ಕಂಪ್ಲಿ ಗಣೇಶ್- ಆನಂದ್ ಸಿಂಗ್ ಮುಖಾಮುಖಿ: ಮಾತನಾಡಿದ್ರಾ ಬಳ್ಳಾರಿ ಕಲಿಗಳು..?

ಬೆಂಗಳೂರು: ಈಗಲ್‌ಟನ್ ರೆಸಾರ್ಟ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್, ಇಂದು ಗೃಹಕಚೇರಿ ಕೃಷ್ಣಾದಲ್ಲಿ ಪರಸ್ಪರ ಮುಖಾಮುಖಿಯಾದರೂ ಕೂಡ ಕೊಂಚ ಹೊತ್ತು ಮಾತನಾಡದೇ ಹಾಗೇ ಕುಳಿತಿದ್ದರು. ಕೊನೆಗೆ ಸಿಎಂ ಗೃಹ ಕಚೇರಿಯಿಂದ ತೆರಳುವ ಮುನ್ನ ಕಂಪ್ಲಿ ಗಣೇಶ್ ಆನಂದ್ ಸಿಂಗ್‌ಗೆ ಹೇಳಿ ಹೊರಟರು.  ನಾನು ಹೊರಡ್ತೀನಿ ಎಂದು ಕಂಪ್ಲಿ ಗಣೇಶ್ ಆನಂದ್ ಸಿಂಗ್ ಕೈಕುಲುಕಿದ್ದು, ಈ ವೇಳೆ ಆನಂದ್ ಸಿಂಗ್ ಕಂಪ್ಲಿ ಗಣೇಶ್ ಬೆನ್ನು ತಟ್ಟಿ ಆಯ್ತು ಎಂದಿದ್ದಾರೆ. ಕೊಂಚ ಅಸಮಾಧಾನವಿದ್ದರೂ, ಭೇಟಿ ಬಳಿಕ ಕೈಕುಲುಕಿ ಮಾತನಾಡಿದ್ದಾರೆ.

ಇನ್ನು ಈ ವೇಳೆ ಡಿಕೆಶಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಕಂಪ್ಲಿ ಗಣೇಶ್ ಮಾತನಾಡಿದ್ದು, ಬಿಜೆಪಿಯಲ್ಲೂ ಹಲವು ಶ್ರೀಮಂತರಿದ್ದಾರೆ. ಅವರ ಮೇಲೆ ಯಾಕೆ ದೂರು, ದಾಳಿ ಆಗಲ್ಲ? ಡಿ.ಕೆ.ಶಿ ಅವರು ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಅಂದ್ರೆ ಕಾನೂನು ಹೋರಾಟ ಮಾಡ್ಕೋತಾರೆ. ಅದಕ್ಕಾಗಿ ಅವರಿಗೆ ಇಡಿ, ಐಟಿ ಮೂಲಕ ಕಿರುಕುಳ ಕೊಡೋದು ಸರಿಯಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಶಾಸಕರ ಅನುದಾನಗಳಿಗೆ ಸಿಎಂ ಕೊಕ್ಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗಣೇಶ್,  ಬಿಜೆಪಿ ಸರ್ಕಾರ ನಮ್ಮ ಅನುದಾನಗಳನ್ನು ಕಡಿತ ಮಾಡಿದೆ. ಈ ಹಿಂದಿನ ಸರ್ಕಾರಗಳು ಹೀಗೆ ಅನುದಾನಗಳನ್ನು ಕಟ್ ಮಾಡಿಲ್ಲ. ನಮ್ಮ ಕ್ಷೇತ್ರಗಳಿಗೆ ಬಿಡುಗಡೆ ಆಗಿದ್ದ ಅನುದಾನಗಳನ್ನು ನಿಲ್ಲಿಸಲಾಗಿದೆ. ಇವತ್ತು ಸಿಎಂ ಅವರಿಗೆ ಈ ಬಗ್ಗೆ ಮನವಿ ಮಾಡಿಕೊಂಡಿದ್ದೇವೆ. ಅನುದಾನ ಸ್ಥಗಿತದಿಂದ ನಮ್ಮ ಕ್ಷೇತ್ರದ ಹಲವು ಕಾರ್ಯಕ್ರಮಗಳು ನಿಂತು ಹೋಗಿವೆ ಎಂದು ಹೇಳಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *