ಪ್ರತ್ಯೇಕ ಜಿಲ್ಲೆಗಾಗಿ ಪಕ್ಷಾತೀತವಾಗಿ ಹೋರಾಡುತ್ತೇವೆ – ಕಂಪ್ಲಿ ಗಣೇಶ್

ಬಳ್ಳಾರಿ: ತುಂಬಾ ದಿನದ ನಂತರ ಕಂಪ್ಲಿ ಗಣೇಶ್ ಮಾಧ್ಯಮದ ಜೊತೆ ಮಾತನಾಡಿದ್ದು, ವಿಜಯನಗರ ಜಿಲ್ಲೆ ಆಗಬೇಕೆಂಬುದು ನಮ್ಮ ಕನಸು, ಹೀಗಾಗಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತುಮುಂದುವರೆಸಿದ ಕಂಪ್ಲಿ ಗಣೇಶ್, ಕಂಪ್ಲಿ ಕ್ಷೇತ್ರ ಕೂಡ ವಿಜಯನಗರಕ್ಕೆ ಸೇರಿಸಲು ಮನವಿ ಮಾಡುತ್ತೇವೆ. ಶಾಸಕ ಆನಂದ್ ಸಿಂಗ್ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅದೊಂದು ಕೆಟ್ಟ ಘಳಿಗೆ ಅಷ್ಟೆ ಎಂದು ಹೇಳಿದ್ದಾರೆ.

ಇನ್ನು ವಿಜಯನಗರ ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹಿಸಿ ಇಂದು ಬೆಳಗ್ಗೆ 10:30ಕ್ಕೆ ಮಠಾಧೀಶರ ನಿಯೋಗವು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದು, ಉಜ್ಜೈನಿ ಪೀಠದ ಶ್ರೀ ಉಜ್ಜೈನಿ ಜಗದ್ಗುರುಗಳು, ಚಾನೆಕೋಟೆ ಸ್ವಾಮೀಜಿಗಳು, ಹೊಸಪೇಟೆ ಕೊಟ್ಟೂರು ಮಠದ ಡಾ.ಸಂಗನಬಸವ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಪ್ರತ್ಯೇಕ ಜಿಲ್ಲೆಗಾಗಿ ಮನವಿ ಸಲ್ಲಿಸಲಿದ್ದಾರೆ.

ಅಲ್ಲದೇ ಆನಂದ್ ಸಿಂಗ್ ಬೆಂಬಲಿಗರು, ಮಾಜಿ ಶಾಸಕರಾದ ನೇಮಿರಾಜ್ ನಾಯ್ಕ್, ಚಂದ್ರಾನಾಯ್ಕ್, ರತನ್ ಸಿಂಗ್, ಸಿರಾಜ್ ಶೇಕ್, ಎಂಎಲ್​ಸಿ ಕೆಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಅವರು ಸಿಎಂ ಭೇಟಿಯಾಗಲಿದ್ದಾರೆ.

Recommended For You

About the Author: Shravani Bhat

Leave a Reply

Your email address will not be published. Required fields are marked *