಟ್ ರಹಿತ ಪ್ರಯಾಣಕ್ಕೆ ದಂಡ ಹಾಕುವುದಿಲ್ಲ ಎಂದು ಟ್ರಾಫಿಕ್​ ಪೊಲೀಸ ಅಧಿಕಾರಿ ತಿಳಿಸಿದ್ದಾರೆ.

ನನ್ನ ಬಳಿ ವಾಹನ ಚಾಲನೆಗೆ ಬೇಕಾದ ಎಲ್ಲಾ ದಾಖಲೆಗಳಿವೆ. ಇನ್ನು ನಾನು ಕಾನೂನನ್ನು ಗೌರವಿಸುತ್ತೇನೆ. ಆದರೆ, ಹೆಲ್ಮೆಟ್ ಕುರಿತು ನನ್ನಿಂದ ಏನು ಮಾಡಲು ಸಾಧ್ಯವಿಲ್ಲ. ಸಾಕಷ್ಟು ಕಡೆ ಹೆಲ್ಮೆಟ್ ಮಳಿಗೆಗಳಲ್ಲಿ ವಿಚಾರಿಸಿದ್ದೇನೆ. ನನ್ನ ಬುರುಡೆಗೆ ಹೊಂದಿಕೊಳ್ಳುವಂತ ಹೆಲ್ಮೆಟ್ ಸಿಕ್ಕಿಲ್ಲ, ಈ ಬಗ್ಗೆ ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದಿದ್ದೇನೆ ಎಂದು ಝಾಕಿರ್ ಮೆಮನ್‌ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *